ನವದೆಹಲಿ:ಕರ್ನಾಟಕ ಸೇರಿದಂತೆ ದೇಶದಲ್ಲಿ ಒಟ್ಟು 24 ವಿಶ್ವವಿದ್ಯಾಲಯಗಳು ನಕಲಿಯಾಗಿದ್ದು, ಇವುಗಳಲ್ಲಿ ದಾಖಲಾತಿ ಮಾಡಿಕೊಳ್ಳುವ ಮುನ್ನ ಎಚ್ಚರ ವಹಿಸುವುದು ಅಗತ್ಯವಾಗಿದೆ/ಈ 24 ನಕಲಿ ವಿವಿಯ ಕುರಿತು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನೀಡಿರುವ ವರದಿಯ ಬಗ್ಗೆ ಲೋಕಸಭೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
‘ಯುಜಿಸಿ 24 ಸ್ವಯಂ ಘೋಷಿತ ಶಿಕ್ಷಣ ಸಂಸ್ಥೆಗಳನ್ನು ನಕಲಿ ಎಂದು ಘೋಷಿಸಿದೆ. ವಿದ್ಯಾರ್ಥಿಗಳು, ಪಾಲಕರು, ಸಾಮಾನ್ಯ ಜನರು ಮತ್ತು ಮೀಡಿಯಾಗಳು ಮಾಡಿರುವ ದೂರಿನ ಆಧಾರದ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ನಕಲಿ ಅಥವಾ ಮಾನ್ಯತೆ ಪಡೆಯದ ವಿಶ್ವವಿದ್ಯಾಲಯಗಳಿಗೆ ನೋಟಿಸ್​ ನೀಡಲಾಗಿದ್ದು, ಅವುಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಪ್ರಧಾನ್​ ವಿವರಿಸಿದ್ದಾರೆ.ನಕಲಿ ವಿವಿಗಳ ಪಟ್ಟಿ ಇಲ್ಲಿದೆ.
ಕರ್ನಾಟಕ:ಬಡಗನ್ವಿ ಸರ್ಕಾರ್ ವರ್ಲ್ಡ್ ಓಪನ್ ಯೂನಿವರ್ಸಿಟಿ ಎಜುಕೇಶನ್ ಸೊಸೈಟಿ (ಬೆಳಗಾವಿಯ ಗೋಕಾಕ್​ನಲ್ಲಿದೆ)
ಉತ್ತರ ಪ್ರದೇಶ:*ವಾರಣಾಸಿಯ ಸಂಸ್ಕೃತ ವಿಶ್ವವಿದ್ಯಾಲಯ;* ಮಹಿಳಾ ಗ್ರಾಮ ವಿದ್ಯಾಪೀಠ, ಅಲಹಾಬಾದ್;* ಗಾಂಧಿ ಹಿಂದಿ ವಿದ್ಯಾಪೀಠ, ಅಲಹಾಬಾದ್;* ನ್ಯಾಷನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪತಿ, ಕಾನ್ಪುರ;* ನೇತಾಜಿ ಸುಭಾಷ್ ಚಂದ್ರ ಬೋಸ್ ಮುಕ್ತ ವಿಶ್ವವಿದ್ಯಾಲಯ, ಅಲಿಘರ್;* ಉತ್ತರ ಪ್ರದೇಶ ವಿಶ್ವವಿದ್ಯಾಲಯ, ಮಥುರಾ;* ಮಹಾರಾಣಾ ಪ್ರತಾಪ್ ಶಿಕ್ಷಾ ನಿಕೇತನ ವಿಶ್ವವಿದ್ಯಾಲಯ, ಪ್ರತಾಪಘರ್* ಇಂದ್ರಪ್ರಸ್ಥ ಶಿಕ್ಷಾ ಪರಿಷತ್, ನೋಯ್ಡಾ
ನವದೆಹಲಿ:* ಕಮರ್ಷಿಯಲ್ ಯೂನಿವರ್ಸಿಟಿ ಲಿಮಿಟೆಡ್,* ಯುನೈಟೆಡ್ ನೇಷನ್ಸ್ ಯೂನಿವರ್ಸಿಟಿ,* ವೊಕೇಷನಲ್ ಯೂನಿವರ್ಸಿಟಿ,* ಎಡಿಆರ್ ಸೆಂಟ್ರಿಕ್ ಜುರಿಡಿಕಲ್ ವಿಶ್ವವಿದ್ಯಾಲಯ,* ಇಂಡಿಯನ್ ಇನ್ ಸ್ಟಿಟ್ಯೂಷನ್ ಆಫ್ ಸೈನ್ಸ್ ಅಂಡ್ ಎಂಜಿನಿಯರಿಂಗ್,* ವಿಶ್ವಕರ್ಮ ಓಪನ್ ಯೂನಿವರ್ಸಿಟಿ ಫಾರ್ ಸೆಲ್ಫ್ ಎಂಪ್ಲಾಯ್ ಮೆಂಟ್,* ಅಧ್ಯತ್ಮಿಕ್ ವಿಶ್ವವಿದ್ಯಾಲಯ (ಆಧ್ಯಾತ್ಮಿಕ ವಿಶ್ವವಿದ್ಯಾಲಯ)
ಪಶ್ಚಿಮ ಬಂಗಾಳ:* ಕೋಲ್ಕತ್ತಾದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್* ಇನ್​ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಅಂಡ್ ರಿಸರ್ಚ್
ಒಡಿಶಾ:* ರೂರ್ಕೆಲಾದ ನವಭಾರತ್ ಶಿಕ್ಷಾ ಪರಿಷತ್* ಉತ್ತರ ಒರಿಸ್ಸಾ ಕೃಷಿ ಮತ್ತು ತಂತ್ರಜ್ಞಾನ ವಿವಿ
ಪುದುಚೇರಿ:ಶ್ರೀ ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಶನ್
ಮಹಾರಾಷ್ಟ್ರ:ಕ್ರೈಸ್ಟ್ ಟೆಸ್ಟಮೆಂಟ್ ಡೀಮ್ಡ್ ವಿಶ್ವವಿದ್ಯಾಲಯ
ಆಂಧ್ರಪ್ರದೇಶ;ರಾಜಾ ಅರೇಬಿಕ್ ವಿಶ್ವವಿದ್ಯಾಲಯ, ನಾಗ್ಪುರ;
ಕೇರಳಸೇಂಟ್ ಜಾನ್ಸ್ ವಿಶ್ವವಿದ್ಯಾಲಯ
ಇದಲ್ಲದೆ ದೆಹಲಿಯ ಕುತುಬ್ ಎನ್ ಕ್ಲೇವ್ ನ ಭಾರತೀಯ ಶಿಕ್ಷಣ ಪರಿಷತ್, ಉತ್ತರ ಪ್ರದೇಶದ ಲಖನೌನಲ್ಲಿರುವ ಭಾರತೀಯ ಯೋಜನೆ ಮತ್ತು ನಿರ್ವಹಣಾ ಸಂಸ್ಥೆ (ಐಐಪಿಎಂ) ಎಂಬ ಇನ್ನೆರಡು ಸಂಸ್ಥೆಗಳು ಯುಜಿಸಿ ಕಾಯ್ದೆ, 1956ರ ಉಲ್ಲಂಘನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಎರಡು ವರ್ಷದಲ್ಲಿ 24 ಸಾವಿರ ಮಕ್ಕಳ ಆತ್ಮಹತ್ಯೆ: ಕೇಂದ್ರದಿಂದ ಸ್ಫೋಟಕ ಮಾಹಿತಿ, ಕಾರಣವೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − three =
Remember me
