ನವದೆಹಲಿ:ಭಾರತದ ಕೋವಿಡ್-19 ಲಸಿಕೆ ಅಭಿಯಾನಕ್ಕೆ ನೆರವು ನೀಡಲು ಅಮೆರಿಕ ಧಾವಿಸಿದೆ. ಈ ಕಾರ್ಯಕ್ರಮಕ್ಕೆ ತಾನು 25 ಮಿಲಿಯನ್ ಡಾಲರ್ (ಸುಮಾರು 186 ಕೋಟಿ ರೂಪಾಯಿ) ಆರ್ಥಿಕ ನೆರವು ನೀಡುವುದಾಗಿ ಅಮೆರಿಕ ಹೇಳಿದೆ.ಈ ಕುರಿತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಪ್ರಕಟಿಸಿದ್ದು, ಭಾರತಕ್ಕೆ ನೆರವು ನೀಡುವುದಾಗಿ ಹೇಳಿದ್ದಾರೆ. ಬ್ಲಿಂಕನ್ ಅವರ ಜೊತೆಗೆ ಸವಿಸ್ತಾರವಾಗಿ ಮಾತುಕತೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಅಮೆರಿಕ ಭಾರತಕ್ಕೆ ತೋರಿದ ವಿಶೇಷ ನೆರವನ್ನು ಪ್ರಸ್ತಾಪಿಸಿ ಧನ್ಯವಾದ ಹೇಳಿದರು.ಕೋವಿಡ್ ಸಾಂಕ್ರಾಮಿಕ ಮತ್ತು ಅದರಿಂದಾಗಿರುವ ನಕಾರಾತ್ಮಕ ಪರಿಣಾಮಗಳನ್ನು ನಿರ್ವಹಿಸುವ ಕುರಿತು ಮತ್ತಷ್ಟು ಸಹಕಾರಕ್ಕೆ ಉತ್ತೇಜನ ನೀಡುವ ಸಂಬಂಧ ನಡೆದಿರುವ ಈ ಮಾತುಕತೆಯಲ್ಲಿ ನೆರವು ನೀಡಲು ಅಮೆರಿಕ ಮುಂದಾಗಿರುವುದಾಗಿ ಪ್ರಕಟಿಸಲಾಗಿದೆ ಎಂದು ಅವರು ವಿವರಿಸಿದರು.ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಅಮೆರಿಕ ಭಾರತಕ್ಕೆ ತೋರಿದ ವಿಶೇಷ ನೆರವನ್ನು ಪ್ರಸ್ತಾಪಿಸಿ ಧನ್ಯವಾದ ಹೇಳಿದ ಜೈಶಂಕರ್‌ ಅವರು, ಭಾರತದಲ್ಲಿ ಲಸಿಕೆ ಉತ್ಪಾದನೆಗೆ ಕಚ್ಚಾ ಸಾಮಗ್ರಿಗಳ ಪೂರೈಕೆ ಮಾಡಿದ ಅಮೆರಿಕಕ್ಕೆ ವಿದೇಶಾಂಗ ಸಚಿವರು ಧನ್ಯವಾದ ಹೇಳಿದರು.
ಮಾಹಿತಿ ನೀಡುತ್ತಿರುವ ಬ್ಲಿಂಕನ್‌:
Great speaking at the@EducationUSAForum! As someone who lived & studied abroad, I know experiencing the world from different cultures is something you carry for life. We're proud to welcome international students who bring their perspectives to campus, benefiting all students.pic.twitter.com/Eo3T9C4Qks— Secretary Antony Blinken (@SecBlinken)July 28, 2021
Great speaking at the@EducationUSAForum! As someone who lived & studied abroad, I know experiencing the world from different cultures is something you carry for life. We're proud to welcome international students who bring their perspectives to campus, benefiting all students.pic.twitter.com/Eo3T9C4Qks
VIDEO: ಇಸ್ಲಾಂಗೆ ವಿರುದ್ಧವಾಗಿ ಜನರನ್ನು ನಗಿಸುತ್ತಿಯಾ ಎಂದು ಖ್ಯಾತ ಹಾಸ್ಯನಟನನ್ನು ಗುಂಡಿಕ್ಕಿ ಕೊಂದರು!

VIDEO: ಇಸ್ಲಾಂಗೆ ವಿರುದ್ಧವಾಗಿ ಜನರನ್ನು ನಗಿಸುತ್ತಿಯಾ ಎಂದು ಖ್ಯಾತ ಹಾಸ್ಯನಟನನ್ನು ಗುಂಡಿಕ್ಕಿ ಕೊಂದರು!
34 ಕೋಟಿ ರೂ. ಬ್ಲೂಫಿಲ್ಮಂ ದಂಧೆಗಿದ್ಯಾ ಶಿಲ್ಪಾ ಲಿಂಕ್‌? ನಟಿಗೆ ಕ್ಲೀನ್‌ಚಿಟ್‌ ನೀಡಲ್ಲ ಎಂದ ಪೊಲೀಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 5 =
Remember me
