ಸೂರತ್​ (ಗುಜರಾತ್):ಕಳ್ಳನೋಟು ಸಾಗಣೆದಾರರು ಸಿಕ್ಕಿಬೀಳದಂತೆ ಮಾಡುವ ಕಿತಾಪತಿಗಳು ಅಷ್ಟಿಷ್ಟಲ್ಲ. ಆದರೂ ಹಲವು ಬಾರಿ ಪೊಲೀಸರ ಕೈಗೆ ಸಿಕ್ಕಿಬೀಳುತ್ತಾರೆ. ಗುಜರಾತ್​ನ ಸೂರತ್​ನಲ್ಲಿ ಆಂಬುಲೆನ್ಸ್​ನಲ್ಲಿ ಕಳ್ಳನೋಟು ಸಾಗಣೆ ಮಾಡಿ ಸಿಕ್ಕಿಬಿದ್ದಿದ್ದಾರೆ ಖದೀಮರು.
ಇಷ್ಟೇ ಆಗಿದ್ದರೆ ಇದು ಸುದ್ದಿನೇ ಆಗುತ್ತಿರಲಿಲ್ಲವೇನೋ. 26 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಕಳ್ಳನೋಟನ್ನು ಇಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಆದರೆ ವಿಚಿತ್ರ ಎಂದರೆ ನೋಡಲು ಥೇಟ್​ ಅಸಲಿ ನೋಟಿನಂತೆಯೇ ಇದ್ದ ಈ ನಕಲಿ ನೋಟನ್ನು ಸೂಕ್ಷ್ಮವಾಗಿ ಗಮನಿಸಿದಾಗ ಪೊಲೀಸರೇ ಕಕ್ಕಾಬಿಕ್ಕಿಯಾಗಿದ್ದಾರೆ.
ಸೂರತ್​ನ ಆಸ್ಪತ್ರೆಯೊಂದ ಅಂಬುಲೆನ್ಸ್​ನಲ್ಲಿ ಸಾಗಿಸುತ್ತಿದ್ದ ಈ ಕಳ್ಳನೋಟನ್ನು ಪರಿಶೀಲಿಸಿದಾಗ ಅದರಲ್ಲಿ ರಿಸರ್ವ್​ ಬ್ಯಾಂಕ್​ ಬದಲು ರಿವರ್ಸ್​ ಬ್ಯಾಂಕ್​ ಆಫ್​ ಇಂಡಿಯಾ ಎಂದು ಪ್ರಿಂಟ್​ ಮಾಡಲಾಗಿತ್ತು! ಕಳ್ಳನೋಟು ಸಾಗಾಟ ಮಾಡುತ್ತಿರುವ ಕುರಿತು ಖಚಿತ ಸುಳಿವಿನ ಮೇರೆಗೆ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ಸೂರತ್​ನ ಕಮ್ರೇಜ್ ಪ್ರದೇಶದಲ್ಲಿ ಆಂಬುಲೆನ್ಸ್​ ತಡೆದು ನಿಲ್ಲಿಸಿದ್ದರು.
ಅದರಲ್ಲಿ 1,290 ಬಂಡಲ್ ನೋಟುಗಳನ್ನು ಆರು ಪೆಟ್ಟಿಗೆಗಳಲ್ಲಿ ಇಡಲಾಗಿತ್ತು. ಅವೆಲ್ಲವೂ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳಾಗಿದ್ದವು. ಅದನ್ನು ಪೊಲೀಸರು ಪರಿಶೀಲಿಸಿದಾಗ ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ ಬದಲಿಗೆ ‘ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಮುದ್ರಿಸಿರುವುದು ಕಂಡುಬಂದಿದೆ. ಯಾರಿಗೂ ಸಂದೇಹ ಬರಬಾರದು ಎನ್ನುವ ಕಾರಣಕ್ಕೆ ಈ ಆಂಬುಲೆನ್ಸ್​ ಹೊರಗೆ ‘ಗೋ ಮಾತಾ ರಾಷ್ಟ್ರ ಮಾತಾ’ ಎಂದೂ ಬರೆಯಲಾಗಿತ್ತು. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ (ಏಜೆನ್ಸೀಸ್​)
ಸಿಎಫ್​ಐ ಕಚೇರಿ ಮೇಲೆ ದಾಳಿ: ಯುವಕರ ಬ್ರೇನ್​ವಾಷ್​ಗೆ ‘ನರಮೇಧ’- ಪೊಲೀಸರಿಗೆ ಸಿಕ್ಕಿತು ಬೆಚ್ಚಿಬೀಳಿಸೋ ಪತ್ರ!

ಪತ್ನಿಯ ದೌರ್ಜನ್ಯ ಎಳೆಎಳೆಯಾಗಿ ಬಿಚ್ಚಿಟ್ಟ ಪತಿಯಂದಿರು: ಪುರುಷ ಆಯೋಗ ರಚನೆಗೆ ಕೋರಿ ಭಾರಿ ಪ್ರತಿಭಟನೆ

ಡಿಜಿಪಿಯ ಆದೇಶವನ್ನೇ ಉಲ್ಲಂಘಿಸಿ ಪಿಎಫ್​ಐ ಮೇಲಿನ 1600 ಕೇಸ್​ ವಾಪಸ್​ ಮಾಡಿದ್ದ ಸಿದ್ದರಾಮಯ್ಯ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 18 =
Remember me
