ಫತೇಪುರ್‌ (ಉತ್ತರ ಪ್ರದೇಶ):ಒಂದು ಸಾಮಾನ್ಯ ಆಟೊದಲ್ಲಿ ಅಬ್ಬಬ್ಬಾ ಎಂದರೆ ಎಷ್ಟು ಮಂದಿ ಕುಳಿತುಕೊಳ್ಳಲು ಸಾಧ್ಯ? 4, 5 ಬೇಡ ಹೆಗ್ಹೇಗೋ ಅಡ್ಜಸ್ಟ್​ ಮಾಡಿಕೊಂಡು 6 ಇಲ್ಲವೇ 7 ಮಂದಿ ಕುಳಿತುಕೊಳ್ಳಬಹುದೇನೋ. ಆದರೆ ಉತ್ತರ ಪ್ರದೇಶದ ಪೊಲೀಸರನ್ನೇ ಬೆಚ್ಚಿಬೀಳಿಸೋ ಮಹಾನ್​ ಆಟೋ ಚಾಲಕ ತನ್ನ ಆಟೋದಲ್ಲಿ ಕುಳ್ಳರಿಸಿಕೊಂಡು ಹೋಗಿರೋ ಜನರು ಎಷ್ಟೆಂದು ಊಹಿಸಬಲ್ಲಿರಾ?
ಬರೋಬ್ಬರಿ 27 ಮಂದಿಯನ್ನು ಆಟೋದಲ್ಲಿ ಕುಳ್ಳರಿಸಿಕೊಂಡು ಹೋಗಿದ್ದಾನೆ. ಬಹುಶಃ ಹೀಗೆ ಎಂದು ಯಾರಾದರೂ ನಿಮಗೆ ಸುದ್ದಿ ಮುಟ್ಟಿಸಿದ್ದರೆ ನೀವು ಅದನ್ನು ನಂಬುತ್ತಿರಲಿಲ್ಲವೇನೋ, ಏನೋ ಸುಳ್ಳು ಹೇಳುತ್ತಿದ್ದಾರೆ ಎಂದುಕೊಳ್ಳುತ್ತಿದ್ದಿರಬಹುದು. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರೋ ಈ ವಿಡಿಯೋ ನೋಡಿದ್ರೆ ಸತ್ಯ ನಿಮಗೇ ತಿಳಿಯುತ್ತೆ.
ಹಿರಿಯರು ಮತ್ತು ಮಕ್ಕಳು ಸೇರಿದಂತೆ 26 ಮಂದಿ ಪ್ರಯಾಣಿಕರು ಮತ್ತು ಚಾಲಕ ಸೇರಿ 27 ಮಂದಿ ಈ ಆಟೋದಲ್ಲಿ ಇದ್ದರು. ಫತೇಪುರ್‌ನ ಬಿಂಡ್ಕಿ ಕೊಟ್ವಾಲಿ ಪ್ರದೇಶದಿಂದ ಅತಿ ವೇಗದಲ್ಲಿ ಈ ಆಟೋ ಬರುತ್ತಿತ್ತು. ಇಷ್ಟು ವೇಗದಲ್ಲಿ ಚಾಲನೆ ಮಾಡಿಕೊಂಡು ಬರುತ್ತಿದ್ದ ಆಟೋ ಕಂಡು ಪೊಲೀಸರು ಅದನ್ನು ಹಿಂಬಾಲಿಸಿದ್ದಾರೆ. ಅತಿಯಾದ ವೇಗ ಮತ್ರವಲ್ಲದೇ ಜನರು ಕೂಡ ಕಿಕ್ಕಿರಿದು ತುಂಬಿರುವುದನ್ನು ನೋಡಿ ಅದನ್ನು ಕೊನೆಗೂ ತಡೆದು ನಿಲ್ಲಿಸಿದ್ದಾರೆ.
ಆಟೋದಲ್ಲಿ ಅನೇಕ ಮಂದಿ ಪ್ರಯಾಣಿಕರು ಇರುವುದು ಪೊಲೀಸರಿಗೆ ತಿಳಿದಿತ್ತು. ಆದರೆ ಅವರು ಕೂಡ 27 ಮಂದಿಯನ್ನು ಖಂಡಿತವಾಗಿಯೂ ಊಹಿಸಿರಲಿಕ್ಕಿಲ್ಲ, ಅವರ ಸರ್ವೀಸ್​ನಲ್ಲಿಯೇ ಇಂಥದ್ದೊಂದು ಘಟನೆಯನ್ನು ಕಂಡಿರಲಿಕ್ಕೂ ಇಲ್ಲ. ಒಬ್ಬೊಬ್ಬರ ತಲೆಯನ್ನು ಎಣಿಸುತ್ತಾ ಹೋದ ಪೊಲೀಸರೇ ಮೂರ್ಛೆ ಹೋಗುವಂತೆ ಆಗಿದೆ.
ಆ ಬಳಿಕ ಆಟೋವನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ನಡೆಯುತ್ತಿದೆ.
ನೀವೂ ನೋಡಿ ಈ ವಿಡಿಯೋ:
Miracle of Allah from#UttarPradesh🤲❤27 people in one auto, returning from Eid prayers, stopped by police.
*Standing Ovation*#EidAdhaMubarakpic.twitter.com/my4v3dkPCy
— Zenral Bazwa 🇵🇰 (Parody) (@ZenralBazwa)July 10, 2022

ಬುಡಕಟ್ಟು ವಿದ್ಯಾರ್ಥಿಗಳ ಹಣ ದೇಶವಿರೋಧಿ ಚಟುವಟಿಕೆಗೆ? ಮೇಧಾ ಪಾಟ್ಕರ್​ ವಿರುದ್ಧ ದಾಖಲಾಯ್ತು ಎಫ್​ಐಆರ್​!

‘ಹಂಸನಂತೆ ಇದ್ದ ಹಂಸಲೇಖರನ್ನು ಕಂಸನಂತೆ ಮಾಡಿದ್ದೀರಿ, ಸಾಹಿತಿಗಳಿಗೆ ಬುದ್ಧಿ ಹೇಳಿ ಇಲ್ಲವೇ ಕಾಲನ ಉಪಚಾರಕ್ಕೆ ಸಿದ್ಧರಾಗಿ’

ಗನ್​ಮ್ಯಾನ್​ಗೆ ಪಿಎಸ್​ಐ ಪಟ್ಟ? ಶಾಸಕನ ಪುತ್ರ, ಸಹೋದರನ ಸುತ್ತ ಅಕ್ರಮದ ಘಾಟು- ಬಾಯಿಬಿಟ್ಟ ಕಿಂಗ್​ಪಿನ್​

Sign in to your account
Please enter an answer in digits:3 × four =
Remember me
