ಕೋಲ್ಕತಾ:ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಬಿಗ್​ ಶಾಕ್​ ನೀಡಿದೆ. ಘನ ಹಾಗೂ ದ್ರವ ತ್ಯಾಜ್ಯದ ಉತ್ಪಾದನೆ ಹಾಗೂ ಸಂಸ್ಕರಣೆಯನ್ನು ಸೂಕ್ತವಾಗಿ ನಿರ್ವಹಣೆ ಮಾಡದೇ ಇರುವುದಕ್ಕೆ ಸರ್ಕಾರಕ್ಕೆ ಮೂವರೆ ಸಾವಿರ ಕೋಟಿ ರೂ. ದಂಡ ವಿಧಿಸಿದೆ.
ಪಶ್ಚಿಮ ಬಂಗಾಳದ ನಗರ ಪ್ರದೇಶಗಳಲ್ಲಿ ದಿನಕ್ಕೆ 2,758 ಮಿಲಿಯನ್ ಲೀಟರ್ ಕೊಳಚೆ ಉತ್ಪಾದನೆಯಾಗುತ್ತಿದೆ. ಈ ಪೈಕಿ 1,505 ಮಿಲಿಯನ್ ಲೀಟರ್‌ನಷ್ಟು ಕೊಳಚೆ ಸಂಸ್ಕರಿಸುವ ಸಾಮರ್ಥ್ಯವಿದೆ. ಆದರೂ ದಿನಕ್ಕೆ 1,268 ಲೀಟರ್ ನಷ್ಟು ತ್ಯಾಜ್ಯವನ್ನು ಮಾತ್ರವೇ ಸಂಸ್ಕರಿಸಲಾಗುತ್ತಿದ್ದು, ಉಳಿದ 1,490 ಮಿಲಿಯನ್ ಲೀಟರ್ ನಷ್ಟು ತ್ಯಾಜ್ಯ ಹಾಗೆಯೇ ಉಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಿಡಿ ಕಾರಿರುವ ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಎ.ಕೆ.ಗೋಯೆಲ್ ನೇತೃತ್ವದ ಪೀಠ ಈ ದಂಡ ವಿಧಿಸಿದೆ.
ಜನರಿಗಾಗಿ ಮಾಲಿನ್ಯ ಮುಕ್ತ ವಾತಾವರಣ ಕಲ್ಪಿಸುವುದು ಸರ್ಕಾರದ ಸಾಂವಿಧಾನಿಕ ಜವಾಬ್ದಾರಿಯಾಗಿದೆ. ಅದನ್ನು ಬಿಟ್ಟು ಈ ರೀತಿಯ ಬೇಜವಾಬ್ದಾರಿಯಿಂದ ವರ್ತಿಸುವುದು ಸರಿಯಲ್ಲ ಎಂದು ಪೀಠ ಅಭಿಪ್ರಾಯ ಪಟ್ಟಿದೆ. ದಂಡ ಪಾವತಿಗೆ 2 ತಿಂಗಳ ಕಾಲಾವಕಾಶವನ್ನು ನ್ಯಾಯಮಂಡಳಿ ನೀಡಿದೆ.
2022-23ರ ಬಜೆಟ್ ಪ್ರಕಾರ ನಗರಾಭಿವೃದ್ಧಿ ಹಾಗೂ ಪುರಸಭೆಗಳ ವ್ಯವಹಾರದ ಭಾಗವಾಗಿ 12,818 ಕೋಟಿ ಅನುದಾನವಿದ್ದರೂ ರಾಜ್ಯ ಸರ್ಕಾರ ಒಳಚರಂಡಿ ಹಾಗೂ ಘನತ್ಯಾಜ್ಯ ನಿರ್ವಹಣೆಗೆ ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡುತ್ತಿಲ್ಲ ಎಂದು ನ್ಯಾಯಮಂಡಳಿ ಆದೇಶದಲ್ಲಿ ತಿಳಿಸಿದೆ. ಭವಿಷ್ಯದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಗಮನಿಸಿ ಈ ಭಾರಿ ದಂಡವನ್ನು ವಿಧಿಸಲಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ. (ಏಜೆನ್ಸೀಸ್​)
ಗಣೇಶನನ್ನು ಪೂಜಿಸಿದ್ದಕ್ಕೆ ಬಿಜೆಪಿ ನಾಯಕಿ ವಿರುದ್ಧ ಫತ್ವಾ: ಇದೇನಾ ಶಾಂತಿಪ್ರಿಯರ ಕೃತ್ಯ ಎಂದು ರೂಬಿ ಖಾನ್​ ಕಿಡಿ

ದಾಂಪತ್ಯ ಜೀವನಕ್ಕೆ ಅಡಿ ಇಟ್ಟ ಖ್ಯಾತ ನಟಿ ಮಹಾಲಕ್ಷ್ಮೀ, ನಿರ್ಮಾಪಕ ರವೀಂದರ್​ ಚಂದ್ರಶೇಖರನ್​

VIDEO: ಏಷ್ಯಾಕಪ್​ ಮೈದಾನದಲ್ಲಿ ರೊಮಾನ್ಸ್​- ಪಂದ್ಯ ಸೋತರೂ ಗೆಳತಿ ಹೃದಯ ಕದ್ದ ಹಾಂಗ್​ಕಾಂಗ್​ ಆಟಗಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 18 =
Remember me
