ವಯನಾಡ್​ (ಕೇರಳ):ಅತ್ಯಂತ ಆತಂಕಕಾರಿ ಘಟನೆಯೊಂದರಲ್ಲಿ ಖುದ್ದು ಕಾಂಗ್ರೆಸ್ಸಿಗರೇ ಗಾಂಧಿಯವರ ಫೋಟೋ ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಇದು ನಡೆದಿರುವುದು ಖುದ್ದು ಸಂಸದ ರಾಹುಲ್​ಗಾಂಧಿ ಪ್ರತಿನಿಧಿಸುತ್ತಿರುವ ಕೇರಳದ ವಯನಾಡಿನಲ್ಲಿ. ಘಟನೆಗೆ ಸಂಬಂಧಿಸಿದಂತೆ ರಾಹುಲ್​ಗಾಂಧಿ ಆಪ್ತ ಸಹಾಯಕ ಸೇರಿದಂತೆ ನಾಲ್ವರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.
ಆಗಿದ್ದೇನೆಂದರೆ, ರಾಹುಲ್ ಗಾಂಧಿ ಅವರ ಕಚೇರಿಯ ಮೇಲೆ ಇತ್ತೀಚೆಗೆ ಎಸ್‌ಎಫ್‌ಐ ಕಾರ್ಯಕರ್ತರು ದಾಳಿ ನಡೆಸಿದ್ದರು. ಈ ಕ್ಷೇತ್ರದಿಂದ ಗೆಲುವು ಸಾಧಿಸಿ ಸಂಸದರಾದ ಮೇಲೆ ಕ್ಷೇತ್ರದತ್ತ ಗಮನವನ್ನೇ ಹರಿಸುತ್ತಿಲ್ಲ, ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿಲ್ಲ ಎನ್ನುವ ಕಾರಣಕ್ಕೆ ಆಕ್ರೋಶಗೊಂಡಿದ್ದ ಎಸ್‌ಎಫ್‌ಐ ಕಾರ್ಯಕರ್ತರು ಗಲಾಟೆ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್​ ಕಾರ್ಯಕರ್ತರು ಗಲಾಟೆ ಶುರು ಮಾಡಿದ್ದರು.
ಇದಾದ ನಂತರ ನೋಡಿದಾಗ ಅಲ್ಲಿರುವ ಪೀಠೋಪಕರಣಗಳು ಧ್ವಂಸಗೊಂಡಿದ್ದವು, ಮಾತ್ರವಲ್ಲದೇ ಗಾಂಧಿಯವರ ಫೋಟೋ ಕೂಡ ಧ್ವಂಸಗೊಂಡಿತ್ತು. ಇದನ್ನು ಮಾಡಿದ್ದು ತಾವೇ ಎಂದು ತಿಳಿದಿದ್ದರೂ ರಾಹುಲ್​ಗಾಂಧಿ ಆಪ್ತ ಸಹಾಯಕ ರತೀಶ್ ಕುಮಾರ್ ಸೇರಿದಂತೆ ಕಾಂಗ್ರೆಸ್​ ಕಾರ್ಯಕರ್ತರು, ಎಸ್​ಎಫ್​ಐ ಕಾರ್ಯಕರ್ತರೇ ಇದನ್ನು ಮಾಡಿರುವುದಾಗಿ ಆರೋಪಿಸಿದರು. ಇದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ಶುರುವಾಗಿತ್ತು. ಗಾಂಧಿಯವರ ಫೋಟೋ ತಾವು ಧ್ವಂಸಗೊಳಿಸಲಿಲ್ಲ, ಬದಲಿಗೆ ಕಾಂಗ್ರೆಸ್ಸಿಗರೇ ಮಾಡಿರುವುದಾಗಿ ಎಸ್​ಎಫ್​ಐ ಕಾರ್ಯಕರ್ತರು ಹೇಳಿದ್ದರು.
ನಂತರ ಈ ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿತು. ಪೊಲೀಸರು ಅಲ್ಲಿದ್ದ ಸಿಸಿಟಿವಿ ಪರೀಕ್ಷೆ ಮಾಡಿದಾಗ ಸತ್ಯಾಂಶ ಬಯಲುಗೊಂಡಿದೆ. ಗಾಂಧಿ ಫೋಟೋ ಅನ್ನು ಖುದ್ದು ರಾಹುಲ್​ ಗಾಂಧಿ ಅವರ ಆಪ್ತ ಸಹಾಯಕ ರತೀಶ್ ಕುಮಾರ್ ಸೇರಿದಂತೆ ಕಚೇರಿ ಸಿಬ್ಬಂದಿ ರಾಹುಲ್​​ ಎಸ್. ರವಿ, ಕಾಂಗ್ರೆಸ್ ಕಾರ್ಯಕರ್ತರಾದ ನೌಶಾದ್ ಮತ್ತು ಮುಜೀಬ್​ ಧ್ವಂಸಗೊಳಿಸಿರುವುದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಈ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಖುದ್ದು ಕಾಂಗ್ರೆಸ್ ಕಾರ್ಯಕರ್ತ ರತೀಶ್ ಖುದ್ದಾಗಿ ಸಾಕ್ಷಿ ನುಡಿದಿದ್ದು, ಸತ್ಯಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿದೆ.
ಎಸ್​​ಎಫ್​ಐ ಕಾರ್ಯಕರ್ತರು ಕಚೇರಿ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಗಾಂಧಿಯವರ ಭಾವಚಿತ್ರಕ್ಕೆ ಯಾವುದೇ ರೀತಿಯ ಹಾನಿಯಾಗಿರಲಿಲ್ಲ ಎನ್ನುವುದು ವಿಡಿಯೋದಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದರೆ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್​​ ಈ ವಿಚಾರವನ್ನಿಟ್ಟುಕೊಂಡು ವ್ಯಾಪಕವಾಗಿ ಪ್ರಚಾರ ಮಾಡಿ ಗಾಂಧಿ ಅವರ ಭಾವಚಿತ್ರಕ್ಕೆ ಎಸ್​​ಎಫ್​ಐ ಹಾನಿ ಉಂಟು ಮಾಡಿದೆ ಎಂದಿತ್ತು. ಆದರೆ ಇದೀಗ ಸತ್ಯ ಸಾಕ್ಷಿ ಸಹಿತ ಬಯಲುಗೊಂಡಿದೆ(ಏಜೆನ್ಸೀಸ್​)
Kerala | 4 Congress workers incl MP Rahul Gandhi's staff arrested for vandalizing a picture of Mahatma Gandhi in his Wayanand office: Kalpetta police
Congress had earlier alleged that it was SFI workers who vandalized the picture in Congress MP Rahul Gandhi's office in Wayanadhttps://t.co/gN9R6GvkUs
— ANI (@ANI)August 19, 2022

VIDEO: ಈ ಕೆನ್ನೆಗೆ ಆ ಕೆನ್ನೆಯಂತೆ ಮೊಟ್ಟೆಗೆ ಮೊಟ್ಟೆ: ಯೂತ್​ ಕಾಂಗ್ರೆಸ್​ನಿಂದ ಹೀಗೊಂದು ಗಾಂಧಿ ತತ್ವ ಅಭಿಯಾನ- ನಲ್​ಪಾಡ್​ ಹೇಳಿಕೆ

ಆಪರೇಷನ್​ ತಮಿಳುನಾಡು: ರಾಜ್ಯಪಾಲರ ಹುದ್ದೆಗೆ ಸೂಪರ್​ಸ್ಟಾರ್​ ರಜನೀಕಾಂತ್​?

ಕತ್ತೆ ಕಾಯ್​ ಹೋಗು… ಅಂತ ಬಯ್ಯೋ ಮುನ್ನ ಇದನ್ನ ಓದಿ: ಲಕ್ಷ ಲಕ್ಷ ಸಂಪಾದಿಸ್ತಿದ್ದಾರೆ ಈ ಫಾರಿನ್ ರಿಟರ್ನ್ಡ್​ ಟೆಕ್ಕಿ!

VIDEO: ನಾಲ್ಕಂತಸ್ತಿನ ಕಟ್ಟಡ ಕುಸಿತ- ಹಲವರು ಸಿಲುಕಿರುವ ಶಂಕೆ- ಭಯಾನಕ ವಿಡಿಯೋ ಇಲ್ಲಿದೆ ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:7 − six =
Remember me
