ಮೈನಪುರಿ (ಉತ್ತರಪ್ರದೇಶ):ಮನೆಯೊಳಕ್ಕೆ ಏಕಾಏಕಿ ಟ್ರಕ್​ ನುಗ್ಗಿ ನಿವೃತ್ತ ಸಬ್‌ಇನ್‌ಸ್ಪೆಕ್ಟರ್, ಅವರ ಪತ್ನಿ ಸೇರಿದಂತೆ ನಾಲ್ವರು ಮೃತಪಟ್ಟಿರುವ ಭೀಕರ ಘಟನೆ ಉತ್ತರ ಪ್ರದೇಶದ ಮೈನಪುರಿಯಲ್ಲಿ ನಡೆದಿದೆ.
ಕುರವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಜಿಟಿ ರಸ್ತೆಯಲ್ಲಿರುವ ಖಿರಿಯಾ ಪೀಪಲ್ ಗ್ರಾಮದ ಬಳಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಐವರು ಗಂಭೀರ ಗಾಯಗೊಂಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಮೈನ್‌ಪುರಿ ಎಸ್‌ಪಿ ಕಮಲೇಶ್ ದೀಕ್ಷಿತ್, ಟ್ರಕ್ ಚಾಲಕ ನಿಯಂತ್ರಣ ತಪ್ಪಿ ಮನೆಯೊಳಕ್ಕೆ ಟ್ರಕ್​ ನುಗ್ಗಿಸಿದ್ದಾನೆ. ಇದರಿಂದ ದುರ್ಘಟನೆ ಸಂಭವಿಸಿದೆ ಎಂದಿದ್ದಾರೆ. ನಿವೃತ್ತ ಸಬ್‌ಇನ್‌ಸ್ಪೆಕ್ಟರ್ ಮತ್ತು ಅವರ ಪತ್ನಿ, ಟ್ರಕ್‌ನಲ್ಲಿದ್ದ ಇಬ್ಬರು ಮೃತಪಟ್ಟಿದ್ದು, ಮತ್ತೋರ್ವ ಅವಶೇಷಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಎಸ್​​ಪಿ ಹೇಳಿದ್ದಾರೆ.
ಸಾವು ಯಾವ ರೂಪದಲ್ಲಿ ಅಡಗಿರುತ್ತದೆಯೋ ಹೇಳಲಾಗದು. ವಾಹನ ಅಪಘಾತದಲ್ಲಿಯೇ ಸಾಯಬೇಕು ಎಂದು ವಿಧಿ ಬರೆದಿದ್ದರೆ ರಸ್ತೆಗೇ ಇಳಿಯಬೇಕೆಂದೇನೂ ಇಲ್ಲ, ಮನೆಯ ಒಳಗೇ ಇದ್ದರೂ ಸಾವು ಹುಡುಕಿಕೊಂಡು ಬರುತ್ತದೆ ಎನ್ನುವುದಕ್ಕೆ ಈ ಭೀಕರ ಘಟನೆಯೇ ಸಾಕ್ಷಿ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
