ನೈಜೀರಿಯಾ:ನೈಜೀರಿಯಾದಲ್ಲಿ ಉಗ್ರರ ಅಟ್ಟಹಾಸ ಮುಂದುವರೆಯುತ್ತಲೇ ಇದೆ. ಹಲವು ವರ್ಷಗಳಿಂದ ಗುಂಡಿನ ಸುರಿಮಳೆಗೈದು ಅಸಂಖ್ಯ ಜನರ ರಕ್ತ ಹರಿಸಿರುವ ಈ ಉಗ್ರರ ಹಾವಳಿ ಮಿತಿಮೀರಿದ್ದು, ಇದೀಗ ಶಾಲೆಯನ್ನು ಟಾರ್ಗೆಟ್‌ ಮಾಡಿ ದಾಳಿ ಮಾಡಿದ್ದಾರೆ.
ಸೆಂಟ್ರಲ್ ನೈಜೀರಿಯಾದಲ್ಲಿ ಇರುವ ಶಾಲೆಯೊಂದರ ಮೇಲೆ ಗುಂಡಿನ ದಾಳಿ ನಡೆಸಿರುವ ಈ ಬಂದೂಕುಧಾರಿಗಳು 40 ಮಂದಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಇವರ ಗುಂಡಿನ ದಾಳಿಗೆ ಒಬ್ಬ ವಿದ್ಯಾರ್ಥಿ ಬಲಿಯಾಗಿದ್ದಾನೆ.
ಶಾಲೆಯ ಸಮೀಪ ಇರುವ ಹಾಸ್ಟೆಲ್‌ನ ಗೋಡೆ ಒಡೆದು ಒಳನುಗ್ಗಿದ ಈ ಉಗ್ರರು ಅಲ್ಲಿಂದ ಶಾಲೆಯ ಕೊಠಡಿಗೆ ಹೋಗಿದ್ದಾರೆ. ಬಂದೂಕುಧಾರಿಗಳು ಒಳನುಗ್ಗುತ್ತಿದ್ದಂತೆಯೇ ಭಯಭೀತರಾದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಲ್ಲಿಂದ ಓಡಿಹೋಗಲು ನೋಡಿದ್ದಾರೆ.
ಆ ಸಮಯದಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ ಉಗ್ರರು. ವಿದ್ಯಾರ್ಥಿಯೊಬ್ಬನಿಗೆ ಗುಂಡು ತಗುಲಿ ಅಲ್ಲಿಯೇ ಮೃತಪಟ್ಟಿದ್ದಾನೆ. ಉಳಿದವರು ಓಡಿಹೋಗದಂತೆ ಭಯಹುಟ್ಟಿಸಿದ ಉಗ್ರರು ಎಲ್ಲರನ್ನೂ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡು ಅಪಹರಿಸಿಕೊಂಡು ಹೋಗಿದ್ದಾರೆ.
ಇವರೆಲ್ಲರೂ ಮಿಲಿಟರಿ ಸಿಬ್ಬಂದಿ ಬಳಸುವ ಕ್ಯಾಮಪ್ಲೋಜ್ ಯೂನಿಫಾರ್ಮ್ ಧರಿಸಿ ಒಳನುಗ್ಗಿ ಈ ದುಷ್ಕೃತ್ಯ ಎಸಗಿರುವುದಾಗಿ ಪೊಲೀಸರು ಹೇಳಿದ್ದಾರೆ.
ನಡುರಸ್ತೆಯಲ್ಲಿಯೇ ವಕೀಲ ದಂಪತಿಯ ಬರ್ಬರ ಹತ್ಯೆ: ವಿಡಿಯೋದಲ್ಲಿ ಭಯಾನಕ ದೃಶ್ಯ ದಾಖಲು

ಈಕೆಗೆ ನೇಣು ಹಾಕಲು ಸಿದ್ಧವಾಗಿದೆ ಮಥುರಾ ಜೈಲು- ಸ್ವಾತಂತ್ರ್ಯಾನಂತರದ ಮೊದಲ ಗಲ್ಲುಶಿಕ್ಷೆಗೊಳಗಾಗುವ ಹೆಣ್ಣೀಕೆ!

ಕರ್ನಾಟಕದ ಉದ್ಯಮಿ ಶೆಟ್ಟಿಗೆ ಭಾರಿ ಆಘಾತ: ವಿಶ್ವದೆಲ್ಲೆಡೆ ಇರುವ ಆಸ್ತಿಗಳ ಜಪ್ತಿಗೆ ಬ್ರಿಟನ್‌ ಕೋರ್ಟ್‌ ಆದೇಶ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two + 14 =
Remember me
