ತಿರುಪತಿ:ಭಾರತದ ಅತ್ಯಂತ ಶ್ರೀಮಂತ ದೇವರು ಎಂದು ಎನಿಸಿಕೊಂಡಿರುವ ತಿರುಪತಿ ತಿಮ್ಮಪ್ಪನ ದರುಶನ ಭಾಗ್ಯ ಪಡೆಯದವರೇ ಇಲ್ಲ ಎನ್ನಬಹುದೇನೋ. ಈತನಿಗಾಗಿ ಕೋಟಿ ಕೋಟಿ ಬೆಲೆ ಬಾಳುವ ಕಾಣಿಕೆಗಳನ್ನು ನೀಡುವವರು ಅದೆಷ್ಟೋ ಮಂದಿ. ಖುದ್ದು ಭೇಟಿಯಾಗಿ ತಮ್ಮ ಹರಕೆ ತೀರಿಸುವವರು ಹಲವರಾಗಿದ್ದರೆ, ಆನ್​ಲೈನ್ ಮೂಲಕವೂ ವೆಂಕಟೇಶ್ವರನಿಗೆ ದೇಣಿಗೆ ನೀಡುವವರು ಇನ್ನಷ್ಟು ಮಂದಿ.
ಆದರೆ ಇಲ್ಲೊಂದು ಅಪರೂಪದ ಪ್ರಕರಣದಲ್ಲಿ ತಿರುಪತಿ ತಿಮ್ಮಪ್ಪನೇ ಭಕ್ತನೊಬ್ಬನಿಗೆ ದುಡ್ಡು ನೀಡಬೇಕಾದ ಘಟನೆ ನಡೆದಿದೆ! ಅಂದರೆ ತಿರುಪತಿ ತಿಮ್ಮಪ್ಪ ದೇವಸ್ಥಾನದ ಟ್ರಸ್ಟ್​ ಭಕ್ತನೊಬ್ಬನಿಗೆ ಪರಿಹಾರದ ಹಣ ನೀಡುವ ಘಟನೆ ಇದಾಗಿದೆ.
ಆಗಿದ್ದೇನು?ತಿರುಪತಿಯಲ್ಲಿ ಕೆಲವು ಆನ್​ಲೈನ್​ ಸೇವೆಗಳಿವೆ. ಇದರ ಪ್ರಯೋಜನ ಪಡೆದುಕೊಂಡಿದ್ದ ತಮಿಳುನಾಡಿನ ಭಕ್ತ ಕೆ.ಆರ್ ಹರಿಭಾಸ್ಕರ್ ಎಂಬುವವರು 2006ರಲ್ಲಿ ಟಿಟಿಡಿ ಮೂಲಕ ತಿರುಪತಿ ತಿಮ್ಮಪ್ಪನಿಗೆ ವಸ್ತ್ರಾಲಂಕಾರ ಸೇವೆಯನ್ನು ಬುಕ್ ಮಾಡಿದ್ದರು. ಆದರೆ ಟಿಟಿಡಿ ಅದಕ್ಕೆ ಅವಕಾಶವನ್ನೇ ಕೊಟ್ಟಿರಲಿಲ್ಲ. ವಸ್ತ್ರಾಲಂಕಾರ ಸೇವೆಯನ್ನು ಮುಂದೂಡುತ್ತಲೇ ಬರಲಾಗಿತ್ತು.
2006ರಿಂದ 2020ರವರೆಗೂ ಈ ಭಕ್ತನಿಗೆ ಸೇವೆ ಸಿಗಲೇ ಇಲ್ಲ. ಕೊನೆಗೆ ಕೋವಿಡ್​ ಹಿನ್ನೆಲೆಯಲ್ಲಿ 2020ರ ಮಾರ್ಚ್‌ನಲ್ಲಿ 80 ದಿನ ಸೇವೆ ಸ್ಥಗಿತಗೊಳಿಸಲಾಯಿತು. ಇದಾದ ಬಳಿಕ ಪುನಃ ಹರಿ ಭಾಸ್ಕರ್​ ಅವರು ಟಿಟಿಸಿ ಮೊರೆ ಹೋದರು.
2020ರ ಮಾರ್ಚ್‌ನಲ್ಲಿ ಹರಿಭಾಸ್ಕರ್ ಅವರ ವಸ್ತ್ರಾಲಂಕಾರ ಸೇವೆ ಮಾಡಿಸಿಕೊಡುವುದಾಗಿ ಟಿಟಿಡಿ ದಿನಾಂಕ ನೀಡಿತ್ತು. ಆದರೆ ಕೋವಿಡ್‌ನಿಂದಾಗಿ ಪುನಃ ತಿರುಪತಿಯಲ್ಲಿ ಭಕ್ತರ ಪ್ರವೇಶ, ದೇವರ ವಿವಿಧ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಹೀಗಾಗಿ ಹರಿಭಾಸ್ಕರ್ ಅವರ ವಸ್ತ್ರಾಲಂಕಾರ ಸೇವೆ ಮತ್ತೆ ಮುಂದೂಡಲ್ಪಟ್ಟಿತು. ಟಿಟಿಡಿಯಿಂದ ಪುನಃ ಇವರಿಗೆ ಮೆಸೇಜ್​ ಬಂದು ಸೇವೆ ಮುಂದೂಡಲಾಗಿದೆ ಎನ್ನಲಾಯಿತು.
ಕೊನೆಗೆ ಹರಿಭಾಸ್ಕರ್ ಅವರು ಒಂದು ವರ್ಷದ ಒಳಗೆ ಯಾವುದಾದರೂ ದಿನ ತಮಗೆ ಈ ಸೇವೆಯನ್ನು ಕಲ್ಪಿಸಲು ಅನುಕೂಲ ಮಾಡಿಕೊಡುವಂತೆ ಟಿಟಿಡಿಯನ್ನು ಕೋರಿದರು. ಆದರೆ ಇದಕ್ಕೆ ಟಿಟಿಡಿ ಒಪ್ಪಿಗೆ ಸೂಚಿಸಲಿಲ್ಲ. ಇದು ಸಾಧ್ಯವಿಲ್ಲ ಎಂದಿತು. ಇದರಿಂದ ಸಿಟ್ಟಿಗೆದ್ದ ಹರಿಭಾಸ್ಕರ್​ ಅವರು ಟಿಟಿಡಿ ವಿರುದ್ಧ ಸೇಲಂ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ತೆರಳಿ ಟಿಟಿಡಿ ವಿರುದ್ಧ ದೂರು ದಾಖಲಿಸಿದ್ದರು.
ಈ ಪ್ರಕರಣವನ್ನು ಆಲಿಸಿದ ಗ್ರಾಹಕರ ಕೋರ್ಟ್​ ಟಿಟಿಡಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇವರಿಗೆ ವಸ್ತ್ರಾಲಂಕಾರ ಸೇವೆಯನ್ನು ಒಂದು ವರ್ಷದೊಳಗೆ ಮಂಜೂರು ಮಾಡುವಂತೆ ಟಿಟಿಡಿಗೆ ಗ್ರಾಹಕ ಆಯೋಗವು ಸೂಚಿಸಿದೆ. ಜತೆಗೆ, ಸೇವೆಯಲ್ಲಿನ ಕೊರತೆಯಾಗಿದ್ದೂ ಅಲ್ಲದೇ ಇಷ್ಟು ವರ್ಷಗಳ ಕಾಲ ಹರಿಭಾಸ್ಕರ್​ ಹಾಗೂ ಅವರ ಕುಟುಂಬಕ್ಕೆ ಮಾನಸಿಕ ಯಾತನೆ ಉಂಟುಮಾಡಿದ್ದಕ್ಕಾಗಿ ಪರಿಹಾರವಾಗಿ 45 ಲಕ್ಷ ರೂಪಾಯಿಯನ್ನು ನೀಡುವಂತೆ ಆದೇಶಿಸಿದೆ. ಇದರ ಜತೆಗೆ, 2006 ರಿಂದ ಇಲ್ಲಿಯವರೆಗೆ ವಾರ್ಷಿಕ 24% ಬಡ್ಡಿಯೊಂದಿಗೆ ಭಾಸ್ಕರ್‌ಗೆ ಬುಕಿಂಗ್ ಮೊತ್ತದ ರೂ 12,250 ಅನ್ನು ಮರುಪಾವತಿಸಲು ಟಿಟಿಡಿಗೆ ಸೂಚಿಸಿದೆ. (ಏಜೆನ್ಸೀಸ್​)
ನನ್ನ ಸಾವಿಗೆ ಬಿಜೆಪಿ ಮುಖಂಡ ಹಾಗೂ ಪಿಎಸ್​ಐ ಕಾರಣ ಎಂದು ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ!

ಸಿಎಂ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಬಿಗ್​ ಶಾಕ್!​ 3,500 ಕೋಟಿ ರೂ. ದಂಡ ವಿಧಿಸಿದ ಎನ್​ಜಿಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 4 =
Remember me
