ಪುಣೆ:ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟ ಬಹುತೇಕ ಮಹಿಳೆಯರ ಕಥೆ ಕಣ್ಣೀರಿನ ಕಥೆಯೇ. ಕೆಲಸ ಕೊಡಿಸುವ ಇಲ್ಲವೇ ಇನ್ನಾವುದೋ ಆಮಿಷಕ್ಕೆ ಒಳಗಾಗಿ ಈ ಮಾಂಸ ದಂಧೆಗೆ ನೂಕಲ್ಪಟ್ಟ ಒಂದೊಂದು ಹೆಣ್ಣಿನ ಕಥೆ ಕೇಳುತ್ತಿದ್ದರೆ, ಕೆಲವು ಕಟುಕರ ಮನವೂ ಕರಗುವುದುಂಟು.
ಇದನ್ನೇ ಆಧಾರವಾಗಿಟ್ಟುಕೊಂಡು ಕೆಲವು ಸಿನಿಮಾಗಳು ಬಂದಿವೆ. ವೇಶ್ಯೆಯ ಸಂಗ ಬಯಸಿ ಬಂದವನೇ ಆಕೆಯನ್ನು ಪ್ರೀತಿಸಿ ಮದುವೆಯಾದ ಕಥೆಗಳು ಸಿನಿಮಾ ಆಗಿವೆ, ಇಲ್ಲವೇ ಆಕೆಗೆ ಬೇರ್ಯಾವುದೋ ರೂಪದಲ್ಲಿ ಸಹಾಯ ಮಾಡಿ ಅವಳನ್ನು ವೇಶ್ಯಾಗೃಹದಿಂದ ಬಿಡಿಸಿರುವ ನೈಜ ಘಟನೆಗಳೂ ಜರುಗಿವೆ, ಇದೇ ಕಥಾವಸ್ತುವನ್ನು ಇಟ್ಟುಕೊಂಡು ಸಿನಿಮಾಗಳೂ ಆಗಿವೆ.
ಅಂಥದ್ದೇ ಒಂದು ಘಟನೆ ನಡೆದಿರುವುದು ಪುಣಾದಲ್ಲಿ. ಇಲ್ಲಿ ವೇಶ್ಯಾವಾಟಿಕೆ ದಂಧೆಗೆ ನೂಕಲ್ಪಟ್ಟ ಪಶ್ಚಿಮ ಬಂಗಾಳ ಮೂಲದ 45 ವರ್ಷದ ವಿಧವೆಯ ನೋವಿನ ಕಥೆಯಿದು…
ಆಗಿದ್ದೇನೆಂದರೆ, ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಮಹಿಳೆ ಕೋಲ್ಕತಾದಲ್ಲಿ ಗೃಹ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಇವರು ಗಂಡನನ್ನು ಕಳೆದುಕೊಂಡಿದ್ದರು. ಇದೇ ವೇಳೆ ಉತ್ತಮ ನೌಕರರಿಗಾಗಿ ಹುಡುಕಾಟ ನಡೆಸಿದ್ದರು. 2019ರಲ್ಲಿ ವ್ಯಕ್ತಿಯೊಬ್ಬನಿಗೆ ಇವರ ಪರಿಚಯವಾಗಿದೆ. ಇವರ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡಿರುವ ಆತ ಉತ್ತಮ ವೇತನದ ಕೆಲಸ ಕೊಡಿಸುವುದಾಗಿ ಮಹಾರಾಷ್ಟ್ರದ ಪುಣೆಗೆ ಕರೆದುಕೊಂಡು ಹೋಗಿದ್ದಾನೆ.
ಕೆಲಸ ಸಿಗುವ ಆಸೆಯಲ್ಲಿ ಮಹಿಳೆ ಹೋಗಿದ್ದಾರೆ. ಆದರೆ ಆಮೇಲೆ ಅವರಿಗೆ ತಿಳಿದದ್ದು ವೇಶ್ಯಾವಾಟಿಕೆಗೆ ತಮ್ಮನ್ನು ತಳ್ಳಲಾಗಿದೆ ಎಂದು. ಆದರೆ ಏನೂ ಮಾಡಲಾಗದ ಸ್ಥಿತಿ ಮಹಿಳೆಯದ್ದಾಗಿತ್ತು. ತಾವಿಲ್ಲಿದ್ದೇವೆ, ಇಲ್ಲಿ ಏಕೆ ಹೀಗೆ ಎಂದೆಲ್ಲಾ ಯೋಚನೆ ಮಾಡುವ ಮೊದಲೇ ಅವರಿಗಾಗಿ ‘ಗ್ರಾಹಕ’ರು ಬರಲು ಆರಂಭಿಸಿದ್ದರು.
ದಿನವೂ ಕಣ್ಣೀರಿನಲ್ಲಿಯೇ ಕೈತೊಳೆಯುತ್ತಿದ್ದ ಮಹಿಳೆ ಅಲ್ಲಿಂದ ಹೇಗೆ ತಪ್ಪಿಸಿಕೊಂಡು ಬರುವುದು ಎಂದು ತಿಳಿಯದೇ ನಲುಗಿ ಹೋಗಿದ್ದರು. ಅದೇ ವೇಳೆ ಅವರಿಗೆ ದೇವರ ರೂಪದಲ್ಲಿ ಬಂದದ್ದು ಓರ್ವ ಗ್ರಾಹಕ. ಆತ ಇವರ ದೇಹ ಬಯಸಿ ಬಂದಿದ್ದ. ಆದರೆ ಮಹಿಳೆ ತನ್ನೆಲ್ಲಾ ಕಥೆಗಳನ್ನು ಆತನಿಗೆ ಹೇಳಿದ್ದಾರೆ. ತಮ್ಮ ಮನೆಯ ವಿಳಾಸ ನೀಡಿದ್ದಾರೆ. ತಮಗೆ 21 ವರ್ಷದ ಮಗ ಇದ್ದು, ಆತನಿಗೆ ಹೇಳುವಂತೆ ಕೋರಿಕೊಂಡಿದ್ದಾರೆ.
ಮಹಿಳೆಯ ಕಥೆ ಕೇಳಿ ಆ ವ್ಯಕ್ತಿಗೆ ತುಂಬಾ ನೋವಾಗಿದೆ. ಹೊರಗೆ ಬಂದ ಮೇಲೆ ಮಗನನ್ನು ಸಂಪರ್ಕಿಸಿ ವಿಷಯ ಹೇಳಿದ್ದಾರೆ. ಮಗ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ಯಾಚಿಸಿದ್ದಾನೆ.
ನಂತರ ಪುಣೆಯ ಅಪರಾಧ ಶಾಖೆಯ ಸಾಮಾಜಿಕ ಭದ್ರತಾ ವಿಭಾಗದ ಪೊಲೀಸರು ಪುಣೆ ಬುದ್ವಾರ್ ಪೇಟೆ ಪ್ರದೇಶದ ವೇಶ್ಯಾಗೃಹದ ಮೇಲೆ ದಾಳಿ ನಡೆಸಿದ್ದಾರೆ. ಲೈಂಗಿಕ ದಂಧೆ ನಡೆಸುತ್ತಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ. ಅದೇ ರೀತಿ ವೇಶ್ಯಾವಾಟಿಕೆ ಉದ್ದೇಶಕ್ಕೆ ಮಹಿಳೆ ಮಾರಾಟ ಮಾಡಿದ್ದ ವ್ಯಕ್ತಿಗಳು ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲು ಮಾಡಿರುವ ಪೊಲೀಸರು ಸಂತ್ರಸ್ತ ಮಹಿಳೆಯನ್ನು ರಕ್ಷಿಸಿದ್ದಾರೆ. ಆಕೆಯನ್ನು ಮಗನೊಂದಿಗೆ ಕಳುಹಿಸಲಾಗಿದೆ.
ಹಾಲುಂಡ ತವರನ್ನು ಬಿಟ್ಟು ಗಂಡನ ಮನೆಗೆ ಹೋಗುವಾಗ ಬಿಕ್ಕಿಬಿಕ್ಕಿ ಅತ್ತ ವಧು ಮಸಣ ಸೇರಿದಳು!

ಕಾರ್ಯಕ್ರಮದಲ್ಲಿ ಕುಸಿದುಬಿದ್ದ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್: ವಿಮಾನದ ಮೂಲಕ ಆಸ್ಪತ್ರೆಗೆ ದಾಖಲು

ಯುವಕನಾದರೂ ಯುವತಿಯರ ಕಂಡರೆ ಅಸಹ್ಯವಾಗುತ್ತಿದ್ದು, ಭಯ ಶುರುವಾಗಿದೆ… ಏನಿದು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
