ರಾಜಾವರ್‌ (ಬಿಹಾರ):ಏಕಾಏಕಿಯಾಗಿ ಮನೆಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಒಂದೇ ಕುಟುಂಬ ಐದು ಮಂದಿ ಮೃತಪಟ್ಟಿರುವ ಘಟನೆ ಬಿಹಾರದ ಬಂಕಾ ಜಿಲ್ಲೆಯ ರಾಜಾವರ್​ ಗ್ರಾಮದಲ್ಲಿ ನಡೆದಿದೆ.
ಅಡುಗೆ ಸಿಲಿಂಡರ್‌ ಸ್ಫೋಟದಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದರೂ ಇದಕ್ಕೆ ನಿಖರ ಕಾರಣ ತಿಳಿದುಬಂದಿದೆ. ಸ್ಥಳದಲ್ಲಿ ಸಿಲಿಂಡರ್‌ ಸುಟ್ಟುಕರಕಲಾಗಿರುವುದು ಕಂಡುಬಂದಿದೆ. ಆದರೆ ಅದರ ಸ್ಫೋಟದಿಂದಲೇ ಈ ಘಟನೆ ಸಂಭವಿಸಿರುವುದು ಇನ್ನೂ ದೃಢಪಟ್ಟಿಲ್ಲ.
ಘಟನೆಯಲ್ಲಿ ಮೃತಪಟ್ಟವರನ್ನು ಅಂಕುಶ್​ ಕುಮಾರ್​ (10), ಶಿವಾನಿ ಕುಮಾರಿ​ (9), ಸೋನಿ ಕುಮಾರಿ (8), ಸೀಮಾ ಕುಮಾರಿ (5) ಮತ್ತು ಅಂಶುಕುಮಾರಿ (10) ಎಂದು ಗುರುತಿಸಲಾಗಿದೆ. ಇವರಲ್ಲಿ ಅಂಕುಶ್​, ಶಿವಾನಿ, ಸೋನಿ, ಸೀಮಾ ಒಡಹುಟ್ಟಿದವರು. ಅಂಶುಕುಮಾರಿ ಈ ಮಕ್ಕಳ ಸಂಬಂಧಿಯಾಗಿದ್ದಾರೆ. ಮನೆಗೆ ಬೆಂಕಿ ಬಿದ್ದಾಗ ತಮ್ಮ ಮಕ್ಕಳನ್ನು ರಕ್ಷಿಸಲು ಅಶೋಕ್​ ಪಸ್ವಾನ್​ ಯತ್ನಿಸಿದ್ದು, ಇವರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಅಗ್ನಿ ಅನಾಹುತಕ್ಕೆ ನಿಜವಾದ ಕಾರಣವೇನು ಎಂದು ತಿಳಿದುಬಂದಿಲ್ಲ. ಈ ಸ್ಥಳದಲ್ಲಿ ಒಂದು ಸುಟ್ಟು ಕರಕಲಾಗಿರುವ ಸಿಲಿಂಡರ್​ ಗ್ಯಾಸ್​ ಮತ್ತು ರೆಗ್ಯುಲೇಟರ್​ ಸಿಕ್ಕಿದೆ. ಮನೆಯಲ್ಲಿ ಯಾವುದೇ ವಸ್ತುವೂ ಉಳಿದಿಲ್ಲ. ಎಲ್ಲವೂ ಸುಟ್ಟು ಬೂದಿಯಾಗಿದ್ದು, ಬೆಂಕಿ ಬಿದ್ದಿರುವ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಎಂದು ಬಂಕಾ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್​ ಕುಮಾರ್ ಗುಪ್ತಾ ತಿಳಿಸಿದ್ದಾರೆ.
ಬಡತನವೇ ಶಾಪವಾಗೋಯ್ತು ಮೇಡಂ, ವಯಸ್ಸಾದರೂ ಮದ್ವೆಯಾಗದೇ ವಿವಾಹಿತನ ಬಲೆಗೆ ಸಿಲುಕಿಬಿಟ್ಟೆ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 1 =
Remember me
