ಪಂಜಾಬ್​:ಸುಮ್ಮನಿರದೇ ಇರುವೆಬಿಟ್ಟುಕೊಂಡರು ಎಂಬ ಮಾತೊಂದಿದೆ. ಅಂಥದ್ದೇ ಪ್ರಕರಣವೊಂದು ಪಂಜಾಬ್​ನಲ್ಲಿ ನಡೆದಿದ್ದು, ಲಿವ್​ ಇನ್​ ರಿಲೇಷನ್​ನಲ್ಲಿ ಇರುವ ಪ್ರೇಮಿಗಳು 50 ಸಾವಿರ ರೂಪಾಯಿ ದಂಡ ಹಾಕಿಸಿಕೊಂಡ ಘಟನೆ ನಡೆದಿದೆ.
ರೇಖಾ ಹಾಗೂ ಸಂತೋಷ್​ (ಹೆಸರು ಬದಲಾಯಿಸಲಾಗಿದೆ) ಪ್ರೇಮಿಗಳ ಕಥೆ ಇದು. ಇವರಿಬ್ಬರೂ ಹೇಳಿಕೇಳಿ ವಿವಾಹಿತರು. ಅಂದರೆ ರೇಖಾಳಿಗೂ ಬೇರೆ ಮದುವೆಯಾಗಿದೆ, ಸಂತೋಷ್​ಗೂ ಮದುವೆಯಾಗಿದೆ. ಆದರೆ ಇವರಿಬ್ಬರೂ ತಂತಮ್ಮ ಪತಿ-ಪತ್ನಿಗೆ ವಿಚ್ಛೇದನ ನೀಡದೆ ಒಟ್ಟಿಗೇ ಲಿವ್​ ಇನ್​ ಸಂಬಂಧದಲ್ಲಿ ನಾಲ್ಕೈದು ವರ್ಷಗಳಿಂದ ನೆಲೆಸಿದ್ದಾರೆ.
ಸುಮ್ಮನೇ ಒಟ್ಟಿಗೇ ಇದ್ದಿದ್ದರೆ ಪರವಾಗಿರಲಿಲ್ಲ. ಆದರೆ ಇವರಿಬ್ಬರೂ ತಂತಮ್ಮ ಸಂಗಾತಿ ವಿರುದ್ಧ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ರೇಖಾ ತನ್ನ ಗಂಡನ ವಿರುದ್ಧ ಹಾಗೂ ಸಂತೋಷ್​ ತನ್ನ ಹೆಂಡತಿ ವಿರುದ್ಧ ದೌರ್ಜನ್ಯ ಕೇಸ್​ ದಾಖಲು ಮಾಡಿದ್ದಾರೆ.
ಇದನ್ನೂ ಓದಿ:ಕರೊನಾ: ಆರೋಗ್ಯ ಸಚಿವಾಲಯ ಹೊರಡಿಸಿದೆ ಹೊಸ ಮಾರ್ಗಸೂಚಿ- ಇಲ್ಲಿದೆ ವಿವರ…
ಇದರ ವಿಚಾರಣೆ ವೇಳೆ ರೇಖಾ 2016ರಲ್ಲಿಯೇ ಗಂಡನನ್ನು ಬಿಟ್ಟು ಬಂದಿರುವ ವಿಷಯ ತಿಳಿದಿದೆ. ಇದಾದ ಮೇಲೆ ತನ್ನ ಪ್ರಿಯಕರನ ಜತೆ ಲಿವ್​ ಇನ್​ನಲ್ಲಿ ಇರುವ ಈಕೆ ಎರಡು ವರ್ಷ ಬಿಟ್ಟು ಗಂಡನ ವಿರುದ್ಧ ದೌರ್ಜನ್ಯದ ಅರ್ಜಿ ಸಲ್ಲಿಸಿದ್ದು ತಿಳಿದಿದೆ. ಅದೇ ರೀತಿ ಸಂತೋಷ್​ ಕೂಡ ತನ್ನ ಪತ್ನಿಯನ್ನು ಬಿಟ್ಟು ರೇಖಾಳ ಜತೆ ನೆಲೆಸಿರುವುದು ಕೋರ್ಟ್​ ಗಮನಕ್ಕೆ ಬಂದಿದೆ.
ವಿಚಿತ್ರ ಎಂದರೆ, ಇಬ್ಬರೂ ತಂತಮ್ಮ ಸಂಗಾತಿಗೆ ವಿಚ್ಛೇದನ ನೀಡದೇ ಲಿವ್​ ಇನ್​ನಲ್ಲಿ ನೆಲೆಸಿದ್ದಾರೆ. ಇಬ್ಬರ ವಿಚ್ಛೇದನ ಅರ್ಜಿಗಳೂ ಇತ್ಯರ್ಥಕ್ಕೆ ಬಾಕಿ ಇವೆ.
ವಿಚ್ಛೇದನದ ತೀರ್ಪು ಬರುವ ಮುನ್ನವೇ ಅನೇಕ ವರ್ಷಗಳಿಂದ ಒಟ್ಟಿಗೇ ಇದ್ದುದೂ ಅಲ್ಲದೇ ದೌರ್ಜನ್ಯದ ಕೇಸ್​ ದಾಖಲು ಮಾಡಿ ಕೋರ್ಟ್​ ಸಮಯವನ್ನು ವ್ಯರ್ಥ ಮಾಡಿದುದಕ್ಕೆ ಪಂಜಾಬ್​-ಹರಿಯಾಣ ಹೈಕೋರ್ಟ್​ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ನೀಡದೇ ಸುಖಾಸುಮ್ಮನೆ ಕೋರ್ಟ್​ ಸಮಯ ಹಾಳು ಮಾಡಿರುವುದು ನ್ಯಾಯಮೂರ್ತಿಗಳ ಸಿಟ್ಟಿಗೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಈ ಜೋಡಿಗೆ ಬುದ್ಧಿ ಕಲಿಸಲು ಮುಂದಾಗಿರುವ ನ್ಯಾಯಮೂರ್ತಿಗಳು 50 ಸಾವಿರ ರೂಪಾಯಿಗಳ ದಂಡ ವಿಧಿಸಿದ್ದಾರೆ. ಈ ದಂಡದ ಹಣವನ್ನು , ಕೋವಿಡ್ ಪರಿಹಾರ ನಿಧಿಗೆ ನೀಡುವಂತೆ ಆದೇಶಿಸಿದ್ದಾರೆ.(ಏಜೆನ್ಸೀಸ್​)
ನನ್ನಂಥವರಿಗಾಗಿ ನಿಯಮ ಬದಲಿಸಿ: 77ರ ಅಜ್ಜಿಯಿಂದ ಸುಪ್ರೀಂಕೋರ್ಟ್​ಗೆ ಅರ್ಜಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಳೆಯಿಂದ ಸೇವೆಗಳು ಆರಂಭ: ಸಂಪೂರ್ಣ ವಿವರ ಇಲ್ಲಿದೆ…

ಬಂಜೆತನಕ್ಕೆ ಉಡದ ಜನನಾಂಗ ಔಷಧವಂತೆ!- ಕಳ್ಳಸಾಮಿ ಸಣ್ಣ ಈರಪ್ಪ ಪೊಲೀಸ್ ಬಲೆಗೆ

ಅಪ್ಪ ಗಿಫ್ಟ್​ ನೀಡಿದ್ದ ವಿಸ್ಕಿ ಬಾಟಲಿ ಮಾರಿ ಮನೆ ಕಟ್ಟಿಸಿದ: ಅಚ್ಚರಿಯಾಯ್ತಾ? ಈ ಸ್ಟೋರಿ ಓದಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
