ನವದೆಹಲಿ:ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ಒಂದೆಡೆ ರೈತರು, ಇನ್ನೊಂದೆಡೆ ರೈತರ ಹೆಸರಿನಲ್ಲಿ ವಿಧ್ವಂಸಕರು ನಡೆಸುತ್ತಿರುವ ಪ್ರತಿಭಟನೆಯ ಕಾವು ಇನ್ನೂ ಮುಗಿದಿಲ್ಲ. ಈ ನಡುವೆಯೇ ರೈತನೊಬ್ಬ ಟೆಕ್ರಿ ಗಡಿಯಲ್ಲಿ ಮೃತಪಟ್ಟಿದ್ದು, ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಹರಿಯಾಣದ ಜಿಂದ್ ಜಿಲ್ಲೆಯ ಕರ್ಮವೀರ್ ಸಿಂಗ್ (52) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಸ್ಥಳದಲ್ಲಿ ಡೆತ್​ನೋಟ್​ ಸಿಕ್ಕಿದೆ ಎಂದು ವರದಿಯಾಗಿದೆ. ಚರಕಿ ದಾದ್ರಿ ಮೈದಾನದಲ್ಲಿ ಈ ಘಟನೆ ನಡೆದಿದೆ. ಭಾರತ್ ಕಿಸಾನ್ ಯೂನಿಯನ್ ಜಿಂದಾಬಾದ್, ಸಮಸ್ಯೆ ಇತ್ಯರ್ಥಗೊಳಿಸದ ಮೋದಿ ಸರ್ಕಾರ ದಿನಾಂಕಗಳ ದಿನ ನೀಡುತ್ತಾ ಹೋಗುತ್ತಿದೆ. ಈ ಕಾನೂನುಗಳನ್ನ ಹಿಂಪಡೆಯುವ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಮೃತ ರೈತ ಡೆತ್​ನೋಟ್​ನಲ್ಲಿ ಬರೆದಿರುವುದಾಗಿ ಹೇಳಲಾಗುತ್ತಿದೆ.
ಅದೇ ಇನ್ನೊಂದೆಡೆ, ಇದಾಗಲೇ ಲಕ್ಷಾಂತರ ರೂಪಾಯಿಗಳ ಟ್ರ್ಯಾಕ್ಟರ್​ನೊಂದಿಗೆ ಸಹಸ್ರಾರು ರೂಪಾಯಿಗಳ ಡೀಸೆಲ್​ಗಳನ್ನು ಹಾಕಿಸಿಕೊಂಡು ಪಂಜಾಬ್​, ಹರಿಯಾಣದಿಂದ ದೆಹಲಿಯಲ್ಲಿ ಬೀಡುಬಿಟ್ಟಿರುವ ರೈತರು ಇದೀಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ.
ಗಣರಾಜ್ಯೋತ್ಸವದ ದಿನ ಟ್ರ್ಯಾಕ್ಟರ್​ನಲ್ಲಿ ಬಂದು ರೈತರ ಹೆಸರಿನಲ್ಲಿ ವಿಧ್ವಂಸಕ ಕೃತ್ಯ ನಡೆದಿರುವ ಬೆನ್ನಲ್ಲೇ ಇದೀಗ ಭಾರತ್ ಕಿಸಾನ್ ಯೂನಿಯನ್ ಮುಂದಾಳು ರಾಕೇಶ್ ಟಿಕಾಯತ್, 40 ಲಕ್ಷ ಟ್ರ್ಯಾಕ್ಟರ್ ಗಳ ರ‍್ಯಾಲಿ ನಡೆಸೋದು ನಮ್ಮ ಮುಂದಿನ ಗುರಿ ಎಂದಿದ್ದಾರೆ. ಜನವರಿ 26ರಂದು 20 ಸಾವಿರ ಟ್ರ್ಯಾಕ್ಟರ್ ಸೇರಿಸುವುದು ನಮ್ಮ ಗುರಿಯಾಗಿತ್ತು. ಈಗ ಅನ್ನದಾತರು 2021ರ ಕಿಸಾನ್ ಕ್ರಾಂತಿಗೆ ಸಿದ್ಧರಾಗಬೇಕಿದೆ. ಆದ್ದರಿಂದ 40 ಲಕ್ಷ ಟ್ರ್ಯಾಕ್ಟರ್ ಗಳ ರ‍್ಯಾಲಿ ನಡೆಸಬೇಕಿದೆ ಎಂದಿದ್ದಾರೆ.
ಪತ್ನಿಯ ಎಲ್​ಐಸಿ ಪಾಲಿಸಿ ಮೇಲೆ ಕಣ್ಣು ಹಾಕಿದ ಚಾರ್ಟೆರ್ಡ್ ಅಕೌಂಟೆಂಟ್ ಪತಿ ಮಾಡಿದ್ದೇನು ನೋಡಿ!

ಮಗನ ಡೆತ್​ನೋಟ್​ ನೋಡಿ ಪಾಪಪ್ರಜ್ಞೆಯಿಂದ ಬಳಲುತ್ತಿರುವೆ- ನಾನು ತಪ್ಪು ಮಾಡಿಬಿಟ್ನಾ?

ಅತ್ತೆ ಬ್ಲ್ಯಾಕ್​ಮೇಲ್​ ಮಾಡಿ ಮೃತ ಮಗನ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಾರೆ- ಅವರಿಗೂ ಕೊಡಬೇಕಾ?

ವಿವಿಧ ಇಂಜಿನಿಯರಿಂಗ್​ ಪದವೀಧರರಿಗೆ ಇಲ್ಲಿದೆ ಉದ್ಯೋಗಾವಕಾಶ- 38 ಹುದ್ದೆಗಳು ಖಾಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − thirteen =
Remember me
