ಬೆಂಗಳೂರು:5ಜಿ ತಂತ್ರಜ್ಞಾನದ ನಿರೀಕ್ಷೆಯಲ್ಲಿ ಇರುವವರಿಗೆ ಬಜೆಟ್‌ನಲ್ಲಿ ಭಾರಿ ಸಿಹಿ ಸುದ್ದಿ ಸಿಕ್ಕಿದೆ. ತಂತ್ರಜ್ಞಾನ ಕ್ಷೇತ್ರದ ಕುರಿತು ಮಾಹಿತಿ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಭಾರತವು 2023 ರ ಒಳಗೆ 5G ಸೇವೆ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವು 2022 ರಲ್ಲಿ 5G ತರಂಗಾಂತರಕ್ಕಾಗಿ ಹರಾಜು ನಡೆಸಲಿದೆ. ಅದಾದ ತಕ್ಷಣ ಕೆಲವೇ ತಿಂಗಳುಗಳಲ್ಲಿ ಅಂದರೆ 2023 ರಲ್ಲಿ ಅದು ಅನುಷ್ಠಾನಕ್ಕೆ ಬರಲಿದೆ. ಇದರಿಂದ ಸ್ಮಾರ್ಟ್‌ಫೋನ್‌ ಉತ್ಪಾದಕರಿಗೂ ಇದರಿಂದ ಬಹಳ ಅನುಕೂಲ ಆಗಲಿದೆ ಎಂದು ಅವರು ಹೇಳಿದರು.
ಭಾರತದಲ್ಲಿ 5ಜಿ ಟೆಲಿಕಾಂ ಸೇವೆ ಆರಂಭವಾದ ವರ್ಷದಲ್ಲಿ ಕನಿಷ್ಠ 4 ಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರು 5ಜಿ ಸಂಪರ್ಕ ಪಡೆಯಲಿದ್ದಾರೆ ಎಂದು ಇದಾಗಲೇ ವರದಿ ತಿಳಿಸಿದೆ. 4ಜಿಯಿಂದ 5ಜಿಗೆ ಅಪ್‌ಗ್ರೇಡ್ ಆಗಲು ಭಾರತದಲ್ಲಿ ದೊಡ್ಡ ಸಂಖ್ಯೆಯ ಬಳಕೆದಾರರು ಸಿದ್ಧರಾಗಿದ್ದಾರೆ. ಒಂದೊಮ್ಮೆ 5ಜಿ ಸೇವೆ ಲಭ್ಯವಾದರೆ ಶೇ.67ರಷ್ಟು ಮುಂದಿ ಅಪ್‌ಗ್ರೇಡ್ ಆಗಲು ತಯಾರಿ ಮಾಡಿಕೊಂಡಿದ್ದಾರೆ. 2019ರಿಂದ ಈ ಅಪ್‌ಗ್ರೇಡ್ ಆಗಲು ಸಿದ್ದ ಎನ್ನುವವರ ಪ್ರಮಾಣದಲ್ಲಿ ಶೇ.14ರಷ್ಟು ಏರಿಕೆಯಾಗಿದೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
