ಸಂಬಾಲ್‌ಪುರ್:ವಯಸ್ಸಾಗುವುದು ದೇಹಕ್ಕಷ್ಟೇ, ಮನಸ್ಸಿಗಲ್ಲ. ಮನಸ್ಸೊಂದಿದ್ದರೆ ಮಾರ್ಗವು ಉಂಟು… ಹೀಗೆ ವಯಸ್ಸು, ಮನಸ್ಸಿನ ಕುರಿತಾಗಿ ಹಲವಾರು ನಾಣ್ಣುಡಿಗಳಿವೆ. ಬಹುಶಃ ಇಂಥವರನ್ನು ನೋಡಿಯೇ ಈ ಗಾದೆಮಾತನ್ನು ಸೃಷ್ಟಿಮಾಡಿದಂತೆ.
ಈ ಚಿತ್ರದಲ್ಲಿ ಕಾಣಿಸುತ್ತಿರುವವರು ನಿವೃತ್ತ ಬ್ಯಾಂಕ್‌ ಉದ್ಯೋಗಿ. ವಯಸ್ಸು 64. ಈಗ ತಮ್ಮ ಬಾಲ್ಯದ ಕನಸನ್ನು ಸಾಕಾರಗೊಳಿಸಿಕೊಂಡಿದ್ದು ನೀಟ್‌ ಬರೆದು ಪಾಸಾಗಿದ್ದಾರೆ. ಇದೀಗ ಎಂಎಂಬಿಎಸ್‌ಗೆ ಸೇರುವ ಮೂಲಕ ಜನರ ಸೇವೆಗೆ ಸನ್ನದ್ಧರಾಗಿದ್ದಾರೆ.
ಇವರ ಹೆಸರು ಜಯಕಿಶೋರ್ ಪ್ರಧಾನ್. ಒಡಿಶಾದ ಬಾರ್ಗಾ ಜಿಲ್ಲೆಯ ಅತ್ತಿಬಿರಾದವರು. ಬಾಲ್ಯದಿಂದಲೂ ಇವರಿಗೆ ವೈದ್ಯರಾಗುವ ಹಂಬಲ. ಆದರೆ ನಾನಾ ಕಾರಣಗಳಿಂದ ಅವರ ಆಸೆ ಈಡೇರಿರಲಿಲ್ಲ. ಕೊನೆಗೆ ಸ್ಟೇಟ್ ಬ್ಯಾಂಕ್‌ನಲ್ಲಿ ಕೆಲಸ ಸಿಕ್ಕಿತು. ಮದುವೆ, ಮಕ್ಕಳು, ಸಂಸಾರದ ಜವಾಬ್ದಾರಿ ಹೊತ್ತ ನಂತರ ವೈದ್ಯರಾಗುವ ತಮ್ಮ ಕನಸನ್ನು ಅದುಮಿ ಇಟ್ಟುಕೊಂಡಿದ್ದರು.
ಮನಸ್ಸೆಲ್ಲಾ ವೈದ್ಯ ವೃತ್ತಿಯ ಮೇಲೆ. ಕೆಲಸ ಮಾತ್ರ ಬ್ಯಾಂಕ್‌ನಲ್ಲಿ. ಬ್ಯಾಂಕ್ ಉದ್ಯೋಗಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಪತ್ನಿ, ಮಕ್ಕಳು, ನಾಲ್ವರು ತಮ್ಮಂದಿರ ಜವಾಬ್ದಾರಿಯಿಂದ ಹಿಂದೆ ಸರಿದರು.
ಈ ನಡುವೆಯೇ ಅವಳಿ ಹೆಣ್ಣು ಮಕ್ಕಳಿಗೆ ಡೆಂಟಲ್ ಸರ್ಜರಿಗೆ ಅಡ್ಮಿಷನ್‌ ಮಾಡಿಸಿದರು. ಆದರೆ ಓರ್ವ ಪುತ್ರಿ ಮೃತಪಟ್ಟಳು. ಇನ್ನೊಬ್ಬಳು ಕಾಲೇಜು ಕಲಿಯುತ್ತಿದ್ದಾಳೆ. ಓರ್ವ ಪುತ್ರ ಇದ್ದು, 9ನೇ ತರಗತಿ ಓದುತ್ತಿದ್ದಾನೆ.
ಬಡವರು ಹಾಗೂ ವಿಶೇಷ ಚೇತನರ ಆರೈಕೆ ಮಾಡಲು, ಅವರಿಗೆ ಸೂಕ್ತ ಚಿಕಿತ್ಸೆ, ಕಡಿಮೆ ವೆಚ್ಚದಲ್ಲಿ ಅವರ ಆರೋಗ್ಯ ಸುಧಾರಿಸುವುದು ನನ್ನ ಬಯಕೆಯಾಗಿತ್ತು. ಅದಕ್ಕಾಗಿ 2016ರಲ್ಲಿ ಬ್ಯಾಂಕ್‌ನಿಂದ ನಿವೃತ್ತಿಯಾದ ಜಯಕಿಶೋರ್ ನೀಟ್ ಪರೀಕ್ಷೆಗೆ ತಯಾರಿ ಆರಂಭಿಸಿದೆ. 2018ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ನನ್ನ ಕನಸಿಕೆಗೆ ಸಹಾಕಾರಿಯಾಯಿತು. 25 ವರ್ಷಕ್ಕಿಂತ ಮೇಲ್ಪಟ್ಟವರು ನೀಟ್ ಪರೀಕ್ಷೆ ಬರೆಯಲು ಅರ್ಹರು ಎಂದು ಕೋರ್ಟ್ ಹೇಳಿತ್ತು. ಆದ್ದರಿಂದ ನಾನೂ ಪ್ರಯತ್ನ ಮಾಡಿದೆ. ಮೊದಲ ಪ್ರಯತ್ನದಲ್ಲೇ ನೀಟ್ ಪರೀಕ್ಷೆ ಪಾಸ್ ಮಾಡಿದೆ ಎನ್ನುತ್ತಾರೆ ಜಯಕಿಶೋರ್‌.
ವೀರ್ ಸುರೇಂದ್ರ ಸಾಯಿ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ. ಈ ಮೂಲಕ ಎಂಬಿಬಿಎಸ್‌ ಕೋರ್ಸ್‌ಗೆ ಅಡ್ಮಿಷನ್ ಪಡೆದ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದಾರೆ. ಇವರು ಕೋಟ್ಯಂತರ ಮಂದಿಗೆ ಮಾದರಿ ಎನ್ನುತ್ತಾರೆ ಮೆಡಿಕಲ್ ಕಾಲೇಜು ಪ್ರಿನ್ಸಿಪಾಲ್ ಬ್ರಜಮೋಹನ್ ಮಿಶ್ರಾ.
ಹೃದಯ ಚಿಕಿತ್ಸೆ ನಂತರ ಕಿವಿ ಸರಿ ಕೇಳುತ್ತಿಲ್ಲ, ಕಣ್ಣೂ ಮಂಜಾಗಿದೆ; ಇದಕ್ಕೇನು ಕಾರಣ?

ಆನ್‌ಲೈನ್‌ನಲ್ಲಿ ₹250 ಊಟದ ಆಸೆಗೆ ₹50 ಸಾವಿರ ಕಳೆದುಕೊಂಡ ಬೆಂಗಳೂರು ಮಹಿಳೆ!

ಜಾತಿ ನಮೂದಿಸಿರುವ ವಾಹನಗಳು ಇನ್ಮುಂದೆ ಸೀಜ್‌: ಇಲ್ಲಿ ಬಂತು ಹೊಸ ರೂಲ್ಸ್‌

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:7 − 3 =
Remember me
