ಗಾಂಧಿನಗರ (ಗುಜರಾತ್‌):ಕೆಲ ತಿಂಗಳ ಹಿಂದಷ್ಟೇ ಪಂಜಾಬ್‌ನ 70 ವರ್ಷದ ಆಸುಪಾಸಿನ ಮಹಿಳೆಯೊಬ್ಬರು ಮಗುವನ್ನು ಹೆತ್ತು ಭಾರಿ ಸುದ್ದಿಮಾಡಿದ್ದರು. ಇದೀಗ ಅದೇ ವಯಸ್ಸಿನ ಇನ್ನೋರ್ವ ಮಹಿಳೆ ಮೊದಲ ಕಂದನನ್ನು ಪಡೆದಿದ್ದಾರೆ. ಮುದ್ದು ಕಂದನನ್ನು ನೋಡಿ ಈ ದಂಪತಿ ಕುಣಿದು ಕುಪ್ಪಳಿಸಿದ್ದಾರೆ.
ಗುಜರಾತ್‍ನ ಕಛ್‍ನ ಜೀವುಬೆನ್ ವಾಲಾಭಾಯಿ ರಬರಿ ಅವರು ಮಗುವನ್ನು ಹೆತ್ತವರು. ರಾಪರ್ ತಾಲ್ಲೂಕಿನ ಮೋರಾ ಗ್ರಾಮದ ನಿವಾಸಿಯಾಗಿರುವ ಈ ದಂಪತಿಗೆ ಮದುವೆಯಾಗಿ 45ನೇ ವಯಸ್ಸಿಗೆ ಈ ಮಗು ಜನಿಸಿದೆ. ಜೀವುಬೆನ್‌ ಅವರಿಗೆ ತಮ್ಮ ವಯಸ್ಸಿನ ಬಗ್ಗೆ ಸರಿಯಾದ ಆಧಾರವಿಲ್ಲವಂತೆ. ಅದಕ್ಕೆ ಅವರು ಹೇಳುವುದು ಏನೆಂದರೆ, ’ನಾನು ಸುಮಾರು 65 ರಿಂದ 70 ಬೇಸಿಗೆಕಾಲವನ್ನು ನೋಡಿದ್ದೇನೆ. ವಯಸ್ಸಿನ ಬಗ್ಗೆ ಹೆಚ್ಚಿನ ಆಧಾರವಿಲ್ಲ. ಮಗುವನ್ನು ಪಡೆಯಲು ತುಂಬಾ ಪ್ರಯತ್ನಿಸಿ ಈಗ ಯಶಸ್ವಿಯಾಗಿದ್ದೇವೆ’ ಎಂದಿದ್ದಾರೆ.
’ಮಗುವಿಗೆ ಜನ್ಮ ನೀಡಲೇಬೇಕು ಎಂದು ದಂಪತಿ ಹೇಳಿಕೊಂಡಾಗ ಮೊದಲು ನಾವು ನಿರಾಕರಿಸಿದೆವು. ಈ ವಯಸ್ಸಿನಲ್ಲಿ ಗರ್ಭಧಾರಣೆ ತುಂಬಾ ಅಪಾಯ ಎಂದೂ ಹೇಳಿದ್ದೆವು. ಆದರೆ ಅವರು ಮಗು ಬೇಕೆಂದು ಪಟ್ಟು ಹಿಡಿದರು. ಅದಕ್ಕೆ ನಾವು ಮಣಿಯಲೇಬೇಕಾಯಿತು ಎಂದಿದ್ದಾರೆ ಸ್ತ್ರೀರೋಗ ತಜ್ಞ ಡಾ. ನರೇಶ್ ಭಾನುಶಾಲಿ. ನಾವು ಮೊದಲು ಔಷಧಿಗಳನ್ನು ನೀಡಿ ಈ ಮೂಲಕ ಋತುಚಕ್ರವನ್ನು ನಿಯಮಿತವಾಗಿ ಆಗುವಂತೆ ಮಾಡಿದ್ದೇವೆ. ಎರಡು ವಾರಗಳ ನಂತರ ಸೋನೋಗ್ರಫಿ ಮಾಡಿದಾಗ ಭ್ರೂಣ ಬೆಳೆಯುತ್ತಿರುವುದು ಕಂಡಿತು. ಮಗುವಿನ ಹೃದಯ ಬಡಿತ ಕೂಡ ಶುರುವಾಯ್ತು. ಮಗುವಿನ ಬೆಳವಣಿಗೆಯಲ್ಲಿ ಯಾವುದೇ ದೋಷ ಕಾಣಲಿಲ್ಲ, ಆದ್ದರಿಂದ ಗರ್ಭಧಾರಣೆಯೊಂದಿಗೆ ಮುಂದುವರೆಸಿದೆವು. ಈಗ ಮಗು ಹಾಗೂ ತಾಯಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಇದು ದೊಡ್ಡ ಸವಾಲಿನ ಕೆಲಸವಾಗಿತ್ತು. ನಮ್ಮ ಸರ್ವಿಸ್‌ನಲ್ಲಿ ಇಂಥ ಶಸ್ತ್ರಚಿಕಿತ್ಸೆ ಮಾಡಿದ್ದು ಇದೇ ಮೊದಲು ಎಂದು ಅವರು ತಿಳಿಸಿದರು.
ನಿರ್ದೇಶಕನ ಜತೆ ಡೇಟಿಂಗ್‌ನಲ್ಲಿರೋ ನಟಿ ನಯನತಾರಾ ಮದ್ವೆ ಮರದ ಜತೆ ಫಿಕ್ಸ್‌!

ಜಲಪಾತದಲ್ಲಿ ಸೆಲ್ಫಿ ತೆಗೆಯಲು ಹೋಗಿ 50 ಅಡಿ ಬಿದ್ದ ಪಾವಗಡದ ಯುವಕ- ಮುಂದಾದದ್ದು ದುರಂತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − eight =
Remember me
