ಬಾರಾಮತಿ (ಮಹಾರಾಷ್ಟ್ರ):ಮನೆಯಲ್ಲಿ ಮಕ್ಕಳು ಇರುವಾಗ ಮೈಯೆಲ್ಲಾ ಕಣ್ಣಾಗಿ ಇರಬೇಕು. ಮಕ್ಕಳು ಯಾವಾಗ ಏನು ಬೇಕಾದರೂ ಬಾಯೊಳಗೆ ಹಾಕಿಕೊಳ್ಳುವ ಅಪಾಯವಿದೆ. ಪಾಲಕರು ಅದನ್ನು ಗಮನಿಸದೇ ಹೋಗುವ ಕಾರಣ, ಎಷ್ಟೋ ಮಕ್ಕಳು ಜೀವ ಕಳೆದುಕೊಂಡಿರುವ ಉದಾಹರಣೆಗಳಿವೆ. ಅಂಥದ್ದೇ ಒಂದು ಘಟನೆ ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದಿದೆ. ಆದರೆ ಅದೃಷ್ಟವಶಾತ್​ ಮಗು ಬಚಾವಾಗಿದೆ.
ಆಗಿದ್ದೇನೆಂದರೆ, ಎಂಟು ತಿಂಗಳ ಪುಟಾಣಿ ಕಾರ್ತಿಕ್​ ಸಿಂಗ್​ ಇದ್ದಕ್ಕಿದ್ದಂತೆಯೇ ಅಮ್ಮನ ಎದೆಹಾಲು ಕುಡಿಯುವುದನ್ನು ನಿಲ್ಲಿಸಿಬಿಟ್ಟ. ಹಸಿವಿನಿಂದ ಅಳುತ್ತಿದ್ದನೇ ವಿನಾ ಹಾಲು ಕೊಟ್ಟರೆ ಕುಡಿಯುತ್ತಿರಲಿಲ್ಲ. ನಂತರ ಆತನಿಗೆ ತಿಂಡಿ ತಿನಿಸಲು ಮುಂದಾದರೂ ಅದನ್ನು ತಿನ್ನುತ್ತಿರಲಿಲ್ಲ. ಇದಕ್ಕೆ ಕಾರಣ ಮಾತ್ರ ಪಾಲಕರಿಗೆ ತಿಳಿಯಲೇ ಇಲ್ಲ. ಒಂದು ರೀತಿಯ ನೋವಿನಿಂದ ನರಳುತ್ತಿದ್ದ.
ಕೂಡಲೇ ಮಗುವನ್ನು ವೈದ್ಯರ ಬಳಿ ಕರೆದುಕೊಂಡು ಹೋದಾಗ ಆರಂಭದಲ್ಲಿ ಕೆಲವೊಂದು ಮಾತ್ರೆ ನೀಡಲಾಗಿದೆ. ಏನೇ ಮಾಡಿದರೂ ಮಗು ಹಾಲು ಕುಡಿಯಲೂ ಇಲ್ಲ, ಅಳುವುದನ್ನು ನಿಲ್ಲಿಸಲೇ ಇಲ್ಲ. ಸ್ವಲ್ಪ ದಿನದಲ್ಲಿಯೇ ಉಸಿರಾಡಲೂ ಕಷ್ಟ ಪಟ್ಟ. ಇದರಿಂದ ಅಪ್ಪ-ಅಮ್ಮ ಗಾಬರಿಗೊಂಡರು.

ನಂತರ ಬೇರೊಬ್ಬ ವೈದ್ಯರ ಬಳಿ ಹೋದಾಗ ಹೊಟ್ಟೆಯಲ್ಲಿ ಏನೋ ಸಿಲುಕಿರಬಹುದು ಎಂದು ಅಂದುಕೊಂಡ ಅವರು ಎಕ್ಸ್​ರೇ ಮಾಡಿದಾಗ ಶಾಕ್​ ಆಗಿದ್ದಾರೆ. ಏಕೆಂದರೆ ಶ್ವಾಸಕೋಶದಲ್ಲಿ ಒಂದು ಗೋಲಾಕಾರದ ಚಿಕ್ಕ ವಸ್ತು ಕಂಡಿದೆ.
ನಂತರ ಇದೇನೆಂದು ನೋಡಿದಾಗ, ಅಲ್ಲಿ ಕಂಡದ್ದು ಅಮ್ಮನ ಕಾಲುಂಗುರ! ತಾಯಿಗೆ ಈ ಬಗ್ಗೆ ಕೇಳಿದಾಗ ಅವರು, ಹೌದು ನನ್ನ ಕಾಲುಂಗುರ ಇದ್ದಕ್ಕಿದ್ದ ಹಾಗೇ ಕಾಣೆಯಾಗಿತ್ತು. ಎಲ್ಲಿ ಹುಡುಕಾಡಿದರೂ ಸಿಗಲಿಲ್ಲ, ಎಲ್ಲೋ ಕಳೆದುಹೋಗಿರಬೇಕು ಎಂದುಕೊಂಡು ಸುಮ್ಮನಾಗಿದ್ದೆ, ಆದರೆ ಮಗು ಅದನ್ನು ಬಾಯೊಳಗೆ ಹಾಕಿಕೊಂಡದ್ದು ಗೊತ್ತೇ ಆಗಲಿಲ್ಲ ಎಂದರು. ಮಗು ಅಮ್ಮನ ಕಾಲ ಬಳಿ ಆಡುತ್ತಿದ್ದ ವೇಳೆ, ಗೊತ್ತಿಲ್ಲದೇ ಕಾಲುಂಗುರ ತೆಗೆದು ಅದನ್ನು ಬಾಯಿಗೆ ಹಾಕಿಕೊಂಡಿರಬಹುದು ಎಂದು ವೈದ್ಯರು ಹೇಳಿದ್ದಾರೆ.
ವೈದ್ಯರು ಆಪರೇಷನ್ ಮಾಡಿ ಶ್ವಾಸನಾಳದಿಂದ ಕಾಲುಂಗುರವನ್ನು ಹೊರತೆಗೆದಿದ್ದಾರೆ. ಸದ್ಯ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ! ಇನ್ನು ಸ್ವಲ್ಪ ದಿನ ಕಳೆದಿದ್ದರೆ ಆತನ ಜೀವಕ್ಕೇ ಅಪಾಯ ಆಗುವ ಸಾಧ್ಯತೆ ಇತ್ತು ಎಂದು ವೈದ್ಯರು ಹೇಳಿದ್ದಾರೆ.(ಏಜೆನ್ಸೀಸ್​)
ಮನೆಯಲ್ಲಿ ಆಟವಾಡುತ್ತಾ ಸೊಳ್ಳೆನಾಶಕ ಲಿಕ್ವಿಡ್​ ಕುಡಿದು 2 ವರ್ಷದ ಮಗು ಸಾವು! ಹೊನ್ನಾವರದಲ್ಲಿ ಘಟನೆ

ಕತ್ತೆ ಕಾಯ್​ ಹೋಗು… ಅಂತ ಬಯ್ಯೋ ಮುನ್ನ ಇದನ್ನ ಓದಿ: ಲಕ್ಷ ಲಕ್ಷ ಸಂಪಾದಿಸ್ತಿದ್ದಾರೆ ಈ ಫಾರಿನ್ ರಿಟರ್ನ್ಡ್​ ಟೆಕ್ಕಿ!


ಕತ್ತೆ ಕಾಯ್​ ಹೋಗು… ಅಂತ ಬಯ್ಯೋ ಮುನ್ನ ಇದನ್ನ ಓದಿ: ಲಕ್ಷ ಲಕ್ಷ ಸಂಪಾದಿಸ್ತಿದ್ದಾರೆ ಈ ಫಾರಿನ್ ರಿಟರ್ನ್ಡ್​ ಟೆಕ್ಕಿ!

VIDEO: ನಾಲ್ಕಂತಸ್ತಿನ ಕಟ್ಟಡ ಕುಸಿತ- ಹಲವರು ಸಿಲುಕಿರುವ ಶಂಕೆ- ಭಯಾನಕ ವಿಡಿಯೋ ಇಲ್ಲಿದೆ ನೋಡಿ…

VIDEO: ಶಿವಮೊಗ್ಗದ ಚಾಕು ಇರಿತದ ಆರೋಪಿಗಳಿಗೆ ಎಸ್​ಡಿಪಿಐ ಲಿಂಕ್​- ಕೋಮು ಗಲಭೆಯೇ ಟಾರ್ಗೆಟ್​? ವಿಡಿಯೋ ನೀಡಿದೆ ಸಾಕ್ಷ್ಯ

VIDEO: ಡ್ರಗ್ಸ್​ ಸೇವಿಸಿ ಕುಣಿದು ಕುಪ್ಪಳಿಸಿದ ಪ್ರಧಾನಿ? ವೈರಲ್​ ವಿಡಿಯೋದಿಂದ ಪೇಚಿಗೆ ಸಿಲುಕಿದ ಲೇಡಿ ಪಿಎಂ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 + 2 =
Remember me
