ಆಸ್ಟ್ರೇಲಿಯಾ:ಪ್ರೀತಿಗೆ ವಯಸ್ಸಲ್ಲ, ಮನಸ್ಸು ಮುಖ್ಯ ಎನ್ನುವುದು ತೀರಾ ಹಳೆದ ನಾಣ್ಣುಡಿ. ಅದಕ್ಕೆ ಪುಷ್ಪಿ ನೀಡಲು ಎಂಬಂತೆ ಇಲ್ಲೊಂದು ವಿಭಿನ್ನವಾಗಿರುವ ಲವ್​ ಸ್ಟೋರಿ ನಡೆದಿದೆ. ಇದು 80 ವರ್ಷದ ಅಜ್ಜ ಹಾಗೂ 84 ವರ್ಷದ ಅಜ್ಜಿಯ ಕಥೆ. ಓಡಿ ಹೋಗಿ ಸಿಕ್ಕಿಬಿದ್ದ ಈ ಜೋಡಿಯ ಕಥೆ ಏನು ನೋಡಿ…
ಆಸ್ಟ್ರೇಲಿಯಾದ ನಿವಾಸಿ ರಾಲ್ಫ್ ಗಿಬ್ಸ್ ಎಂಬ 80 ವರ್ಷದ ವ್ಯಕ್ತಿ ಬಹಳ ವರ್ಷಗಳಿಂದಲೂ ಕರೋಲ್​ ಲಿಸ್ಲೆ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಆದರೆ ಕೆಲ ಕಾರಣಗಳಿಂದ ಇವರಿಬ್ಬರೂ ಮದುವೆಯಾಗಲು ಸಾಧ್ಯವಾಗಿರಲಿಲ್ಲ.
ಈ ನಡುವೆ, ಲಿಸ್ಲೆ, ವಯೋಸಹಜವಾಗಿ ಅನಾರೋಗ್ಯದಿಂದ ಬಳಲುತ್ತಿದ್ದಳು. ಆಕೆಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಅವಳ ಜ್ಞಾಪಕ ಶಕ್ತಿಯು ದುರ್ಬಲವಾಗಿತ್ತು. ಆಕೆಯನ್ನು ಮನೆಯವರು ನರ್ಸಿಂಗ್ ಸೆಂಟರ್‌ಗೆ ದಾಖಲು ಮಾಡಿದ್ದರು. ಈ ವಿಷಯವು ರಾಲ್ಫ್ ಗಿಬ್ಸ್​ಗೆ ತಿಳಿಯಿತು. ತನ್ನ ಪ್ರೇಯಸಿ ಈ ರೀತಿ ತೊಂದರೆ ಪಡುತ್ತಿರುವುದನ್ನು ಅವರಿಗೆ ನೋಡಲು ಆಗಲಿಲ್ಲ.
ಅವರು ನರ್ಸಿಂಗ್ ಸೆಂಟರ್‌ಗೆ ಬಂದು ಪ್ರೇಯಸಿಯನ್ನು ಭೇಟಿಯಾದರು. ಆಕೆ ಕೂಡ ತನ್ನ ಪ್ರಿಯತಮನ ನೋಡಿ ಹಿರಿಹಿರಿ ಹಿಗ್ಗಿದರು. ಆದರೆ ನರ್ಸಿಂಗ್ ಸೆಂಟರ್‌ ನಿಯಮದ ಪ್ರಕಾರ ಅಲ್ಲಿಂದ ಹೊರಕ್ಕೆ ಹೋಗುವಂತಿರಲಿಲ್ಲ. ಅದಕ್ಕಾಗಿ ಪ್ಲ್ಯಾನ್​ ಮಾಡಿದ ಈ ಹಿರಿಯ ಜೀವ, ಅಲ್ಲಿಯವರ ಕಣ್ಣುತಪ್ಪಿಸಿ ಓಡಿ ಹೋದರು. ಕ್ವೀನ್​ಲ್ಯಾಂಡ್ ಕಡೆಗೆ ಇಬ್ಬರೂ ತಪ್ಪಿಸಿಕೊಂಡು ಹೋಗುವಾದ ನರ್ಸಿಂಗ್​ ಸೆಂಟರ್​ನಿಂದ ದೂರು ದಾಖಲಾಗಿತ್ತು. ಪೊಲೀಸರು ಈ ಜೋಡಿಯನ್ನು ಹಿಡಿದುಬಿಟ್ಟರು.
ರಾಲ್ಫ್ ಗಿಬ್ಸ್​ಗೆ ಅಪಹರಣದ ಆರೋಪದ ಮೇಲೆ ಏಳು ತಿಂಗಳ ಶಿಕ್ಷೆ ವಿಧಿಸಿದೆ. ಎರಡು ವರ್ಷ ಇಬ್ಬರೂ ಭೇಟಿಯಾಗಬಾರದು ಎಂದೂ ಹೇಳಿದೆ. ಆಕೆಯನ್ನು ಪುನಃ ನರ್ಸಿಂಗ್ ಸೆಂಟರ್‌ಗೆ ಕರೆದುಕೊಂಡು ಹೋಗಲಾಗಿದೆ. ಎಷ್ಟೋ ವರ್ಷಗಳ ಬಳಿಕ ಒಂದಾದ ಜೋಡಿ ಮತ್ತೆ ಬೇರೆ ಬೇರೆಯಾಗಿದ್ದು, ಪ್ರಿಯಕರ ಈ ವಯಸ್ಸಿನಲ್ಲಿ ಜೈಲು ಅನುಭವಿಸುವಂತಾಗಿದೆ.
ಲೈಂಗಿಕ ದೌರ್ಜನ್ಯ ಎಸಗಿದರೆಂದು ಸ್ವಾಮೀಜಿಯ ಮರ್ಮಾಂಗ ಕತ್ತರಿಸಿದಳು: ಆದರೆ ನಡೆದದ್ದೇ ಬೇರೆ…!

ಕಂದಕಕ್ಕೆ ಬಿದ್ದ ಮ್ಯಾಕ್ಸಿಕ್ಯಾಬ್​: ಮದುವೆಗೆ ಹೋದ 10ಕ್ಕೂ ಅಧಿಕ ಮಂದಿಯ ದಾರುಣ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
