ಮುಂಬೈ:ದೇವರಿಗೆ, ಹಿರಿಯರಿಗೆ ನಮಸ್ಕಾರ ಮಾಡುವುದು ಸಹಜ. ಅದೇ ರೀತಿ ನಮ್ಮ ದೈನಂದಿನ ಜೀವನದಲ್ಲಿ ದೇವರ ರೂಪದಲ್ಲಿ ನಾವು ಏನೇನು ಕಾಣುತ್ತೇವೆಯೋ (ಉದಾ: ಅಂಗಡಿ, ಕಚೇರಿ, ಮನೆ) ಅವುಗಳಿಗೂ ನಿತ್ಯವೂ ನಮಸ್ಕರಿಸಿಯೇ ಕೆಲಸ ಶುರು ಮಾಡುವವರೂ ಇದ್ದಾರೆ. ಆದರೆ ಇಲ್ಲೊಂದು ಅಪರೂಪದ ಫೋಟೋ ಒಂದು ವೈರಲ್​ ಆಗಿದೆ. ಅದು ವ್ಯಕ್ತಿಯೊಬ್ಬ ರೈಲಿನ ಬಾಗಿಲಿಗೆ ತಲೆಬಾಗಿ ನಮಸ್ಕರಿಸಿದ ಫೋಟೋ.
ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದೆ. ಮುಂಬೈನ ರೈಲೊಂದಕ್ಕೆ ಯುವಕನೊಬ್ಬ ಬಗ್ಗಿ ನಮಸ್ಕಾರ ಮಾಡುವ ಫೋಟೋ ಇದು.
ಕರೊನಾ ಹಿನ್ನೆಲೆಯಲ್ಲಿ ಮೊದಲು ಲಾಕ್​ಡೌನ್ ನಡೆಯಿತು., ಆನಂತರ ಲಾಕ್​ಡೌನ್​ ತೆರವಾದರೂ ಕರೊನಾ ಸೋಂಕು ಹೆಚ್ಚಾಗಿ ಹರಡಬಲ್ಲ ಕಾರಣ ರೈಲು ಓಡಾಟವನ್ನು ಶುರು ಮಾಡಿರಲಿಲ್ಲ. ನಂತರ 10 ತಿಂಗಳ ಬಳಿಕ ನಿಧಾನವಾಗಿ ರೈಲಿನ ಓಡಾಟ ಆರಂಭವಾಗಿದೆ.
A click that touched my heart, a commuter worshipping Mumbai Local before boarding after 11 months. ❤️pic.twitter.com/AqEhlTaH0Z
— Godman Chikna (@Madan_Chikna)February 2, 2021

ಅದೇ ರೀತಿ ಮುಂಬೈನ ಲೋಕಲ್​ ಟ್ರೇನ್​ ಕೂಡ 10 ತಿಂಗಳ ನಂತರ ಕಾರ್ಯ ಆರಂಭಿಸಿದೆ. ಇಷ್ಟು ಸುದೀರ್ಘ ಅವಧಿಯ ನಂತರ ಮೊದಲ ಬಾರಿಗೆ ರೈಲು ಹತ್ತುತ್ತಿರುವ ಕಾರಣ, ಯುವಕನೊಬ್ಬ ರೈಲಿನ ಬಾಗಿಲಿಗೆ ತಲೆಯಿಟ್ಟು ನಮಸ್ಕರಿಸಿದ್ದಾರೆ. ಇದನ್ನು ಸ್ಥಳದಲ್ಲಿ ಇದ್ದವರು ಫೋಟೋ ತೆಗೆದು ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ.
ಹಿಮಾಂಶು ಪರ್ಮಾರ್ ಎನ್ನುವವರು ಶೇರ್​ ಮಾಡಿಕೊಂಡಿರುವ ಈ ಫೋಟೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದು ನಮ್ಮ ಭಾರತೀಯ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕಡಿಮೆ ದರದಲ್ಲಿ ನಿಗದಿತ ಗುರಿಯನ್ನು ತಲುಪಿಸುವ ರೈಲು ಹಲವಾರ ಪಾಲಿಗೆ ದೇವರ ಸಮಾನವಾಗಿದೆ. ಅಂಥ ರೈಲಿಗೆ ತಲೆಬಾಗಿ ನಮಸ್ಕರಿಸುತ್ತಿರುವುದು ಒಳ್ಳೆಯ ಸಂಸ್ಕೃತಿ ಎಂದಿದ್ದಾರೆ ಇನ್ನು ಕೆಲವರು. ರೈಲಿನಿಂದ ತನಗೆ ಕರೊನಾ ಬಾರದಿರಲಿ ಎನ್ನುವ ಕಾರಣಕ್ಕೆ ಯುವಕ ನಮಸ್ಕಾರ ಮಾಡಿರಲಿಕ್ಕೆ ಸಾಕು ಎಂದೂ ಹೇಳಿದ್ದಾರೆ ಕೆಲವರು.
ಹೆಂಡತಿಗೆ ಕಳ್ಳತನ ಮಾಡೋ ಚಟ- ಇದು ಮನೋರೋಗವೆ? ಪ್ಲೀಸ್​ ಪರಿಹಾರ ಹೇಳಿ..

‘ವೇಶ್ಯೆಯ ಸಹವಾಸ ಮಾಡಿದ್ರೇನು, ಅವನು ಗಂಡಸು ಕಣೆ… ಏನು ಬೇಕಾದ್ರೂ ಮಾಡ್ಬೋದು…’

ಬಯಲಾಯ್ತು ಕರಾಳಮುಖ! ಪ್ರತಿಭಟನೆ ಹೆಸರಲ್ಲಿ ಭಾರತಕ್ಕೆ ಕಪ್ಪುಮಸಿ ಬಳಿಯೋದು ಹೇಗೆ ಎಂದು ಪಾಠ ಮಾಡಿದ ‘ಪರಿಸರ ಹೋರಾಟಗಾರ್ತಿ’…

ಒಂದೆಡೆ ಪತ್ನಿ, ಇನ್ನೊಂದೆಡೆ ಮದುವೆಯಾಗಲು ಪ್ರೇಯಸಿ ಒತ್ತಾಯ- ಮೈಸೂರಿನಲ್ಲಿ ಬಿತ್ತು ಎರಡು ಹೆಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 10 =
Remember me
