ನವದೆಹಲಿ:ಯಾವುದೇ ಪ್ರತಿಭಟನೆಗಳು ನಡೆದಾಗ, ಅದರ ದುರ್ಲಾಭ ಪಡೆದು ಕೆಲವು ಕಿಡಿಗೇಡಿಗಳು ಹೀನಾಯಕೃತ್ಯಕ್ಕೆ ಇಳಿಯುವುದು ಇಂದಿನ ದಿನಗಳಲ್ಲಿ ಮಾಮೂಲಾಗಿದೆ.
ಅದೇ ರೀತಿ ನೂತನ ಕೃಷಿ ಕಾನೂನಿನ ವಿರುದ್ಧವಾಗಿ ನಡೆಯುತ್ತಿರುವ ಪ್ರತಿಭಟನೆ ವೇಳೆ ದೆಹಲಿಯ ಪ್ರಸಿದ್ಧ ಇಂಡಿಯಾ ಗೇಟ್​ ಬಳಿ ಕಿಡಿಗೇಡಿಗಳು ಟ್ರ್ಯಾಕ್ಟರ್​ಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾರೆ. ಸುಮಾರು 15-20 ಮಂದಿಯ ಗುಂಪು ಈ ಕೃತ್ಯ ಎಸಗಿರುವುದಾಗಿ ಪೊಲೀಸರು ಹೇಳಿದ್ದಾರೆ.
#WATCH: A tractor was set ablaze by unidentified persons near India Gate, today. DCP New Delhi says,"Around 15- 20 persons gathered here & tried to set a tractor on fire. The fire has been doused off & tractor was also removed. Those involved are being identified. Probe underway"pic.twitter.com/IKlOxq4mbj
— ANI (@ANI)September 28, 2020

ಬೆಂಕಿಗಾಹುತಿಯಾಗಿರುವ ಟ್ರ್ಯಾಕ್ಟರ್​ ಅನ್ನು ತೆರವುಗೊಳಿಸಿರುವ ಪೊಲೀಸರು ಕಿಡಿಗೇಡಿಗಳನ್ನು ಗುರುತಿಸಲಾಗಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಪ್ರತಿಭಟನೆಯನ್ನು ಹಿಂಸೆಗೆ ತಿರುಗಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಮಸಿಬಳಿಯುವ ಯತ್ನ ಇದಾಗಿರುವುದಾಗಿ ಹಲವರು ಆರೋಪಿಸಿದ್ದಾರೆ.
ತಮ್ಮ ಜೀವನಾಧಾರವಾಗಿರುವ ಟ್ರ್ಯಾಕ್ಟರ್​ ಅನ್ನು ಯಾವುದೇ ಕಾರಣಕ್ಕೂ ಪ್ರತಿಭಟನಾನಿರತ ರೈತರು ಸುಡಲು ಸಾಧ್ಯವೇ ಇಲ್ಲ. ರೈತರ ಪರವಾಗಿರುವ ಕಾನೂನಿನ ವಿರುದ್ಧ ಇಲ್ಲಸಲ್ಲದ ಗುಲ್ಲು ಹಬ್ಬಿಸಿರುವ ಕೆಲವು ಕುತಂತ್ರ ಬುದ್ಧಿಯವರು ರೈತರ ತಲೆಯನ್ನು ತಿರುಗಿಸಿದ್ದಾರೆ. ಈ ಕಿಡಿಗೇಡಿಗಳೇ ಟ್ರ್ಯಾಕ್ಟರ್​ಗೆ ಬೆಂಕಿ ಹಚ್ಚಿರುವುದು ಎಂದು ಆರೋಪಗಳು ಕೇಳಿಬಂದಿವೆ.
ಈ ಮಧ್ಯೆಯೇ ಇಂಥ ಹಿಂಸಾಚಾರಕ್ಕೆ ಕೆಲವು ರಾಜಕೀಯ ಪಕ್ಷಗಳು ಕುಮ್ಮಕ್ಕು ನೀಡುತ್ತಿವೆ ಎಂದು ಗಂಭೀರ ಆರೋಪಗಳನ್ನೂ ಮಾಡಲಾಗುತ್ತಿದೆ.
ಜೈಲಿನೊಳಗೇ ಸುರಂಗ ತೋಡಿ ಡ್ರಗ್​ ಪೆಡ್ಲರ್​ ಎಸ್ಕೇಪ್​; ಕಣ್​ಕಣ್​ ಬಿಡ್ತಿದ್ದಾರೆ ಅಧಿಕಾರಿಗಳು!

ಪತ್ನಿ ವಿರುದ್ಧ ಕಿರಿಕ್​ ಮಾಡಿಕೊಂಡು, ಗೆಳತಿ ಮೇಲೆ ಗುಂಡುಹಾರಿಸಿ ಕಾರಿನಿಂದ ತಳ್ಳಿದ ಸಬ್​ಇನ್ಸ್​ಪೆಕ್ಟರ್​!

ವಿಚ್ಛೇದನಕ್ಕೆ ಒಪ್ಪಿದವಳು ಈಗ ಕೋರ್ಟ್​ಗೆ ಬರುತ್ತಲೇ ಇಲ್ಲ: ನನಗೇನು ಪರಿಹಾರವಿದೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 − 1 =
Remember me
