ರೋಹ್ಟಕ್‌ (ಹರಿಯಾಣ):ಜೀವವೊಂದು ಗಟ್ಟಿಯಿದ್ದರೆ, ಆಯಸ್ಸು ಇನ್ನೂ ಮುಗಿಯದಿದ್ದರೆ ಭಾರಿ ಬಂಡೆಯಷ್ಟೇ ಏಕೆ, ಟ್ರೇನ್‌ ಹಾದುಹೋದರೂ ಏನೂ ಆಗುವುದಿಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.
ಹರಿಯಾಣದ ರೋಹ್ಟಕ್‌ನಲ್ಲಿ ನಡೆದಿರುವ ಈ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ನೋಡುಗರನ್ನು ಬೆಚ್ಚಿಬೀಳಿಸುವಂತಿದೆ. ಮಹಿಳೆಯ ಮೇಲೆ ರೈಲು ಹಾದುಹೋದರೂ ಆಕೆಗೆ ಏನೂ ಆಗದೇ ಆರಾಮಾಗಿ ಎದ್ದು ಬಂದಿರುವ ಘಟನೆ ಇದಾಗಿದೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಗೂಡ್ಸ್‌ ರೈಲು ಹೊರಡುವ ಸಿದ್ಧತೆಯಲ್ಲಿತ್ತು. ಗೋಹಾನಾದಿಂದ ಸಿಗ್ನಲ್ ಸಿಗದ ಕಾರಣ ಸರಕು ರೈಲು ಗೇಟ್ ಬಳಿ ನಿಂತಿತ್ತು. ಹೊರಡುವ ಮುಂಚೆ ನೀಡಲಾಗುವ ಗ್ರೀನ್‌ ಸಿಗ್ನಲ್‌ಗೆ ಕಾಯುತ್ತಿದ್ದ ಚಾಲಕ. ಆದರೆ ಅದನ್ನು ಗಮನಿಸದ ಈ ಮಹಿಳೆ ರೈಲು ಚಲಿಸಲು ಆರಂಭಿಸುವುದರೊಳಗೆ ಅತ್ತ ಬದಿ ದಾಟಿಕೊಂಡು ಬಿಡೋಣ ಎಂದುಕೊಂಡು ದಾಟಲು ಮುಂದಾಗಿದ್ದಾಳೆ.
#WATCH| A woman saved her life by lying down on a railway track in Haryana's Rohtak after she got trapped beneath a moving train. The train was earlier on standby, awaiting a signal. She allegedly tried to cross it by going under when the train began to move suddenly (17.02)pic.twitter.com/kkuY1jtihm
— ANI (@ANI)February 18, 2021

ಅಷ್ಟೊತ್ತಿಗಾಗಲೇ ರೈಲು ಹೊರಡಲು ಸಿಗ್ನಲ್‌ ಸಿಕ್ಕಿದ್ದರಿಂದ ರೈಲು ಹೊರಟೇ ಬಿಟ್ಟಿದೆ. ನಡುವೆ ಮಹಿಳೆ ಸಿಲುಕಿಕೊಂಡಿದ್ದಾಳೆ. ಅತ್ತ- ಇತ್ತ ಎತ್ತಲೂ ಹೋದರೂ ರೈಲಿನ ಅಡಿಯಾಗುವ ಸಾಧ್ಯತೆ ಇತ್ತು. ಹೀಗೆ ಆಗಿದ್ದರೆ ಜೀವ ಕಳೆದುಕೊಳ್ಳಬೇಕಿತ್ತು. ಸಮಯಪ್ರಜ್ಞೆ ಮೆರೆದ ಈ ಮಹಿಳೆ ಆಗಿದ್ದಾಗಲಿ ಎಂದು ರೈಲು ಹಳಿಗಳ ನಡುವೆ ಉದ್ದಕ್ಕೆ ಮಲಗಿಬಿಟ್ಟಿದ್ದಾಳೆ. ರೈಲಿನ ಬಗ್ಗೆ ಚೆನ್ನಾಗಿ ಪರಿಚಯವಿದ್ದುದರಿಂದ ಹಾಗೂ ಇದು ಗೂಡ್ಸ್‌ ರೈಲು ಆಗಿದ್ದರಿಂದ ಹೀಗೆ ಮಲಗಿದರೆ ತನ್ನ ಪ್ರಾಣ ಕಾಪಾಡಿಕೊಳ್ಳಬಹುದು ಎಂದು ಈಕೆಗೆ ಅರಿವಿತ್ತು. ಆದ್ದರಿಂದ ಉದ್ದಕ್ಕೆ ಮಲಗಿದ್ದಾಳೆ.
ರೈಲು ಆಕೆಯ ಮೇಲೆ ಹಾದುಹೋಗಿದೆ. ಅಲ್ಲಿದ್ದವರು ಇದರ ವಿಡಿಯೋ ಮಾಡಿಕೊಂಡಿದ್ದಾರೆ. ರೈಲು ಕಿಲೋಮೀಟರ್‌ಗಟ್ಟಲೆ ಉದ್ದವಿರುವುದರಿಂದ ರೈಲು ಸಂಪೂರ್ಣವಾಗಿ ದಾಟುವವರೆಗೂ ಮಹಿಳೆ ಅಲ್ಲಿಯೇ ಮಲಗಿದ್ದಾರೆ. ನಂತರ ರೈಲು ಹೋದ ಮೇಲೆ ಏನೂ ಆಗದವರಂತೆ ಎದ್ದು ಬಂದಿದ್ದಾರೆ.62 ವರ್ಷದ ಈ ಮಹಿಳೆಯ ಸಾಹಸವೀರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ಕ್ರಿಕೆಟ್‌ ಪಂದ್ಯಾವಳಿ ವೇಳೆ ಆಡುತ್ತಲೇ ಪ್ರಾಣಬಿಟ್ಟ ಕ್ರಿಕೆಟಿಗ- ವಿಡಿಯೋದಲ್ಲಿ ದಾಖಲಾಯ್ತು ಸಾವಿನ ದೃಶ್ಯ

‘ನಾನು ಸಾಯುತ್ತಿದ್ದೇನೆ, ಕ್ಷಮಿಸಿ… ಸಿದ್ದರಾಮಯ್ಯ ಸರ್‌, ಯಶ್‌ ಅಣ್ಣ ಪ್ಲೀಸ್‌ ನನ್ನ ಈ ಅಂತಿಮ ಇಚ್ಛೆ ಈಡೇರಿಸಿ…’

VIDEO: ಪ.ಬಂಗಾಳದಲ್ಲಿ ಬಾಂಬ್‌ ದಾಳಿ: ಗಂಭೀರ ಗಾಯಗೊಂಡ ಸಚಿವ- ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 2 =
Remember me
