ನವದೆಹಲಿ:ಕಟ್ಟಡದ ಮೇಲ್ಚಾವಣಿ ಹೊದಿಸಲು ನಗರಸಭೆಯಿಂದ ಅಗತ್ಯವಿರುವ ಸಹಾಯ ಒದಗಿಸಲು ರೂ. 20,000 ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ದೆಹಲಿಯ ಆಮ್‌ ಆದ್ಮಿ ಪಕ್ಷದ ಗೀತಾ ರಾವತ್ ಅವರನ್ನು ಬಂಧಿಸಲಾಗಿದೆ. ಎರಡು ತಿಂಗಳಲ್ಲಿ ದೆಹಲಿ ಮುನಿಸಿಪಲ್ ಕಾರ್ಪೋರೇಷನ್ ಚುನಾವಣೆಗಳು ನಡೆಯಲಿರುವುದರಿಂದ ಈ ಪ್ರಕರಣ ಭಾರಿ ಕೋಲಾಹಲ ಸೃಷ್ಟಿಸಿದೆ.
ಬಿಜೆಪಿ ಕೌನ್ಸೆಲರ್‌ ಭ್ರಷ್ಟಾಚಾರದ ಮುಳುಗಿದ್ದಾರೆ ಎಂದು ಇತ್ತೀಚೆಗೆ ಗಂಭೀರ ಆರೋಪ ಮಾಡಿದ್ದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಈ ವಿಷಯ ಭಾರಿ ಮುಜುಗರ ತಂದಿದೆ. ಗೀತಾ ರಾವತ್‌ ಅವರ ಈ ಭ್ರಷ್ಟಾಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ತಮ್ಮಿಂದ 20 ಸಾವಿರ ರೂಪಾಯಿ ಲಂಚ ಕೇಳುತ್ತಿರುವ ಬಗ್ಗೆ ವ್ಯಕ್ತಿಯೊಬ್ಬರು ಸಿಬಿಯ ಕಚೇರಿಯಲ್ಲಿ ದೂರು ದಾಖಲು ಮಾಡಿದ್ದರು. ನಂತರ ಗೀತಾ ಅವರನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿಯಲು ಯೋಜನೆ ರೂಪಿಸಲಾಗಿತ್ತು. ಗೀತಾ ರಾವತ್ ತಾವು ಪಡೆಯುವ ಲಂಚದ ಹಣವನ್ನು ಅವರ ಕಚೇರಿಯ ಬಳಿ ಅಂಗಡಿ ಇಟ್ಟುಕೊಂಡಿರುವ ನಾವುಲ್ಲಾ ಎಂಬುವವನಿಗೆ ಕೊಡಲು ಹೇಳುತ್ತಿದ್ದರು. ಅದರಂತೆ ಈ ವ್ಯಕ್ತಿಗೂ ಹೇಳಿದ್ದಾರೆ. ಸಿಬಿಐ ಅಧಿಕಾರಿಗಳು ಸನಾವುಲ್ಲಾನ ಬಳಿಗೆ ಹೋಗಿ ಅವನಿಗೆ ಒಂದಷ್ಟು ಹಣ ನೀಡಿ ನಗರ ಸಭೆಯಿಂದ ಒಂದು ಕೆಲಸ ಮಾಡಿಸಿಕೊಡು ಅಂತ ಹೇಳಿದ್ದಾರೆ. ಅವರು ನೀಡಿದ ಪಾರ್ಸೆಲ್ ತಲುಪಿಸಲು ಸನಾವುಲ್ಲಾ ರಾವತ್ ಅವರ ಕಚೇರಿಗೆ ಹೋದ ನಂತರ ಅವನನ್ನು ಮತ್ತು ಗೀತಾ ರಾವತ್ ಅವರನ್ನು ಬಂಧಿಸಿದ್ದಾರೆ.
ಗೀತಾ ರಾವತ್ ಅವರು ಅರವಿಂದ್ ಕೇಜ್ರಿವಾಲ್ ಹಾಗೂ ಮನೀಷ್ ಸಿಸೋಡಿಯಾ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದಾರೆ.
‘ನೀನು ಹೆಚ್ಚು ದಿನ ಬದುಕಲ್ಲ…’ ಹೈಕೋರ್ಟ್‌ ಆದೇಶ ಪಾಲಿಸಿ ಎಂದ ಪ್ರಾಂಶುಪಾಲರಿಗೆ ಜೀವ ಬೆದರಿಕೆ!

ಬಿಜೆಪಿ ಸಚಿವ, ಸಂಸದರಿಗೆ ಮುಜುಗರ ತಂದ ವಡಾಪಾವ್‌! ತಿಂದು ಬಿಲ್‌ ಕೊಡದೇ ಪೇಚಿಗೆ ಸಿಲುಕಿದರು….

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + sixteen =
Remember me
