ನವದೆಹಲಿ:ಸಾಫ್ಟ್​ವೇರ್​ ಇಂಜಿನಿಯರ್​ನನ್ನು ನಂಬಿಕೊಂಡು ಎಂಟು ವರ್ಷಗಳಲ್ಲಿ 14 ಬಾರಿ ಗರ್ಭಪಾತ ಮಾಡಿಸಿಕೊಂಡಿರೋ ಮಹಿಳೆಯೊಬ್ಬರು ಡೆತ್​ನೋಟ್​ ಬರೆದಿಟ್ಟು ಸಾವಿಗೆ ಶರಣಾಗಿರುವ ಘಟನೆ ಆಗ್ನೇಯ ದೆಹಲಿಯ ಜೈತ್‌ಪುರನಲ್ಲಿ ನಡೆದಿದೆ.
ಗಂಡನಿಂದ ದೂರವಾದ ಮಹಿಳೆಯೊಬ್ಬಳು ಟೆಕ್ಕಿಯ ಪ್ರೀತಿಯ ಬಲೆಗೆ ಬಿದ್ದು ಇದೀಗ ಪ್ರಾಣ ಕಳೆದುಕೊಂಡಿದ್ದಾರೆ. ಮದುವೆಯಾಗುವುದಾಗಿ ಆತ ನಂಬಿಸಿದ ಹಿನ್ನೆಲೆಯಲ್ಲಿ ದೈಹಿಕ ಸಂಪರ್ಕ ಬೆಳೆಸಿ ಎಂಟು ವರ್ಷಗಳಲ್ಲಿ 14 ಬಾರಿ ಗರ್ಭಪಾತ ಮಾಡಿಸಿಕೊಂಡಿರುವುದಾಗಿ ಡೆತ್​ನೋಟ್​ನಲ್ಲಿ ಆಕೆ ಬರೆದಿದ್ದಾರೆ.
ನೋಯ್ಡಾದ ಸಾಫ್ಟ್​ವೇರ್​ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಇಂಜಿನಿಯರ್​ ಜತೆ ತಾನು ಸಂಬಂಧ ಹೊಂದಿರುವುದಾಗಿ ಡೆತ್​ನೋಟ್​ನಲ್ಲಿ ಬರೆದಿದ್ದಾರೆ. ಮದುವೆಯ ಭರವಸೆ ನೀಡಿದ ಹಿನ್ನೆಲೆಯಲ್ಲಿ ಆತನ ಜತೆ ಲಿವ್​ ಇನ್​ನಲ್ಲಿ ಇದ್ದೆ. ಈ ಸಮಯದಲ್ಲಿ ದೈಹಿಕ ಸಂಪರ್ಕ ಬೆಳೆಸಿ ನನಗೆ ಮೋಸ ಮಾಡಿದ್ದಾನೆ. ಇದೀಗ 14ನೇ ಬಾರಿ ಗರ್ಭ ಧರಿಸಿದ್ದೆ. ಅದನ್ನೂ ತೆಗೆಸುವಂತೆ ಹೇಳಿದ. ಅದನ್ನು ತೆಗೆಸಿದ ಮೇಲೆ ನನಗೆ ಜೀವನವೇ ಬೇಡವಾಗಿದೆ. ಈ ಪರಿಯ ಗರ್ಭಪಾತ ಮಾಡಿಸಿಕೊಂಡು ಬದುಕುವುದು ನನಗೆ ಕಷ್ಟವಾಗಿದೆ. ಆತ ನನ್ನನ್ನು ಮದುವೆಯಾಗುವ ಸಂದೇಹ ಉಂಟಾಗಿದೆ. ಇಂಥ ಜನ್ಮಕ್ಕಿಂತ ಸಾಯುವುದೇ ಮೇಲು ಎಂದು ಮಹಿಳೆ ಬರೆದಿದ್ದಾರೆ.
ಆರೋಪಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಆತ ತಲೆಮರೆಸಿಕೊಂಡಿದ್ದು, ಪೊಲೀಸರು ಹುಟುಕಾಟ ನಡೆಸಿದ್ದಾರೆ. ಆರೋಪಿ ಹಾಗೂ ಸಂತ್ರಸ್ತೆಯ ಹೆಸರುಗಳನ್ನು ಪೊಲೀಸರು ಬಹಿರಂಗಪಡಿಸಲಿಲ್ಲ.
ಬಿಹಾರದ ಮುಜಾಫರ್‌ಪುರದಲ್ಲಿ ನೆಲೆಸಿರುವ ಆಕೆಯ ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಉನ್ನತ ಹುದ್ದೆ ಆಸೆ ತೋರಿಸಿ ಕೋಟಿ ಕೋಟಿ ಹಣ ಗುಳುಂ: ಸ್ಯಾಂಡಲ್​ವುಡ್​ ನಟ ಅರೆಸ್ಟ್​- ಕೇಸ್​ಗಳು ಒಂದಲ್ಲಾ… ಎರಡಲ್ಲಾ…

VIDEO: ‘ನೀನು ಸಿನಿಮಾಕ್ಕೆ ಸೆಲೆಕ್ಟ್​ ಆಗ್ಲಿಲ್ಲ, ಆದ್ರೆ ನನ್​ ಹೆಂಡ್ತಿ ಥರ ಇದ್ರೆ ತಿಂಗಳಿಗೆ 25 ಲಕ್ಷ ಕೊಡುವೆ ಅಂದಿದ್ದ ಉದ್ಯಮಿ!’

ಮಾಡೆಲ್​ನಂತಾಗಲು 4.5 ಕೋಟಿ ರೂ. ಖರ್ಚು ಮಾಡಿದಳು- ಮೊದಲಿನಂತಾಗಲು ಮತ್ತೆ ಸರ್ಜರಿ ಮಾಡಿಸಿದಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − two =
Remember me
