ನೊಯ್ಡಾ (ಉತ್ತರ ಪ್ರದೇಶ):ಕಾರಿನಲ್ಲಿ ಎ.ಸಿ ಆನ್​ ಮಾಡಿಕೊಂಡು, ಕಿಟಕಿ ಬಾಗಿಲುಗಳನ್ನು ಹಾಕಿಕೊಂಡು ಮಲಗುವ ಅಭ್ಯಾಸ ಇದೆಯೆ? ಹಾಗಿದ್ದರೆ ಈ ಸುದ್ದಿಯನ್ನೊಮ್ಮೆ ನೋಡಿ, ಅದು ಎಷ್ಟು ಅಪಾಯಕಾರಿ ಎನ್ನುವುದು ತಿಳಿಯುತ್ತದೆ.
ಇಂಥ ಒಂದು ಅಪಾಯಕಾರಿ ಘಟನೆ ನಡೆದಿರುವುದು ಉತ್ತರ ಪ್ರದೇಶದ ನೊಯ್ಡಾದಲ್ಲಿ. ಮದ್ಯಪಾನ ಮಾಡಿ, ಕಾರಿನಲ್ಲಿ ಎ.ಸಿ ಹಾಕಿ ಮಲಗಿದ್ದ ವ್ಯಕ್ತಿ ಮರುದಿನ ಶವವಾಗಿ ಪತ್ತೆಯಾಗಿದ್ದಾರೆ.
ಸುಂದರ್ ಪಂಡಿತ್ ಎನ್ನುವವರು ಮೃತ ದುರ್ದೈವಿ. ಇವರು ಮೊನ್ನೆ ರಾತ್ರಿ ಮದ್ಯಪಾನ ಮಾಡಿ ಕಾರಿನಲ್ಲಿ ಮಲಗಿದ್ದು, ಕಾರಿ ಕಿಟಕಿಯೆಲ್ಲವೂ ಮುಚ್ಚಿತ್ತು. ಮಾರನೆಯ ದಿನ ನೋಡಿದಾಗ ಅಲ್ಲಿಯೇ ಹೆಣವಾಗಿದ್ದರು.
ಇದನ್ನೂ ಓದಿ:ಸರ್ಕಾರಿ ಸಂಪನ್ಮೂಲ ದುರುಪಯೋಗದ ಆರೋಪ: ಇಮ್ರಾನ್ ಖಾನ್​ಗೆ​ ಸುಪ್ರೀಂ ನೋಟಿಸ್ !
ಸುಂದರ್ ಪಂಡಿತ್ ಬರೋಲಾದ ನಿವಾಸಿ. ಬೇರೆ ಕಡೆಯಲ್ಲಿ ಕೆಲಸಕ್ಕೆ ಇದ್ದ ಅವರು ಸಾಮಾನ್ಯವಾಗಿ ವಾರಾಂತ್ಯದಲ್ಲಿ ಮನೆಗೆ ಹೋಗುತ್ತಿದ್ದರು. ಮೊನ್ನೆ ಭಾನುವಾರ ಕೂಡ ಮನೆಗೆ ಹೋಗಿದ್ದಾರೆ. ಆದರೆ ಸದಾ ಮದ್ಯಪಾನ ಮಾಡುತ್ತಿದ್ದ ಅವರು, ಅಂದು ಕೂಡ ಕುಡಿದುಕೊಂಡೇ ಮನೆಗೆ ಹೋಗಿದ್ದಾರೆ.
ಬೇಸ್‌ಮೆಂಟ್‌ ಅಲ್ಲಿ ಕಾರು ಪಾರ್ಕ್​ ಮಾಡುವಷ್ಟರಲ್ಲಿ ನಿದ್ದೆ ಬಂದಿದೆ. ಎ.ಸಿ. ಆನ್​ ಇತ್ತು. ಹಾಗೆಯಾ ನಿದ್ದೆಗೆ ಜಾರಿಬಿಟ್ಟಿದ್ದಾರೆ. ಮರುದಿನ ಬೆಳಗ್ಗೆ ಬೇಸ್‌ಮೆಂಟ್‌ಲ್ಲಿ ಕಾರು ಇದ್ದಿದ್ದನ್ನು ಗಮನಿಸಿದ ಅವರ ಸಹೋದರ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಆದರೆ ಅಲ್ಲಿಯವರೆಗೆ ಅವರು ಮೃತಪಟ್ಟಿದ್ದರು.
ಎಲ್ಲ ಕಿಟಿಕಿಗಳು ಬಂದ್​ ಇದ್ದು, ಎ.ಸಿ ಆನ್​ ಇದ್ದ ಕಾರಣ, ಕಾರ್ಬನ್ ಮೊನಾಕ್ಸೈಡ್ ಹೆಚ್ಚಾಗಿ ಪಸರಿಸಿದೆ. ಈ ವಿಷ ಅನಿಲವನ್ನು ಸೇವಿಸಿರುವ ಕಾರಣ ಸಾವಿಗೀಡಾಗಿರುವುದಾಗಿ ವೈದ್ಯರು ಹೇಳಿದ್ದಾರೆ.
ಕಡಿಮೆ ದರದಲ್ಲಿ ಚಿನ್ನ ಬೇಕಾ? ಕೇಂದ್ರ ಸರ್ಕಾರದಿಂದ ಶುರುವಾಗಿದೆ ಗೋಲ್ಡ್ ಬಾಂಡ್ ಯೋಜನೆ

ಬಿಜೆಪಿ ಸೇರಿದ ಖುಷ್ಬೂ: ಅನುಮಾನಗಳಿಗೆ ತೆರೆ ಎಳೆದ ನಟಿ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:five × two =
Remember me
