ಕಾಡುತುರುತಿ (ಮಧ್ಯಪ್ರದೇಶ):ದಾರಿ ಗೊತ್ತಾಗಿದ್ದರೆ ಗೂಗಲ್​ ಮ್ಯಾಪ್​ ಬಳಸುವುದು ಮಾಮೂಲು. ಆದರೆ ಎಷ್ಟೋ ಸಂದರ್ಭಗಳಲ್ಲಿ ಈ ಮ್ಯಾಪ್​ ಹೇಳಿದಂತೆ ಹೋದರೆ ದಾರಿ ತಪ್ಪುವುದೂ ಉಂಟು, ಇಲ್ಲವೇ ಸುತ್ತಿದ್ದಲ್ಲೇ ಸುತ್ತಿ ಸುತ್ತಿ ಸುಸ್ತಾಗುವುದೂ ಉಂಟು. ಆದರೂ ಗೂಗಲ್​ ಮ್ಯಾಪ್​ ಬಳಕೆ ನಿಂತಿಲ್ಲ.
ಆದರೆ ಇಲ್ಲೊಂದು ಆಘಾತಕಾರಿ ಘಟನೆಯಲ್ಲಿ ಕರ್ನಾಟಕದ ಕುಟುಂಬವೊಂದು ಗೂಗಲ್​ ಮ್ಯಾಪ್​ ಮಾತು ಕೇಳಿ ಪ್ರಾಣ ಕಳೆದುಕೊಳ್ಳುವ ಸ್ಥಿತಿಗೆ ತಲುಪಿತ್ತು. ಅದೃಷ್ಟವಶಾತ್​ ಅಲ್ಲಿದ್ದವರು ರಕ್ಷಿಸಿದ್ದರಿಂದ ಸ್ವಲ್ಪದಲ್ಲಿಯೇ ಭಾರಿ ಅನಾಹುತ ತಪ್ಪಿದೆ.
ಮುನ್ನಾರ್‌ನಿಂದ ಅಲಪ್ಪುಳಕ್ಕೆ ಕುಟುಂಬಸ್ಥರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ದಂಪತಿ ಮತ್ತು ಮಕ್ಕಳು ಅದರಲ್ಲಿ ಇದ್ದರು. ಇವರಿಗೆ ದಾರಿ ಗೊತ್ತಿಲ್ಲದ ಹಿನ್ನೆಲೆಯಲ್ಲಿ ಸಹಜವಾಗಿ ಗೂಗಲ್​ ಮ್ಯಾಪ್​ ಮೊರೆ ಹೋಗಿದ್ದಾರೆ. ಕಡವು ಬಳಿ ಹೋಗುತ್ತಿದ್ದಂತೆಯೇ ಗೂಗಲ್​ ಮ್ಯಾಪ್​ನಲ್ಲಿ ನೇರವಾಗಿ ಹೋಗಿ ಎಂದು ಹೇಳಲಾಗಿದೆ. ಅದು ಹೇಳಿದಂತೆ ಕಾರಿನ ಚಾಲಕ ನೇರವಾಗಿ ಹೋಗಿದ್ದಾನೆ. ಗೂಗಲ್​ ಮ್ಯಾಪ್​ ನಂಬಿದ್ದ ಆತ ಅಲ್ಲಿ ತಿರುವು ಇರುವುದನ್ನೂ ಗಮನಿಸಿಲ್ಲ.
ಆದರೆ ನೇರವಾಗಿ ಹೋಗುತ್ತಿದ್ದಂತೆಯೇ ಕಾರು ಅಲ್ಲಿರುವ ಪ್ರಪಾತಕ್ಕೆ ಬಿದ್ದುಬಿಟ್ಟಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅದರಲ್ಲಿ ನೀರು ತುಂಬಿದ್ದರಿಂದ ಕಾರು ಇನ್ನೇನು ಮುಳುಗಿ ಎಲ್ಲರ ಪ್ರಾಣವೂ ಹೋಗುತ್ತಿತ್ತು. ಆದರೆ ಅವರ ಅದೃಷ್ಟಕ್ಕೆ ಅಲ್ಲಿಯೇ ಇದ್ದ ಸ್ಥಳೀಯರು ಓಡೋಡಿ ಬಂದು ಅವರನ್ನು ರಕ್ಷಿಸಿದ್ದಾರೆ. ಟ್ರಕ್​ ಸಹಾಯದಿಂದ ಕಾರನ್ನು ಮೇಲಕ್ಕೆ ಎತ್ತಲಾಗಿದೆ. ಆ ದಾರಿಯನ್ನು ಚೈನ್​ ಮೂಲಕ ಈಗ ಕ್ಲೋಸ್​ ಮಾಡಲಾಗಿದೆ.
ಗಂಡುಮಗುವಿನ ತಾಯಿಯಾದ ನಟಿ ಸಂಜನಾ ಗಲ್ರಾನಿ: ಕುಟುಂಬದಲ್ಲಿ ಒಂದೇ ದಿನ ಡಬಲ್‌ ಖುಷಿ

ಈತ ದೇವಾಲಯ ಮಾರಿದ, ಆತ ಖರೀದಿಸಿ ಹಿಂದೂಗಳನ್ನು ಓಡಿಸಿದ! 40 ವರ್ಷಗಳ ಹಿಂದಿನ ಕೇಸ್‌ಗೆ ಮರುಜೀವ…

ಬೆತ್ತಲೆ ವಿಡಿಯೋ ಮಾಡಿ ಕಷ್ಟದಲ್ಲಿ ಸಿಲುಕಿರೋ ನಟಿ ಶಿಲ್ಪಾ ಶೆಟ್ಟಿ ಪತಿಗೆ ಇ.ಡಿಯಿಂದ ಮತ್ತೊಂದು ಶಾಕ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
