ಗೋದಾವರಿಖನಿ (ತೆಲಂಗಾಣ):ಚಲಿಸುತ್ತಿದ್ದ ಆಟೋದ ಮೇಲೆ ಲಾರಿಯೊಂದು ಉರುಳಿ ಬಿದ್ದಿದ್ದು, ದಂಪತಿ ಜತೆ ಮಗು ಮೃತಪಟ್ಟಿರುವ ಭಯಾನಕ ಘಟನೆ ತೆಲಂಗಾಣದ ಗೋದಾವರಿಖನಿ ಬಳಿ ನಡೆದಿದೆ. ಇಲ್ಲಿಯ ಗಂಗಾನಗರ ರಸ್ತೆಯಲ್ಲಿ ಇಂಥದ್ದೊಂದು ಅನಾಹುತ ಸಂಭವಿಸಿದೆ.
ಎರಡು ಲಾರಿಗಳ ಮಧ್ಯೆ ಅಪಘಾತ ನಡೆದು, ಆ ಪೈಕಿ ಲಾರಿಯೊಂದು ಚಲಿಸುತ್ತಿದ್ದ ಆಟೋದ ಮೇಲೆ ಬಿದ್ದು ಈ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ರಾಮಗುಂಡ ನಿವಾಸಿ ಶೇಖ್​ ಶೇಕಿಲ್, ಪತ್ನಿ ರೇಷ್ಮಾ ಹಾಗೂ ಮಗು ಮೃತಪಟ್ಟಿದ್ದಾರೆ.
ದಂಪತಿ ತಮ್ಮ ಇಬ್ಬರು ಮಕ್ಕಳು ಹಾಗೂ ಇನ್ನಿಬ್ಬರು ಒಟ್ಟು ಆರು ಜನರ ಜತೆ ಮಂಚಿರ್ಯಾಲಾ ಜಿಲ್ಲೆಯ ಇಂದರಾಂ ಗ್ರಾಮಕ್ಕೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಫ್ಲೈಓವರ್ ಬಳಿ ಕಲ್ಲಿದ್ದಲು ತುಂಬಿಕೊಂಡು ಒಂದೆಡೆಯಿಂದ ಲಾರಿ ಬರುತ್ತಿದ್ದರೆ, ಇನ್ನೊಂದೆಡೆಯಿಂದ ಮಣ್ಣು ತೆಗೆದುಕೊಂಡು ಹೋಗುತ್ತಿದ್ದ ಲಾರಿ ಬರುತ್ತಿತ್ತು. ಇವೆರಡರ ಮಧ್ಯೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಈ ಪೈಕಿ ಒಂದು ಲಾರಿ ಅಲ್ಲಿಯೇ ಕೆಳಕ್ಕೆ ಪ್ರಯಾಣಿಸುತ್ತಿದ್ದ ಆಟೋ ಮೇಲೆ ಬಿದ್ದಿದೆ. ಈ ರಭಸಕ್ಕೆ ಆಟೋದಲ್ಲಿದ್ದ ದಂಪತಿ ಮತ್ತು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೊಂದು ಎರಡು ತಿಂಗಳ ಮಗು ಸೇರಿದಂತೆ ಮೂವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಶಾಲೆಯಲ್ಲಿ ಹುಟ್ಟುಹಬ್ಬ ಆಚರಿಸಿದ್ದೇ ತಪ್ಪಾಗೋಯ್ತು: ಅಪ್ಪ-ಮಗನನ್ನು ಆತ್ಮಹತ್ಯೆಗೆ ತಳ್ಳಿದ ಬರ್ತ್‌ಡೇ ಸಂಭ್ರಮ!

ವೈದ್ಯರಿಗೇಕೆ ಸುಮ್ಮನೆ ದುಡ್ಡುಕೊಡೋದೆಂದು ಯೂಟ್ಯೂಬ್‌ ನೋಡಿ ಡೆಲಿವರಿ ಮಾಡಿಸಿದ ಪತಿ! ಮುಂದಾದದ್ದು ಘೋರ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 9 =
Remember me
