ಪೌರಿ ಗಡ್ವಾಲ್ (ಉತ್ತರಾಖಂಡ):45 ಜನರಿದ್ದ ಬಸ್ಸೊಂದು ದೊಡ್ಡ ಕಮರಿಗೆ ಆಯತಪ್ಪಿ ಬಿದ್ದು 25 ಜನರು ದಾರುಣವಾಗಿ ಮೃತಪಟ್ಟಿರುವ ಘಟನೆ ಉತ್ತರಾಖಂಡದ ಪೌರಿ ಗಡ್ವಾಲ್ ಜಿಲ್ಲೆಯಲ್ಲಿ ನಡೆದಿದೆ. ಬಸ್ಸಿನಲ್ಲಿ ಇದ್ದವರೆಲ್ಲರೂ ಮದುವೆ ಮುಗಿಸಿಕೊಂಡು ವಾಪಸಾಗುತ್ತಿದ್ದರು ಎನ್ನಲಾಗಿದೆ.
ಘಟನೆಯಲ್ಲಿ 15 ಜನರನ್ನು ರಕ್ಷಿಸಲಾಗಿದೆ. ಇವರ ಪೈಕಿ ಕೆಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ನಿನ್ನೆ (ಮಂಗಳರವಾರ) ರಾತ್ರಿ ಈ ದುರ್ಘಟನೆ ನಡೆದಿದೆ. ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಹೊರಡುತ್ತಿದ್ದಾಗ ರಾತ್ರಿ 7.30 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಎನ್​ಡಿಆರ್​ಎಫ್​ ತಂಡ ಸ್ಥಳಕ್ಕೆ ಆಗಮಿಸಿದ್ದು ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯಾರಣೆ ನಡೆಸಿದೆ. ಆದರೆ ಕಾರ್ಯಾಚರಣೆ ವೇಳೆ ಕತ್ತಲೆ ಆವರಿಸಿತ್ತು. ಈ ಸ್ಥಳದಲ್ಲಿ ಬೀದಿದೀಪಗಳೂ ಇಲ್ಲದ ಹಿನ್ನೆಲೆಯಲ್ಲಿ ಮೊಬೈಲ್ ಫೋನ್‌ಗಳಲ್ಲಿನ ಬ್ಯಾಟರಿಯ ಬೆಳಕಿನಲ್ಲೇ ರಕ್ಷಣಾ ಕಾರ್ಯಾರಣೆ ನಡೆದಿದೆ. ಇದೇ ಬೆಳಕಿನಲ್ಲಿಯೇ ಬಸ್‌ನೊಳಗೆ ಸಿಲುಕಿಕೊಂಡವರನ್ನು ರಕ್ಷಿಸಲು ಹರಸಾಹಸಪಡಬೇಕಾಗಿ ಬಂದಿದೆ. (ಏಜೆನ್ಸೀಸ್​)
ಪಿಎಫ್​ಐ ಜತೆ 873 ಪೊಲೀಸ್​ ಅಧಿಕಾರಿಗಳ ನಂಟು! ಆತಂಕಕಾರಿ ವಿಷಯ ಎನ್​ಐಎ ತನಿಖೆಯಿಂದ ಬಯಲು

ಸಂಭ್ರಮದ ಹಿಂದೆಯೇ ಬಂದೆರಗಿದ ಸಾವು! ಬಾಲ್ಯದ ಕನಸು ನನಸಾದ ಖುಷಿಯಲ್ಲಿದ್ದಾಗಲೇ ಯುವಕನಿಗೆ ಹೃದಯಾಘಾತ

ಸೈಬರ್​ ಅಪರಾಧಿಗಳಿಗೆ ಶಾಕ್​ ನೀಡಿದ ಸಿಬಿಐ: ಏಕಕಾಲದಲ್ಲಿ ಬೆಂಗಳೂರು ಸೇರಿದಂತೆ 105 ಕಡೆ ದಾಳಿ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:two × five =
Remember me
