ರೇವಾ (ಮಧ್ಯಪ್ರದೇಶ):ಅಪರಾಧಿಗಳಿಗೆ ಬುದ್ಧಿ ಕಲಿಸುವ ನಿಟ್ಟಿನಲ್ಲಿ ಇದಾಗಲೇ ಉತ್ತರ ಪ್ರದೇಶದಲ್ಲಿ ಅವರ ಮನೆಯನ್ನು ನೆಲಸಮ ಮಾಡುವ ಘಟನೆಗಳು ನಡೆದಿವೆ. ಅದರ ಬೆನ್ನಲ್ಲೇ ಇದೀಗ ಅತ್ಯಾಚಾರಿಗಳಿಗೆ ಬುದ್ಧಿ ಕಲಿಸಲು ಮಧ್ಯಪ್ರದೇಶ ಮುಂದಾಗಿದೆ. ಇಲ್ಲಿಯ ರೇವಾ ಜಿಲ್ಲಾಡಳಿತ ಮೂವರು ಕಾಮುಕರ ಮನೆಯನ್ನು ಬುಲ್ಡೋಜರ್​ ಮೂಲಕ ಕೆಡವಿದ್ದಾರೆ.
ರೇವಾ ಜಿಲ್ಲೆಯ ನೈಗರ್ಹಿಲ್ಲಿರುವ ದೇವಸ್ಥಾನವೊಂದರಲ್ಲಿ ಅಪ್ರಾಪ್ತೆ ಮೇಲೆ ಇಬ್ಬರು ಅಪ್ರಾಪ್ತರು ಸೇರಿ ಆರು ಮಂದಿ ಕಾಮುಕರು ಅತ್ಯಾಚಾರ ಎಸಗಿದ್ದರು. ದೇವಸ್ಥಾನಕ್ಕೆ ತನ್ನ ಸ್ನೇಹಿತನೊಂದಿಗೆ ಬಂದಿದ್ದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲಾಗಿತ್ತು.
ಇಷ್ಟೇ ಅಲ್ಲದೇ, ಎರಡು ದಿನಗಳವರೆಗೆ ಆಕೆ ಮತ್ತು ಸ್ನೇಹಿತನನ್ನು ಒತ್ತೆಯಾಳಾಗಿಟ್ಟುಕೊಂಡಿದ್ದರು. ಅಲ್ಲಿಂದ ಇಬ್ಬರೂ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಓಡಿ ಬಂದಿದ್ದ ಅವರು ಪೊಲೀಸರಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಆರು ಮಂದಿ ಭಾಗಿಯಾಗಿದ್ದು, ಸದ್ಯ ಮೂವರನ್ನು ಬಂಧಿಸಲಾಗಿದೆ. ಉಳಿದವರು ತಲೆಮರೆಸಿಕೊಂಡಿದ್ದು ಶೋಧ ಕಾರ್ಯ ನಡೆದಿದೆ.
ಸದ್ಯ ಸೆರೆ ಸಿಕ್ಕ ಮೂವರು ಕಾಮುಕರ ಮನೆಗಳನ್ನು ನೆಲಸಮಗೊಳಿಸಲಾಗಿದ್ದು, ಇನ್ನುಳಿದ ಮೂವರು ಆರೋಪಿಗಳ ಮನೆಗಳ ಮೇಲೂ ಇಂದು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ರೇವಾ ಎಎಸ್​​ಎಫ್​ ಅನಿಲ್​ ಸೋಂಕಾರ್​ ತಿಳಿಸಿದ್ದಾರೆ. ಆರೋಪಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕುವ ಕಾರ್ಯವೂ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ(ಏಜೆನ್ಸೀಸ್​)
ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿ​ ಪತಿಯನ್ನು ಮುಗಿಸಿದ್ದ ಪತ್ನಿಗೆ ಗ್ರಹಚಾರ ತಂದ ಫೋನ್​ನ ಕಾಲ್​ ರಿಕಾರ್ಡಿಂಗ್!
ವೈಎಸ್​ಆರ್​ ಹತ್ಯೆಗೆ ಸಂಚು ರೂಪಿಸಿದ್ದೇ ತೆಲಂಗಾಣ ಸಿಎಂ: ಪುತ್ರಿ ಹೇಳಿಕೆಗೆ ಭಾರಿ ಕೋಲಾಹಲ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:sixteen − 5 =
Remember me
