ಮುಂಬೈ:ಬಾಲಿವುಡ್‌ ನಟಿ ಪಾಯಲ್‌ ಘೋಷ್‌ ಅವರ ಮೇಲೆ ಆ್ಯಸಿಡ್‌ ದಾಳಿಗೆ ಯತ್ನಿಸಲಾಗಿದೆ ಎನ್ನಲಾಗಿದ್ದು, ಈ ಕುರಿತು ಖುದ್ದು ನಟಿ ಸಂದೇಹ ವ್ಯಕ್ತಡಿಸಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಮೂಲಕ ಈ ಘಟನೆಯನ್ನು ಅವರು ಬಿಚ್ಚಿಟ್ಟಿದ್ದಾರೆ. ಮುಸುಕುಧಾರಿ ದುಷ್ಕರ್ಮಿಗಳ ಗುಂಪೊಂದು ತಮ್ಮ ಮೇಲೆ ಹಲ್ಲೆ ಮಾಡಿ, ಆ್ಯಸಿಡ್ ದಾಳಿ ನಡೆಸಲು ಪ್ರಯತ್ನಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಮೆಡಿಕಲ್‌ ಷಾಪ್‌ನಿಂದ ಕೆಲ ಔಷಧಗಳನ್ನು ಪಡೆದು ರಾತ್ರಿ 10 ಗಂಟೆಯ ಸುಮಾರಿಗೆ ಕಾರನ್ನು ಹತ್ತುವ ಸಂದರ್ಭದಲ್ಲಿ ಬೈಕ್‌ ಮೇಲೆ ಬಂದ ಮುಸುಕುಧಾರಿಗಳು ನನ್ನ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಲು ಮುಂದಾದರು. ಅವರ ಕೈಗಳಲ್ಲಿ ಬಾಟಲ್‌ವೊಂದಿತ್ತು. ಬಹುಶಃ ಅದು ಆ್ಯಸಿಡ್‌ ಆಗಿರಬಹುದು ಎಂದು ನಟಿ ಹೇಳಿದ್ದಾರೆ.
ನನಗೆ ರಾಡ್‌ನಿಂದ ಹೊಡೆಯಲು ಅವರು ಯತ್ನಿಸಿದರು. ನಾನು ಜೋರಾಗಿ ಕಿರುಚಿದಾಗ ರಾಡ್ ಕೈಮೇಲೆ ಬಿತ್ತು. ಆದ್ದರಿಂದ ಕೈಗೆ ಪೆಟ್ಟಾಗಿದೆ. ಎಲ್ಲವನ್ನೂ ಪ್ಲ್ಯಾನ್ ಮಾಡಿ ಮಾಡಿದಂತಿದೆ. ದೂರು ದಾಖಲು ಮಾಡಿದ್ದೇನೆ’ ಎಂದಿದ್ದಾರೆ.
ತೆಲುಗಿನ ‘ಪ್ರಯಾಣಂ’, ‘ಊಸರವಳ್ಳಿ’, ‘ಮಿಸ್ಟರ್ ರಾಸ್ಕಲ್’ ಚಿತ್ರಗಳಲ್ಲಿ ನಟಿಸಿ ಮನೆಮಾತಾಗಿರುವ ಪಾಯಲ್‌, ಕನ್ನಡದ ‘ವರ್ಷಧಾರೆ’, ಹಿಂದಿಯ ‘ಪಟೇಲ್ ಕಿ ಪಂಜಾಬಿ ಶಾದಿ’ ಸಿನಿಮಾದಲ್ಲೂ ಅದ್ಭುತವಾಗಿ ಅಭಿನಯಿಸಿದ್ದಾರೆ. ಹಿಂದಿಯ ‘ಸಾಥ್ ನಿಭಾನಾ ಸಾಥಿಯಾ’ ಸೀರಿಯಲ್‌ನಲ್ಲೂ ಪಾಯಲ್ ಘೋಷ್ ಅಭಿನಯಿಸಿದ್ದಾರೆ. ಈ ಹಿಂದೆ ಮೀ ಟೂ ಆರೋಪ ಭಾರಿ ಸುದ್ದಿ ಮಾಡುತ್ತಿದ್ದ ವೇಳೆ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಪಾಯಲ್ ಆರೋಪ ಮಾಡಿದ್ದರು. ಆದರೆ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಜಾಲತಾಣದ ಮೂಲಕ ತಮ್ಮ ಅಸಮಾಧಾನ ತೋಡಿಕೊಂಡಿದ್ದರು.
ನಟಿಯ ವಿಡಿಯೋ ಇಲ್ಲಿದೆ ನೋಡಿ:


A post shared by Payal Ghosh official fanclub (@payalghoshfancl)

ಪ್ರಯಾಗ್‌ರಾಜ್‌ ಸಂತನ ಸಾವಿಗೆ ಕಾರಣವಾಯ್ತಾ ಯುವತಿ ಜತೆಗಿನ ಫೋಟೋ? ಜಟಿಲವಾಗುತ್ತಲೇ ಸಾಗಿದೆ ಕೇಸ್‌…

ಪುರುಷರು ಸ್ತ್ರೀಯರ ಬಳಿ, ಸ್ತ್ರೀಯರು ಪುರುಷರ ಬಳಿ ಮಸಾಜ್‌ ಮಾಡಿಸಿಕೊಳ್ಳುವಂತಿಲ್ಲ- ಹೊಸ ರೂಲ್ಸ್‌ ತಂದ ಕೇಜ್ರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
