ಮುಂಬೈ:ಚಿತ್ರ ನಟ-ನಟಿಯರ ಮದುವೆ, ಮಕ್ಕಳ ಜನನ ಇತ್ಯಾದಿಗಳು ನಡೆದರೆ ಅವರ ಅಭಿಮಾನಿಗಳಿಗೆ ಇನ್ನಿಲ್ಲದ ಸಂಭ್ರಮ. ತಮ್ಮ ಮನೆಯ ಸದಸ್ಯರೊಬ್ಬರಿಗೇ ಮದುವೆಯೋ, ಮಕ್ಕಳೋ ಆದಷ್ಟು ಖುಷಿ ಪಡುವವರಿಗೇನೂ ಕಮ್ಮಿ ಇಲ್ಲ.
ಇದೀಗ ಬಾಲಿವುಡ್ ನಟಿ ಸೋನಂ ಕಪೂರ್ ಅಭಿಮಾನಿಗಳಿಗೂ ಖುಷಿಸುದ್ದಿಯೊಂದು ಬಹಿರಂಗಗೊಂಡಿದೆ. ಅದೇನೆಂದರೆ ಅನಿಲ್ ಕಪೂರ್ ಪುತ್ರಿ ಆಗಿರುವ ಸೋನಂ, ಕಳೆದ ಆಗಸ್ಟ್​ 20ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಇದೀಗ ನಾಮಕರಣವನ್ನೂ ಮಾಡಿದ್ದಾರೆ. ಮಗುವಿಗೆ ವಾಯು ಎಂದು ಹೆಸರು ಇಟ್ಟಿದ್ದಾರೆ. ಇದೀಗ ಈ ಮಗು ವಾಯು ಕಪೂರ್ ಅಜುಹಾ ಎಂದು ಕರೆಸಿಕೊಳ್ಳಲಿದೆ.
ತಮ್ಮ ಮಗನಿಗೆ ಇಟ್ಟಿರುವ ಹೆಸರಿನ ಬಗ್ಗೆಯೂ ವಿಶ್ಲೇಷಿಸಿರುವ ನಟಿ, ಹಿಂದೂ ಧರ್ಮದಲ್ಲಿರುವ ಪಂಚಭೂತಗಳಲ್ಲಿ ವಾಯುವೂ ಒಂದು. ವಾಯುವು ತನ್ನಲ್ಲಿರುವ ಪ್ರಬಲ ದೇವರು. ಅದಕ್ಕಾಗಿಯೇ ತಮ್ಮ ಮಗನಿಗೆ ವಾಯು ಎಂದು ಹೆಸರಿಟ್ಟಿದ್ದೇವೆ ಎಂದಿದ್ದಾರೆ. ನಮ್ಮ ಮಗನ ಮೇಲೆ ನಿಮ್ಮ ಹಾರೈಕೆಯಿರಲಿ ಎಂದು ಕೇಳಿಕೊಂಡಿದ್ದಾರೆ.
ಸೋನಂ ಹಾಗೂ ಆನಂದ್ ದಂಪತಿ ಒಂದೇ ಬಣ್ಣದ ಡ್ರೆಸ್​ ಹಾಕಿಕೊಂಡು ಮಗು ಎತ್ತಿಕೊಂಡಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಂದಹಾಗೆ, 2007ರಲ್ಲಿ ತೆರೆಗೆ ಬಂದ ‘ಸಾವರಿಯಾ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು ಸೋನಂ ಕಪೂರ್. ಅಲ್ಲಿಂದ ಇಲ್ಲಿಯವರೆಗೆ ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಸದ್ಯ ಚಿತ್ರರಂಗದಿಂದ ದೂರ ಉಳಿದಿದ್ದಾರೆ.(ಏಜೆನ್ಸೀಸ್​)
ಸಿನಿಮಾ ಸೆಟ್​ನಲ್ಲಿ ಅವಘಡ: ಟೈಟಾನಿಕ್​ ಖ್ಯಾತಿಯ ನಟಿ ಕೇಟ್​ ಆಸ್ಪತ್ರೆಗೆ ದಾಖಲು
ನನ್ನ ಸ್ನೇಹಿತೆಯಾಗಿರು ಎನ್ನುತ್ತಿದ್ದರು, ಅದೇನೆಂದು ಅರ್ಥವಾದಾಗ ಶಾಕ್​ ಆದೆ: ನಟಿ ತೆರೆದಿಟ್ಟ ಕರಾಳ ಅನುಭವ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:three × 2 =
Remember me
