ಮುಂಬೈ:ಬಾಲಿವುಟ್‌ ನಟ ಅಕ್ಷಯ್‌ ಕುಮಾರ್‌ಗೆ ಮತ್ತೆ ಕರೊನಾ ಸೋಂಕು ಕಾಣಿಸಿಕೊಂಡಿದೆ. ಈ ಹಿಂದೆ ಕೂಡ ಇವರಿಗೆ ಕರೊನಾ ಕಾಣಿಸಿಕೊಂಡಿತ್ತು. ಈಗ ಎರಡನೆಯ ಬಾರಿ ಸೋಂಕು ತಗುಲಿದೆ. ಈ ಕುರಿತು ಖುದ್ದು ಅವರೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
ಈ ಸೋಂಕಿನಿಂದಾಗಿ ಅವರು ಕೇನ್ಸ್‌ ಫಿಲ್ಮ್‌ ಫೆಸ್ಟಿವಲ್‌ ತಪ್ಪಿಸಿಕೊಳ್ಳಲಿದ್ದಾರೆ. ಈ ತಿಂಗಳ 17ರಿಂದ ಫ್ರಾನ್ಸ್‌ನ ಕೇನ್ಸ್‌ನಲ್ಲಿ 75ನೇ ಕೇನ್ಸ್ ಚಲನಚಿತ್ರೋತ್ಸವ ಆರಂಭವಾಗಲಿದೆ. ಮೇ 28ರವರೆಗೆ ಈ ಕಾರ್ಯಕ್ರಮ ನಡೆಯಲಿದೆ.
ನನಗೆ ಈ ಫೆಸ್ಟಿವಲ್‌ಗೆ ಕರೊನಾದಿಂದ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಅಕ್ಷಯ್‌ ಹೇಳಿಕೊಂಡಿದ್ದಾರೆ. ಈ ಕುರಿತು ತುಂಬಾ ನೊಂದುಕೊಂಡು ಬರೆದುಕೊಂಡಿರುವ ಅಕ್ಷಯ್‌, ‘ನಮ್ಮ ಸಿನಿಮಾ ಕ್ಯಾನೆಸ್‌ 2022ರ ಇಂಡಿಯನ್ ಪೆವಿಲಿಯನ್‌ನಲ್ಲಿ ನೋಡಲು ಕಾತುರದಿಂದ ಕಾಯುತ್ತಿದ್ದೆ. ಆದರೆ ಈಗ ಕರೊನಾ ತಗುಲಿದೆ. ಆದ್ದರಿಂದ ವಿಶ್ರಾಂತಿ ಅಗತ್ಯವಾಗಿದೆ’ ಎಂದಿರುವ ಅವರು, . ನನ್ನ ಚಿತ್ರತಂಡಕ್ಕೆ ಶುಭವಾಗಲಿ ಎಂದಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ರೆಹೆಮಾನ್, ಆರ್ ಮಾದವನ್ ನವಾಜುದ್ದೀನ್ ಸಿದ್ದಿಕಿ, ನಯನತಾರಾ ತಮನ್ನಾ ಭಾಟಿಯಾ, ಶೇಖರ್ ಕಪೂರ್, ಸಿಬಿಎಫ್‌ಸಿ ಮುಖ್ಯಸ್ಥ ಪ್ರಸೂನ್ ಜೋಶಿ, ರಿಕಿ ಕೇಜ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಭಾಗಿಯಾಗುತ್ತಿದ್ದಾರೆ.
2021ರ ಏಪ್ರಿಲ್ ತಿಂಗಳಿನಲ್ಲಿ ಅಕ್ಷಯ್ ಕುಮಾರ್‌ಗೆ ಸೋಂಕು ತಗುಲಿತ್ತು.
Was really looking forward to rooting for our cinema at the India Pavilion at#Cannes2022, but have sadly tested positive for Covid. Will rest it out. Loads of best wishes to you and your entire team,@ianuragthakur. Will really miss being there.
— Akshay Kumar (@akshaykumar)May 14, 2022

ಲವರ್‌ ಜತೆಗೂಡಿ ತಮ್ಮನನ್ನೇ ಕೊಲೆ ಮಾಡಿ ಶವದ ಮುಂದೆ ಗೋಳೋ ಎಂದು ಅತ್ತ ಹುಬ್ಬಳ್ಳಿ ಹೆಣ್ಣು!

ಮೈಸೂರಿನ ನಾಟಿ ವೈದ್ಯನ ಬರ್ಬರ ಕೊಲೆ ರಹಸ್ಯ ಬಯಲು! ದರೋಡೆ ಕೇಸ್ ದಾಖಲಿಸಲು ಬಂದು ಸಿಕ್ಕಿಬಿದ್ದ ಕೊಲೆಗಾರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten − five =
Remember me
