ಮುಂಬೈ:ಬಾಲಿವುಡ್‌ನ ಹಿರಿಯ ನಟ ಅನುಪಮ್ ಶ್ಯಾಮ್ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಇವರನ್ನು ಕೆಲ ದಿನಗಳ ಹಿಂದೆ ಗೋರೆಗಾಂವ್ ಲೈಫ್ ಲೈನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಿಡ್ನಿ ವೈಫಲ್ಯದ ಕಾರಣ ಡಯಾಲಿಸಿಸ್ ಒಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೆಚ್ಚ ಭರಿಸುವಂತೆ ಅವರ ಸಹೋದರ ಅನುರಾಗ್ ನೆರವು ಯಾಚಿಸಿದ್ದರು.
‘ಸತ್ಯ’, ‘ದಿಲ್ ಸೇ’, ‘ಲಗಾನ್’ ಮೊದಲಾದ ಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದರು ಅನುಪಮ್‌. ’ಕಳೆದ ವರ್ಷ ಮನ್‌ ಕೀ ಅವಾಜ್‌ ಪ್ರತಿಜ್ಞಾ’ ಷೋನಲ್ಲಿ ಸಜ್ಜನ್‌ ಸಿಂಗ್‌ ಆಗಿ ಅಭಿನಯಿಸಿದ್ದರು. ಇದೀಗ ಸೀಜನ್‌-2 ಶುರುವಾಗಿತ್ತು. ಅವರ ಅಭಿನಯದಿಂದ ಅದೆಷ್ಟು ಮಂದಿ ಅಭಿಮಾನಿಗಳು ಹುಟ್ಟಿಕೊಂಡಿದ್ದರು ಎಂದರೆ ಸೀಜನ್‌-2 ನಲ್ಲಿ ಕೂಡ ಈ ಪಾತ್ರಕ್ಕೆ ಇವರೇ ಅಭಿನಯ ಮಾಡಬೇಕು ಎಂದಿದ್ದರು. ಆದ್ದರಿಂದ ಅನಾರೋಗ್ಯವಿದ್ದರೂ ಅನುಪಮ್‌ ಅವರು ಇದರಲ್ಲಿ ಅಭಿನಯಿಸುತ್ತಿದ್ದರು. ಜೀವನದಲ್ಲಿ ಸಂಘರ್ಷ ಎದುರಿಸುತ್ತಿದ್ದೆ. ಈಗ ಅಭಿಮಾನಿಗಳ ಅಭಿಮಾನದಿಂದ ಚೇತರಿಸಿಕೊಳ್ಳುತ್ತಿದ್ದೇನೆ, ಪುನಃ ವಾಪಸಾಗಿದ್ದು, ಈ ಸೀಜನ್‌-2 ನಲ್ಲಿ ಅಭಿನಯಿಸುತ್ತಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಈಚೆಗಷ್ಟೇ ಹೇಳಿದ್ದರು ಈ ನಟ.
ಇಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ: ಇಲ್ಲಿದೆ ನೋಡಿ ಅಧಿಕೃತ ವೆಬ್‌ಸೈಟ್‌ ಲಿಂಕ್‌

ನನ್ನ ನಗ್ನ, ಕಾಮಪ್ರಚೋದಕ ವಿಡಿಯೋ ನೋಡಿ ಶಿಲ್ಪಾ ಖುಷಿ ಪಟ್ಟಿದ್ರು: ತನಿಖೆಯಲ್ಲಿ ನಟಿಯ ಸ್ಫೋಟಕ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
