ಚೆನ್ನೈ (ತಮಿಳುನಾಡು):ನಟ, ನಿರ್ದೇಶಕ ಹಾಗೂ ನಿರ್ಮಾಪಕ ಅರ್ಜುನ್ ಸರ್ಜಾ ಅವರಿಗೆ ಕರೊನಾ ಸೋಂಕು ಬಾಧಿಸಿದೆ. ತಮಗೆ ಕೋವಿಡ್‌ ದೃಢಪಟ್ಟಿರುವ ಬಗ್ಗೆ 59 ವರ್ಷದ ನಟ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದಾರೆ.
‘ನನಗೆ ಕೋವಿಡ್​ ತಗುಲಿದೆ. ಐಸೋಲೇಷನ್‌ನಲ್ಲಿ ಇದ್ದೇನೆ. ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ನನ್ನ ಸಂಪರ್ಕದಲ್ಲಿರುವ ಪ್ರತಿಯೊಬ್ಬರೂ ಕರೊನಾ ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಅವರು ಇನ್‌ಸ್ಟಾಗ್ರಾಂನಲ್ಲಿ ಹೇಳಿದ್ದಾರೆ.
‘ನಾನು ಚೆನ್ನಾಗಿದ್ದೇನೆ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ. ಮಾಸ್ಕ್ ಧರಿಸಲು ಮರೆಯಬೇಡಿ. ರಾಮ ಭಕ್ತ.. ಹನುಮಾನ್​ ಕಿ ಜೈ” ಎಂದು ಅವರು ಬರೆದುಕೊಂಡಿದ್ದಾರೆ.
‘ಸರ್ವೈವರ್ ತಮಿಳು’ ಎಂಬ ರಿಯಾಲಿಟಿ ಷೋ ಖಾಸಗಿ ಟಿವಿಯಲ್ಲಿ ನಡೆಯುತ್ತಿದ್ದು, ಅದನ್ನು ಅರ್ಜುನ್‌ ಸರ್ಜಾ ನಡೆಸಿಕೊಡುತ್ತಿದ್ದಾರೆ. ಇದರ ಶೂಟಿಂಗ್‌ಗಾಗಿ ಈಚೆಗೆ ಆಫ್ರಿಕನ್ ದ್ವೀಪಗಳಲ್ಲಿ ಸಂಚರಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಕೋವಿಡ್‌ ಕಾಣಿಸಿಕೊಂಡಿದೆ.
ಕಿಸ್‌ ಕೊಟ್ಟು ಇಡಿ ಬಲೆಗೆ ಬಿದ್ದ ನಟಿ ಜಾಕ್ವೆಲಿನ್‌: ಜಯಲಲಿತಾ, ಅಮಿತ್‌ ಷಾ ಹೆಸರು ಕೇಳಿ ಸಿಕ್ಕಾಕ್ಕೊಂಡ ಮೋಹಕ ತಾರೆ!

ದೇವಮಾನವನ ಸಂಬಂಧಿ ಮದುವೆಯಲ್ಲಿ ಶೂಟ್‌ಔಟ್‌- ಸರಪಂಚ್‌ ಸಾವು: ಜೈ ಶ್ರೀರಾಮ್‌ ಎಂದು ಕೂಗಿದವರಾರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − six =
Remember me
