ಬೆಂಗಳೂರು:ಬಾಲಿವುಡ್​ ಹಿರಿಯ ನಟ ಮಿಥುನ್ ಚಕ್ರವರ್ತಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಿಂದ ಅಭಿಮಾನಿಗಳು ಗಾಬರಿ ಪಟ್ಟುಕೊಳ್ಳುತ್ತಿದ್ದಾರೆ.
ಮೂತ್ರಪಿಂಡದಲ್ಲಿ ಕಲ್ಲು ಕಾಣಿಸಿಕೊಂಡಿದ್ದರಿಂದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಆಸ್ಪತ್ರೆಯಲ್ಲಿ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ತಮ್ಮ ತಂದೆ ಆಸ್ಪತ್ರೆಗೆ ಸೇರಿರುವ ಬಗ್ಗೆ ಅವರ ಮಗ ಮಿಮೋಹ್ ಟ್ವೀಟ್‌ ಮಾಡಿದ್ದರು.
ಆದರೆ ಇದೀಗ ತಮ್ಮ ತಂದೆ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಮಾಡಲಾಗಿದೆ ಎಂದು ವಿಮೋಹ್‌ ಹೇಳಿದ್ದಾರೆ. ಮೂತ್ರಪಿಂಡದಲ್ಲಿನ ಕಲ್ಲು ತೆಗೆಸಲು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಯ ಬಳಿಕ ಮನೆಗೆ ಮರಳಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ನಡುವೆ ಹಿರಿಯ ನಟ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ತಿಳಿಯುತ್ತಲೇ ಎಲ್ಲೆಡೆಗಳಿಂದ ಅವರ ಚೇತರಿಕೆಗೆ ಹಾರೈಕೆಗಳು ಕೇಳಿಬರುತ್ತಿವೆ. ಇತ್ತೀಚೆಗೆ ಬಿಡುಗಡೆಗೊಂಡ ಕಾಶ್ಮೀರಿ ಫೈಲ್ಸ್‌ ಚಿತ್ರದಲ್ಲಿ ಮನೋಜ್ಞ ಅಭಿನಯದ ಮೂಲಕ ಮತ್ತಷ್ಟು ಅಭಿಮಾನಿಗಳನ್ನು ಗಳಿಸಿರುವ ‘ಬಾಲಿವುಡ್‌ ದಾದಾ’ ಅವರ ಚೇತರಿಕೆಗೆ ರಾಜಕೀಯ ಗಣ್ಯರೂ ಹಾರೈಸುತ್ತಿದ್ದಾರೆ.
ಬಿಜೆಪಿಯ ಮುಖಂಡ ಸಂಜಯ್ ಸಿಂಗ್ ಮತ್ತು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಡಾ.ಅನುಪಮ್ ಹಜ್ರಾ ಬಂಗಾಳಿ ಭಾಷೆಯಲ್ಲಿ ಟ್ವೀಟ್​ ಮಾಡಿ, ‘ಬೇಗ ಗುಣಮುಖರಾಗಿ ಮಿಥುನ್​ ದಾದಾ ಎಂದು ಬರೆದಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮ: ಒಳ ಉಡುಪಲ್ಲಿ ಬ್ಲೂಟೂಥ್​, ಕೆಮ್ಮಿದರೆ ಉತ್ತರ! ಕಿಂಗ್​ಪಿನ್​ ಇಂಜಿನಿಯರ್​ ಶರಣು

ಕೋರ್ಟ್​ ಕಟಕಟೆಯಲ್ಲಿ ನೆಹರೂ, ಎಡ್ವಿನಾ ಲವ್​ ಸ್ಟೋರಿ: ಇಬ್ಬರ ನಡುವಿನ ಪತ್ರ ಬಹಿರಂಗಕ್ಕೆ ನಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
