ಹೈದರಾಬಾದ್:ಇದೇ 29ರಂದು ನಿಧನರಾದ ನಟ ಪುನೀತ್‌ ರಾಜ್‌ಕುಮಾರ್‌ ಅವರ ಅಂತಿಮ ದರ್ಶನಕ್ಕೆ ಬಂದು ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಹೊರಟ ಬೆನ್ನಲ್ಲೇ ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರು ಹಲವು ದಿನಗಳಿಂದ ತೀವ್ರ ಭುಜದ ನೋವಿನಿಂದ ಬಳಲುತ್ತಿದ್ದರು. ಈಗ ಇದ್ದಕ್ಕಿದ್ದಂತೆಯೇ ಅದು ಉಲ್ಬಣಗೊಂಡಿದ್ದು, ಹೈದರಾಬಾದಿನ ಬಂಜಾರ ಹಿಲ್ಸ್‌ನಲ್ಲಿ ಇರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಷಯ ತಿಳಿಯುತ್ತಲೇ ಅವರ ಅಭಿಮಾನಿಗಳು ಆಸ್ಪತ್ರೆಯತ್ತ ಧಾವಿಸುತ್ತಿದ್ದಾರೆ.ಬಾಲಕೃಷ್ಣ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ವೈದ್ಯರು, ಅವರಿಗೆ ಕಳೆದ ಆರು ತಿಂಗಳಿನಿಂದ ಭುಜದ ನೋವು ಇದೆ. ಬಲಗೈ ಎತ್ತಲು ಕೂಡ ಆಗುತ್ತಿಲ್ಲ. ಇದೀಗ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಭಿಮಾನಿಗಳು ಯಾರೂ ಭಯಪಡುವ ಅಗತ್ಯವಿಲ್ಲ. ಅವರು ಬೇಗ ಗುಣಮುಖರಾಗಿ ಬಿಡುಗಡೆ ಹೊಂದಲಿದ್ದಾರೆ ಎಂದಿದ್ದಾರೆ.ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಡಾ.ರಘುವೀರ್‌ ರೆಡ್ಡಿ ಮತ್ತು ಡಾ.ಬಿ.ಎನ್‌. ಪ್ರಸಾದ್‌ ಅವರ ತಂಡವು ಸತತ ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿದೆ. ಬಾಲಕೃಷ್ಣ ಅವರು ಆರೋಗ್ಯವಾಗಿದ್ದಾರೆ.ಪುನೀತ್‌ ರಾಜ್‌ಕುಮಾರ್‌ ಅವರ ಕುಟುಂಬದವರ ಸ್ನೇಹಿತರೂ ಆಗಿರುವ ನಂದಮುರಿ ಅವರು, ಅಂತಿಮ ದರ್ಶನಕ್ಕೆ ಬಂದ ವೇಳೆ ಕುಟುಂಬಸ್ಥರನ್ನು ಬಹಳ ಸಾಂತ್ವನ ಗೊಳಿಸಿದ್ದರು. ನಾವು ಒಂದೇ ಕುಟುಂಬದಲ್ಲಿ ಹುಟ್ಟಿರದೇ ಇದ್ದರೂ, ಸಹೋದರರಿದ್ದಂತೆ. ಹಲವು ಬಾರಿ ಪುನೀತ್ ಅವರನ್ನು ಭೇಟಿಯಾಗಿದ್ದೆ. ಅವರು ಇಲ್ಲ ಎನ್ನುವುದು ನಂಬಲು ಆಗುತ್ತಲೇ ಇಲ್ಲ ಎಂದಿದ್ದರು.
ಹುಟ್ಟು-ಸಾವಿನ ದಿನಗಳಲ್ಲಿ ಪುನೀತ್‌ ‘ಜನ್ಮ ರಹಸ್ಯ’! ಇದೆಂಥ ಕಾಕತಾಳೀಯ? ವೈರಲ್‌ ಆಗ್ತಿದೆ ಪೋಸ್ಟ್‌
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 + fourteen =
Remember me
