ಮುಂಬೈ:ಹಣಕ್ಕಾಗಿಯೋ ಇಲ್ಲವೇ ಪ್ರಚಾರಕ್ಕಾಗಿಯೋ ಕೆಲ ನಟಿಯರು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಉಡುಗೆಯಲ್ಲಿ ಪೋಸ್​ ಕೊಡುವುದು ಮಾಮೂಲಾಗಿದೆ. ಟ್ರೋಲ್​ ಆದರೆ ಹೆಚ್ಚು ಪ್ರಚಾರಕ್ಕೆ ಬರುತ್ತೇವೆ ಎನ್ನುವ ಕಾರಣಕ್ಕೆ ಈಚಿನ ದಿನಗಳಲ್ಲಿ ಕೆಲ ನಟಿಯರು ಹೀಗೆ ಚಿತ್ರ-ವಿಚಿತ್ರ ಎನ್ನಿಸುವ ಉಡುಗೆ ತೊಟ್ಟು ಸಾಮಾಜಿಕ ಜಾಲತಾಣದಲ್ಲಿ ಪೋಸ್​ ಕೊಡುತ್ತಿದ್ದಾರೆ. ಇದೀಗ ಈ ನಟಿಯರಿಗಿಂತ ತಾನೇನೂ ಕಮ್ಮಿ ಇಲ್ಲ, ಅವರಿಗಿಂತಲೂ ಒಂದು ಕೈ ಮೇಲೆ ಎಂದಿರುವ ನಟ ರಣಬೀರ್​ ಸಿಂಗ್​ ಮಾಡಿಸಿಕೊಂಡಿರೋ ಫೋಟೋಶೂಟ್​ ಜಾಲತಾಣದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ.
ಇದಕ್ಕೆ ಕಾರಣ, ರಣಬೀರ್​ ಸಿಂಗ್​ ಸಂಪೂರ್ಣ ಬೆತ್ತಲಾಗಿ ಫೋಟೋ ಶೂಟ್​ ಮಾಡಿಸಿಕೊಂಡಿದ್ದಾರೆ. ಇದಾಗಲೇ ಚಿತ್ರ-ವಿಚಿತ್ರ ಡ್ರೆಸ್​ಗೆ ಸಕತ್​ ಫೇಮಸ್​ ಆಗಿರುವ ರಣಬೀರ್​, ತಾನು ಯಾವುದೇ ಬಟ್ಟೆ ಇಲ್ಲದೆಯೂ ಚೆನ್ನಾಗಿ ಕಾಣಿಸಬಲ್ಲೆ ಎಂದು ಸಾಬೀತು ಪಡಿಸಲು ಹೋದಂತಿದೆ!
ಮ್ಯಾಗಜಿನ್‌ ಒಂದರ ಮುಖಪುಟಕ್ಕಾಗಿ ಸಂಪೂರ್ಣ ನಗ್ನವಾಗಿ ಕ್ಯಾಮೆರಾ ಕಣ್ಣಿಗೆ ರಣ್‌ವೀರ್ ಪೋಸ್ ನೀಡಿದ್ದಾರೆ. ಇದನ್ನು ನೋಡಿ ಹಲವರು ಗರಂ ಆಗಿದ್ದಾರೆ. ರಣಬೀರ್​ ಅವರ ಪತ್ನಿ ದೀಪಿಕಾ ಪಡುಕೋಣೆ ಅವರಿಗೆ ಅಭಿಮಾನಿಗಳು ಕ್ಲಾಸ್ ತೆಗೆದುಕೊಂಡಿದ್ದಾರೆ. ನಿಮ್ಮ ಪತಿಗೆ ಸ್ವಲ್ಪ ಬುದ್ಧಿ ಹೇಳಿ ಎಂದಿದ್ದಾರೆ. ಆದರೆ ದೀಪಿಕಾ ಸದ್ಯ ಮೌನ ತಾಳಿದ್ದಾರೆ.

ಮ್ಯಾಗಜೀನ್​ಗೆ ಈ ರೀತಿಯ ಪೋಸ್​ ನೀಡಿದ ನಂತರ ಸಂದರ್ಶನ ಕೂಡ ನೀಡಿರೋ ನಟ ರಣಬೀರ್​, ನಟಿಸುವಾಗ ನನಗೆ ಬೆತ್ತಲಾಗುವುದು ನನಗೆ ತುಂಬಾ ಇಷ್ಟ, ಇದು ಸುಲಭ ಕೂಡ. ಆದರೆ ನೋಡುಗರು ನನ್ನ ನೋಡಿ ಮುಜುಗರ ಪಡುತ್ತಾರೆ ಎಂದು ಬಟ್ಟೆ ಹಾಕಿಕೊಳ್ಳುತ್ತೇನೆ ಎಂದಿದ್ದಾರೆ. ಇವರ ಈ ಫೋಟೋ ಹಾಗೂ ಹೇಳಿಕೆಗೆ ಭಾರಿ ಚರ್ಚೆ ಶುರುವಾಗಿದೆ(ಏಜೆನ್ಸೀಸ್​)
A post shared by DietSabya® (@dietsabya)

ನಿಮ್ಮ ಎಕ್ಸ್​ಗಳ ಜತೆ ಮಂಚಕ್ಕೆ ಹೋಗುವಿರಾ ಎಂದು ನಟಿಯರನ್ನು ಪ್ರಶ್ನಿಸಿದ ಕರಣ್​: ಸಾರಾ-ಜಾಹ್ನವಿ ಉತ್ತರ ಹೀಗಿತ್ತು!

ಸೊಳ್ಳೆಬತ್ತಿನಾ, ಚಕ್ಕುಲಿನಾ? ಉರ್ಫಿಯ ಡ್ರೆಸ್​ಗೆ ಉಫ್​ ಎಂದ ಅಭಿಮಾನಿಗಳು ಕಣ್ಣುಗಳನ್ನೇ ದಾನ ಮಾಡಲು ರೆಡಿ ಅಂದ್ರು!

ಕೊಟ್ಟ ಮಾತು ಉಳಿಸಿಕೊಂಡ ಗರ್ಭಿಣಿ ಆಲಿಯಾ ಭಟ್​: ಹಾಲಿವುಡ್​ ಶೂಟಿಂಗ್​ನಲ್ಲಿ ಬೇಬಿಬಂಪ್ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 5 =
Remember me
