ಮುಂಬೈ:‘ನಟಿಯರಷ್ಟೇ ಅಂಗಾಂಗ ತೋರಿಸುವುದ್ಯಾಕೆ? ನಾನೂ ಒಂದು ಹೆಜ್ಜೆ ಮುಂದೆ ಹೋಗುತ್ತೇನೆ’ ಎಂದು ಸಂಪೂರ್ಣವಾಗಿ ಬೆತ್ತಲಾಗಿ ಮ್ಯಾಗಜೀನ್​ ಒಂದಕ್ಕೆ ಫೋಟೋ ಶೂಟ್​ ಮಾಡಿಸಿಕೊಂಡು ಭಾರಿ ವಿವಾದಕ್ಕೆ ಗುರಿಯಾಗಿರುವ ನಟ ಬಾಲಿವುಡ್​ ನಟ ರಣವೀರ್​ ಸಿಂಗ್​ ಇದೀಗ ಪೊಲೀಸರ ಎದುರಿಗೆ ಸ್ಪಷ್ಟನೆಯೊಂದನ್ನು ನೀಡಿದ್ದಾರೆ.
ಸಂಪೂರ್ಣ ಬೆತ್ತಲಾದ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಅವರು ಪೋಸ್ಟ್ ಮಾಡಿ ಪೇಚಿಗೆ ಸಿಲುಕಿದ್ದಾರೆ. ಈ ಫೋಟೋ ಭಾರಿ ವೈರಲ್​ ಆಗುತ್ತಲೇ ಇದು ಹಲವು ಮಹಿಳಾಮಣಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ಕಾರಣಕ್ಕೆ ಇವರ ವಿರುದ್ಧ ಮುಂಬೈ ಪೊಲೀಸರಲ್ಲಿ ಕೇಸ್ ಕೂಡ ದಾಖಲಾಗಿದೆ.
ಮಹಿಳೆಯರ ಭಾವನೆಗೆ ಧಕ್ಕೆಯಾಗಿರುವ ಆರೋಪದಡಿ ರಣವೀರ್​ ವಿರುದ್ಧ ಮುಂಬೈ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಸೆಕ್ಷನ್​ 509, 294 ಮತ್ತು ಐಟಿ ಕಾಯ್ದೆ 67 ಎ ಸೆಕ್ಷನ್​ ಅಡಿಯಲ್ಲಿ ಮುಂಬೈನ ಚೆಂಬೂರ್​ ಠಾಣಾ ಪೊಲೀಸರು ಎಫ್​ಐಆರ್​ ದಾಖಲಿಸಿದ್ದರಿಂದ ರಣವೀರ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಟನ ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಟ ಸ್ಪಷ್ಟನೆ ಕೊಟ್ಟಿದ್ದು, ತಮ್ಮ ಫೋಟೋ ತಿರುಚಲಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪೊಲೀಸರ ಎದುರು ಸ್ಪಷ್ಟನೆ ನೀಡಿರುವ ನಟ, “ನಾನು ಯಾವುದೇ ಫೋಟೋದಲ್ಲಿ ಖಾಸಗಿ ಅಂಗ ಕಾಣಿಸಲಿಲ್ಲ. ನನ್ನ ಫೋಟೋ ತಿರುಚಲಾಗಿದೆ. ಆ ಫೋಟೋದಲ್ಲಿ ಕಾಣಿಸುತ್ತಿರುವ ಆ ಪಾರ್ಟ್​ ನನ್ನದಲ್ಲ. ಮೂಲ ಫೋಟೋ ನಾನು ತೋರಿಸಲು ಸಿದ್ಧ” ಎಂದಿದ್ದಾರೆ. ನಟ ಹೇಳಿರುವ ಪ್ರಕಾರ, ನಗ್ನವಾಗಿ ಫೋಟೋಶೂಟ್​ ಮಾಡಿಸಿಕೊಂಡಿದ್ದರೂ ಖಾಸಗಿ ಅಂಗಗಳನ್ನು ಅವರು ಪ್ರದರ್ಶಿಸಿರಲಿಲ್ಲ. ಖಾಸಗಿ ಅಂಗಕ್ಕೆ ಕೈ ಅಡ್ಡಲಾಗಿ ಹಿಡಿದು ಫೋಟೋಶೂಟ್​ ಮಾಡಿಸಲಾಗಿತ್ತು. ಆದರೆ ಈ ಪೈಕಿ ಅವರ ಒಂದು ಫೋಟೋದಲ್ಲಿ ಖಾಸಗಿ ಅಂಗ ಸ್ಪಷ್ಟವಾಗಿ ಕಾಣಿಸುವಂತೆ ಫೋಟೋ ತಿರುಚಿ ಅದನ್ನು ವೈರಲ್​ ಮಾಡಲಾಗಿದೆ ಎನ್ನುವುದು.
ಈ ಹಿನ್ನೆಲೆಯಲ್ಲಿ, ಅವರಿಗೆ ಕ್ಲೀನ್​ಚಿಟ್​ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. (ಏಜೆನ್ಸೀಸ್​​)
ದುಬಾರಿ ಗಿಫ್ಟ್​ ಆಸೆಗೆ ಮಹಾವಂಚಕನ ಸ್ನೇಹ? ಜಾಕ್ವೆಲಿನ್ ಜತೆ ಈ ನಾಲ್ಕು ಖ್ಯಾತ ನಟಿಯರಿಗೂ ಗ್ರಹಚಾರ!
ಡಿಕೆಶಿಗೆ ಮತ್ತೆ ಶಾಕ್​ ಕೊಟ್ಟ ಇಡಿ: ಸಮನ್ಸ್​ ಜಾರಿ- ಟ್ವೀಟ್​ ಮೂಲಕ ಅಸಮಾಧಾನ ಹೊರಹಾಕಿದ ಕೆಪಿಸಿಸಿ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
