ಮುಂಬೈ:ಡ್ರೀಮ್‌ ಗರ್ಲ್‌ ಬಾಲಿವುಡ್‌ ಚಿತ್ರದಲ್ಲಿ ಸಹನಟಿಯಾಗಿ ಅಭಿನಯಿಸಿ ಸಾಕಷ್ಟು ಹೆಸರು ಮಾಡಿದ್ದ ರಿಂಕು ಸಿಂಗ್‌ ನಿಕುಂಬ ಕೋವಿಡ್‌ಗೆ ಬಲಿಯಾಗಿದ್ದಾರೆ.ಇವರು ಮೇ ತಿಂಗಳ ಆರಂಭದಲ್ಲಿ ಕೋವಿಡ್‌ನ ಮೊದಲ ಡೋಸ್‌ ಪಡೆದುಕೊಂಡಿದ್ದರು. ಇದರ ಹೊರತಾಗಿಯೂ ಎರಡು ವಾರಗಳಲ್ಲಿಯೇ ಅವರಿಗೆ ಕರೊನಾ ಪಾಸಿಟಿವ್ ಬಂದಿತ್ತು. ಕರೊನಾ ಡೋಸ್‌ ಪಡೆದ ಕಾರಣ, ಹೆಚ್ಚಿನ ಸಮಸ್ಯೆ ಆಗುವುದಿಲ್ಲ ಎಂದು ಅರಿತಿದ್ದ ಅವರು ಮನೆಯಲ್ಲಿಯೇ ಐಸೋಲೇಷನ್‌ನಲ್ಲಿದ್ದರು.ಆದರೆ, ದಿನೇ ದಿನೇ ಆರೋಗ್ಯ ಬಿಗಡಾಯಿಸತೊಡಗಿತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದರು. ಸಮಸ್ಯೆ ಹೆಚ್ಚಾಗಿದ್ದರಿಂದ ಐಸಿಯುಗೆ ಅಡ್ಮಿಟ್‌ ಮಾಡಲಾಗಿತ್ತು. ಆದರೆ ಅವರು ಇಂದು ಮೃತಪಟ್ಟಿದ್ದಾರೆ.ಕೆಲವು ಜಾಹೀರಾತುಗಳಲ್ಲಿಯೂ ಇವರು ಕಾಣಿಸಿಕೊಂಡಿದ್ದಾರೆ. ಇದೇ ಶೂಟಿಂಗ್‌ ಹಿನ್ನೆಲೆಯಲ್ಲಿ ಗೋವಾಗೆ ತೆರಳಲು ಸಜ್ಜಾಗಿದ್ದರು. ಆದರೆ ಮನೆಯವರು ಅನುಮತಿ ನೀಡಿರಲಿಲ್ಲ. ಈ ನಡುವೆಯೇ ಸೋಂಕು ಅವರನ್ನು ಬಲಿ ಪಡೆದಿದೆ.ಇವರು ಚಿಡಿಯಾಘರ್‌, ಮೇರಿ ಹಾನಿಕಾರ್‌ ಬೀವಿ ಸೇರಿದಂತೆ ಕೆಲವು ಹಾಸ್ಯ ಧಾರಾವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಕೇಸ್‌ ಮುಗಿಸುತ್ತಿಲ್ಲ ಎಂಬ ಸಿಟ್ಟಿನಿಂದ ಜಡ್ಜ್‌ ಮೇಲೆ ಚಪ್ಪಲಿ ಎಸೆದವನಿಗೆ 9 ವರ್ಷಗಳ ನಂತರ ಶಿಕ್ಷೆ
ಬಾಂಗ್ಲಾ ಯುವತಿ ರೇಪಿಸ್ಟ್‌ಗಳಿಗೆ ದಿನಕ್ಕೆ ಲಕ್ಷ ಲಕ್ಷ ರೂ.ಆದಾಯ! ಬಾಯಿಬಿಡ್ತಿದ್ದಾರೆ ಒಂದೊಂದೇ ಭಯಾನಕ ಸತ್ಯ…


ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 + fourteen =
Remember me
