ಮುಂಬೈ:ನಿನ್ನೆ ಅಂದರೆ ಡಿಸೆಂಬರ್​ 12, ಹಿಂದಿ ಧಾರಾವಾಹಿಯ ಮೂಲಕ ಹಾಗೂ ಬಿಗ್​ಬಾಸ್​ 13ರ ವಿಜೇತರಾಗಿರುವ ಮನೆಮಾತಾಗಿರುವ ಪ್ರಸಿದ್ಧ ನಟ ಸಿದ್ಧಾರ್ಥ್​ ಶುಕ್ಲಾ ಅವರ 40ನೇ ಹುಟ್ಟುಹಬ್ಬದ ಸಂಭ್ರಮ. ಕರೊನಾ ನಿಮಿತ್ತ ತಮ್ಮ ಅತ್ಯಂತ ಸಮೀಪದ ಸ್ನೇಹಿತರು ಹಾಗೂ ಬಂಧುಗಳಿಗಷ್ಟೇ ಆಹ್ವಾನ ನೀಡಿದ್ದರು ಸಿದ್ಧಾರ್ಥ್​​.
ಇದಿಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆದರೆ ತಮ್ಮ ಹುಟ್ಟುಹಬ್ಬದ ನಂತರ ತಾವು ಮನೆಗೆ ಹೋಗುತ್ತಿರುವ ದೃಶ್ಯವನ್ನೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದೇ ಅವರಿಗೀಗ ಮುಳುವಾಗಿದೆ. ಏಕೆಂದರೆ ಹುಟ್ಟುಹಬ್ಬದ ಖುಷಿಯಲ್ಲಿ ಕಂಠಪೂರ್ತಿ ಕುಡಿದು ಟೈಟ್​ ಆಗಿದ್ದ ಸಿದ್ಧಾರ್ಥ್​ ವಿರುದ್ಧ ಈಗ ಅಮಾನಕರೊಬ್ಬರನ್ನು ಕಾರಿನಿಂದ ಗುದ್ದಿರುವ ಆರೋಪ ಕೇಳಿಬಂದಿದೆ.
ತಾವು ಮನೆಗೆ ಹೋಗುತ್ತಿದ್ದಾಗ ಕೆಲವು ಗೂಂಡಾಗಳು ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಸಿದ್ಧಾರ್ಥ್​ ಆರೋಪಿಸಿದ್ದು, ಅದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಅದೀಗ ಸಕತ್​ ವೈರಲ್​ ಆಗಿದೆ.
https://www.instagram.com/p/CIsOtQDBS3-/?utm_source=ig_web_button_share_sheetಅವರು ಈ ವಿಡಿಯೋ ಹಾಕಿರುವ ಉದ್ದೇಶ ತಮ್ಮ ಮೇಲೆ ಹಲ್ಲೆ ನಡೆದಿದೆ ಎನ್ನುವುದನ್ನು ತೋರಿಸಲು. ಆದರೆ ಆ ವಿಡಿಯೋದಲ್ಲಿ ಹುಡುಗನೊಬ್ಬ ನೀವು ಅಮಾಯಕರೊಬ್ಬರನ್ನು ಕುಡಿದ ಅಮಲಿನಲ್ಲಿ ಗುದ್ದಿದ್ದೀರಿ ಎಂದು ಹೇಳುವುದು ಕೇಳಿಸುತ್ತಿದೆ. ಅವರ ಜತೆ ಮಾತನಾಡುವಾಗ ಸಿದ್ಧಾರ್ಥ್​ ಕುಡಿದಿರುವುದು ಸ್ಪಷ್ಟವಾಗಿ ಕೇಳಿಸುತ್ತದೆ.
ನಂತರ, ಇದು ವೈರಲ್​ ಆಗುತ್ತಿದ್ದಂತೆಯೇ, ಸಿದ್ಧಾರ್ಥ್​ ಬೇರೆ ಕಥೆ ಹೇಳಿದ್ದಾರೆ. ನನಗೆ ಕೆಲವು ಗೂಂಡಾಗಳು ಚಾಕುವಿನಿಂದ ಬೆದಕಿಕೆ ಹಾಕಲು ಬಂದಿದ್ದರು. ಆದ್ದರಿಂದ ನಾನು ಫಾಸ್ಟ್​ ಆಗಿ ಗಾಡಿ ಓಡಿಸಬೇಕಾಯಿತು ಎಂದಿದ್ದಾರೆ. ಒಟ್ಟಿನಲ್ಲಿ ಅಲ್ಲಿಗೆ ಜಗಳಕ್ಕೆ ಬಂದವರನ್ನು ಪೊಲೀಸರ ಬಳಿ ಯಶಸ್ವಿಯಾಗಿ ಕಳುಹಿಸಿಕೊಡಲಾಗಿದೆ ಎಂದು ಸಿದ್ಧಾರ್ಥ್​ ಸ್ಪಷ್ಟನೆ ನೀಡಿದ್ದಾರೆ.
ಈ ನಡುವೆಯೇ ಸಿದ್ಧಾರ್ಥ್​ ಅವರ ಅಸಂಖ್ಯ ಅಭಿಮಾನಿಗಳು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಮುಗ್ಧ ರೈತರ ಹೆಸರಲ್ಲಿ ನಡೀತೀರೋ ಪ್ರತಿಭಟನೆಯ ಇನ್ನೊಂದು ಕರಾಳಮುಖ ಬಯಲು!

ಬೆಲ್ಟ್​ನಿಂದ ಹೊಡೀತಾರೆ, ಬೆರಳನ್ನು ಮುರಿದು ಹಿಂಸಿಸುತ್ತಾರೆ- ಮೃತ ನಟಿಯ ಮೆಸೇಜ್​ ಶೇರ್​ ಮಾಡಿದ ಅಣ್ಣ

ಅರ್ಚಕರು ಅರೆಬೆತ್ತಲೇಕೆ ಎಂದು ಪ್ರಶ್ನಿಸಿ ಗಲಾಟೆಗೆ ಹೊರಟ ಹೋರಾಟಗಾರ್ತಿ ಅರೆಸ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
