ಕೊಯಮತ್ತೂರು:ಭೂ ಹಗರಣ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟ ಸುರೇಶ್ ಗೋಪಿ ಅವರ ಸಹೋದರ ಸುನೀಲ್ ಗೋಪಿಯನ್ನು ಕೊಯಮತ್ತೂರಿನಲ್ಲಿ ಅರೆಸ್ಟ್‌ ಮಾಡಲಾಗಿದೆ. ಸುರೇಶ್‌ ಗೋಪಿ ಅವರು ಮಲಯಾಳ, ತಮಿಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿದ್ದಾರೆ.
ಅಸಿಂಧು ಎಂದು ಕೋರ್ಟ್‌ ಹೇಳಿದ್ದ ಭೂಮಿಯೊಂದನ್ನು ಮಾರಾಟ ಮಾಡಿರುವ ಆರೋಪ ಸುನೀಲ್‌ ಅವರ ಮೇಲಿದೆ. ಇವರ ವಿರುದ್ಧ ಕೊಯಮತ್ತೂರಿನ ಜಿಎನ್ ಮಿಲ್ಸ್ ನಿವಾಸಿ ಗಿರಿಧರನ್ ಎನ್ನುವವರು ದೂರು ದಾಖಲು ಮಾಡಿದ್ದರು. ಸದ್ಯ ಇವರನ್ನು ಕೊಯಮತ್ತೂರಿನ ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ?
ಮಯಿಲ್ ಸಾಮಿ ಎನ್ನುವವರು 4.52 ಎಕರೆ ಜಮೀನಿನ ಮಾಲೀಕರು. ನವಕರೈ ಪ್ರದೇಶದಲ್ಲಿ ಇವರ ಜಮೀನು ಇತ್ತು. ಅದನ್ನು ಸುನೀಲ್ ಗೋಪಿ ಖರೀದಿ ಮಾಡಿದ್ದರು. ಆದರೆ ಕೆಲವು ಕಾರಣಗಳಿಂದ ಈ ಜಮೀನಿನ ವಿವಾದ ಕೋರ್ಟ್‌ ಮೆಟ್ಟಿಲೇರಿತ್ತು. ಆಗ ಕೋರ್ಟ್‌ ಈ ಜಮೀನಿಗೆ ಸಂಬಂಧಿಸಿದಂತೆ ಮಾಡಿರುವ ಬಾಂಡ್ ನೋಂದಣಿ ಅಸಿಂಧು ಎಂದು ಘೋಷಿಸಿತ್ತು.
ಇದು ತಿಳಿದಿದ್ದರೂ ಸುನೀಲ್‌ ಅವರು ಮೋಸದಿಂದ ಈ ಜಮೀನನ್ನು ಗಿರಿಧರನ್ ಅವರಿಗೆ ಮಾರಾಟ ಮಾಡಿರುವ ಆರೋಪ ಹೊತ್ತಿದ್ದರೆ. ಮಾತ್ರವಲ್ಲದೇ 97 ಲಕ್ಷ ರೂಪಾಯಿಗಳನ್ನು ಗಿರಿಧರನ್‌ ಅವರಿಂದ ಪಡೆದುಕೊಂಡಿದ್ದಾರೆ. ನಂತರ ಜಮೀನಿನ ದಾಖಲೆಗಳನ್ನು ಪರಿಶೀಲಿಸಿದಾಗ ತಾವು ಮೋಸ ಹೋಗಿರುವುದು ಗಿರಿಧರನ್‌ ಅವರಿಗೆ ತಿಳಿದಿದ್ದರಿಂದ ಅವರ ದೂರು ದಾಖಲಿಸಿದ್ದಾರೆ.
ಯುದ್ಧಭೂಮಿಯಿಂದ ನವೀನ್‌ ದೇಹ ದುಬೈಗೆ ತಂದು, ಅಲ್ಲಿಂದ ಬೆಂಗಳೂರಿಗೆ ತಂದ ಕ್ಲಿಷ್ಟಕರ ಸನ್ನಿವೇಶ ಬಿಚ್ಚಿಟ್ಟ ಸಿಎಂ

ಆಸ್ಪತ್ರೆ ಸೇರಿದ್ದ ಗೆಳೆಯನ ನೋಡಲು ಹೋದ ಮೂವರು ಪ್ರಾಣಸ್ನೇಹಿತರು ಮನೆ ಸೇರಿದ್ದು ಶವವಾಗಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − six =
Remember me
