ಹೈದರಾಬಾದ್:ಟಾಲಿವುಡ್‌ ನಟ, ನಿರ್ದೇಶಕ, ವಿಮರ್ಶಕ, ಬಿಗ್‌ಬಾಸ್‌ (ತೆಲಗು) ಖ್ಯಾತಿಯ ಕತ್ತಿ ಮಹೇಶ್‌ ಅವರು ಭೀಕರ ಅಪಘಾತವೊಂದಲ್ಲಿ ಗಾಯಗೊಂಡಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿತ್ತೂರಿನಿಂದ ಹೈದರಾಬಾದ್​ಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಮಹೇಶ್‌ ಅವರು ಇನೋವಾ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಇವರ ಕಾರಿಗೆ ಟ್ರಕ್ ಡಿಕ್ಕಿಹೊಡೆದಿದೆ. ನೆಲ್ಲೂರಿನ ಹೊರವಲಯದ ಚಂದ್ರಶೇಖರಪುರಂ ಬಳಿ ಈ ಅಪಘಾತ ಸಂಭವಿಸಿದೆ.

ಕಾರು ನಜ್ಜುಗುಜ್ಜಾಗಿದ್ದು, ಕಾರ್‌ನಲ್ಲಿ ಏರ್‌ಬ್ಯಾಗ್ ಓಪನ್ ಆಗಿದ್ದರಿಂದ ಮಹೇಶ್‌ಗೆ ಪ್ರಾಣಾಪಾಯವಾಗಲಿಲ್ಲ. ಆದರೆ ಕಾರು ಜಖಂಗೊಂಡಿರುವ ಸ್ಥಿತಿ ನೋಡಿದರೆ, ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿರುವುದಾಗಿ ಹೇಳಲಾಗುತ್ತಿದೆ. ಪ್ರಜ್ಞೆ ಕಳೆದುಕೊಂಡಿರುವ ಅವರನ್ನು ಸದ್ಯ ನೆಲ್ಲೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಕಿರುಚಿತ್ರಗಳಲ್ಲಿಯೂ ಮಹೇಶ್‌ ಅವರು ಭಾರಿ ಜನಪ್ರಿಯರು. 2016ರಲ್ಲಿ ಕಿರುಚಿತ್ರ ಮಾಡಿದ್ದರು. ಇವರು ಹೆಚ್ಚು ಗುರುತಿಸಿಕೊಂಡಿರುವುದು ಸಿನಿಮಾ ವಿಮರ್ಶೆಯಲ್ಲಿ ವಿವಾದಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ. ನೇನೆ ರಾಜು ನೇನೆ ಮಂತ್ರಿ, ಕ್ರ್ಯಾಕ್​, ಅಮ್ಮ ರಾಜ್ಯಂ ಲೋ ಕಡಪ ಬಿದ್ದಲು ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 2015ರಲ್ಲಿ ಪೆಸರಟ್ಟು ಸಿನಿಮಾ ಮೂಲಕ ಮಹೇಶ್ ಸಿನಿಮಾ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ.
ಜಮ್ಮು ವಿಮಾನನಿಲ್ದಾಣದಲ್ಲಿ ಬಾಂಬ್‌ ಬ್ಲಾಸ್ಟ್‌! ಕೆಲವೇ ಕ್ಷಣಗಳ ಅಂತರದಲ್ಲಿ ಎರಡು ಕಡೆ ಸ್ಫೋಟ

ಮಟನ್‌ ಊಟ ಹಾಕಿಸಿಲ್ಲವೆಂದು ಮದುಮಗಳ ಬದಲು ಬೇರೊಬ್ಬಳಿಗೆ ತಾಳಿ ಕಟ್ಟಿದ ವರಮಹಾಶಯ…

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:eleven − three =
Remember me
