ಚೆನ್ನೈ:ನಟ ಪುನೀತ್​ ರಾಜ್​ಕುಮಾರ್​ ಅವರ ಅಕಾಲಿನ ಸಾವಿನ ನಂತರ ಅವರು ನಡೆಸುತ್ತಿದ್ದ ಶಾಲೆಗಳ ಸುಮಾರು 1800 ಮಕ್ಕಳ ಜವಾಬ್ದಾರಿಯನ್ನು ತಾನು ಹೊರುವುದಾಗಿ ಹೇಳಿ ಕನ್ನಡದ ಭಾರಿ ಅಭಿಮಾನಿಗಳನ್ನು ಗಳಿಸಿರುವ ತಮಿಳು ನಟ ವಿಶಾಲ್​ಗೆ ಮತ್ತೊಮ್ಮೆ ಭಾರಿ ಆಘಾತ ಉಂಟಾಗಿದೆ.
ಸಾಹಸ ದೃಶ್ಯಗಳಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವ ನಟ ವಿಶಾಲ್​ಗೆ ಇದೀಗ ಮತ್ತೆ ಅದೇ ದೃಶ್ಯ ಕೈಕೊಟ್ಟಿದೆ. ಕಳೆದ ಫೆಬ್ರುವರಿಯಲ್ಲಿ ಲಾಠಿ ಚಿತ್ರೀಕರಣದ ವೇಳೆ ಹೇರ್​ಲೈನ್​ ಫ್ರ್ಯಾಕ್ಚರ್​ ಆಗಿತ್ತು. ಲಾಠಿ ಚಿತ್ರದಲ್ಲಿ ಇವರು ಪೊಲೀಸ್ ಅಧಿಕಾರಿಯಾಗಿ ಪಾತ್ರ ನಿರ್ವಹಿಸಿದ್ದರು. ಮಗುವೊಂದನ್ನು ಎತ್ತಿಕೊಂಡು ಆಳವಾದ ಜಾಗಕ್ಕೆ ಧುಮುಕುವ ಸಂದರ್ಭದಲ್ಲಿ ಅನಾಹುತ ಸಂಭವಿಸಿತ್ತು. ಇದರ ಬೆನ್ನಲ್ಲೇ ಇದೀಗ `ಲತ್ತಿಯ’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ವೇಳೆ ಗಾಯಗೊಂಡಿದ್ದಾರೆ. ಫೈಟ್‌ ಸೀನ್‌ ಚಿತ್ರೀಕರಿಸುವಾಗ ಗಾಯಗಳಾಗಿದ್ದು, ಸದ್ಯ ಚಿತ್ರೀಕರಣಕ್ಕೆ ಬ್ರೇಕ್‌ ಹಾಕಲಾಗಿದೆ.
ಲತ್ತಿಯ ಚಿತ್ರದಲ್ಲಿ ಕೂಡ ವಿಶಾಲ್​ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿದಿದೆ. ಆ್ಯಕ್ಷನ್ ಸೀನ್ಸ್ ಶೂಟಿಂಗ್‌ ಮಾಡುವಾಗ ಗಾಯಗೊಂಡಿದ್ದಾರೆ. ಈ ಸಿನಿಮಾಗಾಗಿ ವಿಶಾಲ್ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದರು. ಈ ವಿಡಿಯೋ ಸಖತ್ ವೈರಲ್ ಕೂಡ ಆಗಿದೆ.
ಫೆಮಿನಾ ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡ ಕನ್ನಡತಿ: ಯಾರೀ ಉಡುಪಿ ಮೂಲದ ಬೆಡಗಿ?

ಎಳವೆಯಲ್ಲಿಯೇ ಕನ್ನಡಿಗರ ಹೃದಯಗೆದ್ದು ಅಗಲಿದ ಪುಟಾಣಿ ಸಮನ್ವಿ ಮನೆಗೆ ಪುಟ್ಟ ಕಂದನ ಆಗಮನ

ತೊಡೆ ಸವರಿದ… ಚುಂಬಿಸಿದ… ಎಂದು ಹೇಳಿಕೊಂಡಿದ್ದ ನಟಿ ಕುಬ್ರಾ ಬಿಚ್ಚಿಟ್ಟಿದ್ದಾರೆ ಗರ್ಭವತಿಯಾದ ಕರಾಳ ಕಥೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 16 =
Remember me
