ಕೊಯಮತ್ತೂರು: ಚಿತ್ರ ತಾರೆಯರು ಎಂದರೆ ಕೆಲವರ ಅಭಿಮಾನ ಅತಿರೇಕಕ್ಕೆ ಹೋಗುವುದು ಇದೆ. ಇದಾಗಲೇ ಖುಷ್ಬು ಸೇರಿದಂತೆ ಕೆಲವರು ತಾರೆಯರ ದೇವಾಲಯಗಳನ್ನು ಕಟ್ಟಿ ಪೂಜೆ ಮಾಡಿರುವುದನ್ನು ಕೇಳಿರಬಹುದು. ಇದೀಗ ಬಹುಭಾಷಾ ನಟಿಯೊಬ್ಬರನ್ನು ದೇವರ ಕೋಣೆಯಲ್ಲಿ ಇಟ್ಟು ನಿತ್ಯವೂ ಪೂಜೆ ಪುನಸ್ಕಾರ ಮಾಡುತ್ತಿದ್ದಾನೆ ಇಲ್ಲೊಬ್ಬ ಅಭಿಮಾನಿ.
ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಲಯಾಳದ ‘ಪ್ರೇಮಂ’ ಸಿನಿಮಾದ ಮೂಲಕ ಸಿನಿ ಪ್ರಿಯರ ಮನಸ್ಸನ್ನು ಗೆದ್ದ ಚೆಲುವೆ ಅನುಪಮಾ ಪರಮೇಶ್ವರನ್. ಇದು ಇವರ ಮೊದಲ ಸಿನಿಮಾವಾದರೂ ಸೂಪರ್​ ಹಿಟ್​ ಆಗಿದ್ದೂ ಅಲ್ಲದೇ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ.
ಒಬ್ಬಾತ ಅನುಪಮಾ ಅವರ ಎಷ್ಟು ಅಭಿಮಾನಿಯಾಗಿದ್ದಾನೆ ಎಂದರೆ ಅವರ ಫೋಟೋ ಇಟ್ಟುಕೊಂಡು ಪೂಜಿಸುತ್ತಿದ್ದಾನೆ. ಸದ್ಯ ಈ ಫೋಟೋವನ್ನು ಅಭಿಮಾನಿ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾನೆ. ಇದಕ್ಕೆ ನಟಿ ಅನುಪಮಾ ಕೂಡ ಸಕತ್​ ಖುಷಿಯಾಗಿದ್ದು, ಫೋಟೋಗೆ ಲೈಕ್​ ಮಾಡಿದ್ದಾರೆ. ನಾನು ಅನುಪಮಾ ಪರಮೇಶ್ವರ್ ಅವರ ದೊಡ್ಡ ಅಭಿಮಾನಿ ಎಂದು ಬರೆದುಕೊಂಡಿದ್ದಾನೆ ಈತ.
ಇದಾಗಲೇ ಅನುಪಮಾ ಅವರು ಮಲಯಾಳಿ, ತಮಿಳು ಮತ್ತು ತೆಲುಗಿನಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದು, ಪುನೀತ್ ರಾಜ್‌ಕುಮಾರ್‌ಗೆ ಜೋಡಿಯಾಗಿ ನಟಸಾರ್ವಭೌಮ ಸಿನಿಮಾದಲ್ಲಿಯೂ ನಟಿಸಿದ್ದಾರೆ.
@anupamahereit's true love@anupamahereBig fan of u my quiet baby😘😘😘😘pic.twitter.com/iOJIY3Zms9
— Sairamchimata (@Sairamchimata1)July 28, 2021

34 ಕೋಟಿ ರೂ. ಬ್ಲೂಫಿಲ್ಮಂ ದಂಧೆಗಿದ್ಯಾ ಶಿಲ್ಪಾ ಲಿಂಕ್‌? ನಟಿಗೆ ಕ್ಲೀನ್‌ಚಿಟ್‌ ನೀಡಲ್ಲ ಎಂದ ಪೊಲೀಸರು


34 ಕೋಟಿ ರೂ. ಬ್ಲೂಫಿಲ್ಮಂ ದಂಧೆಗಿದ್ಯಾ ಶಿಲ್ಪಾ ಲಿಂಕ್‌? ನಟಿಗೆ ಕ್ಲೀನ್‌ಚಿಟ್‌ ನೀಡಲ್ಲ ಎಂದ ಪೊಲೀಸರು

ರೇಪ್‌ ಕೇಸ್‌ನಲ್ಲಿ ಜೈಲುಪಾಲಾದ ಪ್ರೇಮಿಗಾಗಿ ಮೂರು ವರ್ಷ ಮೌನ ತಾಳಿ ಕೋರ್ಟ್‌ ಮನ ಗೆದ್ದ ಬಾಲಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + seven =
Remember me
