ಬೆಂಗಳೂರು:ಕೈಯಲ್ಲಿ ಬುಟ್ಟಿ ಇಟ್ಟುಕೊಂಡು, ತೋಟದಲ್ಲಿ ಹಣ್ಣುಗಳನ್ನು ಕೀಳುತ್ತಾ, ಗಿಡಗಳನ್ನು ನೆಡುತ್ತಾ, ಕಳೆಗಳನ್ನು ಕೀಳುತ್ತಾ ಇದ್ದಾರೆ ’ಕರ್ನಾಟಕದ ಕ್ರಷ್’ ಎಂದೇ ಅಭಿಮಾನಿಗಳ ಮನಗೆದ್ದಿರುವ ಸ್ಯಾಂಡಲ್‌ವುಡ್‌ ತಾರೆ ಆಶಿಕಾ ರಂಗನಾಥ್‌.
ಸದ್ಯ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಯಾವುದೇ ಚಿತ್ರೀಕರಣ ಇಲ್ಲದ ಕಾರಣ, ತೋಟದಲ್ಲಿ ಫುಲ್‌ ಬಿಜಿಯಾಗಿರುವ ಈ ನಟಿ, ತುಮಕೂರು ಮೂಲದವರು. ತಾವು ಕೆಲಸ ಮಾಡುತ್ತಿರುವ ಫೋಟೋಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಫಾರ್ಮ್‍ಹೌಸ್‍ನಲ್ಲಿ ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಜತೆ ಕೆಲಸ ಮಾಡುತ್ತಾ ಖುಷಿಖುಷಿಯಾಗಿರುವ ಇವರ ಫೋಟೋ ನೋಡಿ ಅಭಿಮಾನಿಗಳು ಸಂತಸದಿಂದ ಕುಣಿದಾಡುತ್ತಿದ್ದಾರೆ.

ಮಾವಿನಹಣ್ಣು, ತರಕಾರಿಗಳನ್ನು ಬಿದಿರಿನ ಬುಟ್ಟಿಯಲ್ಲಿ ಹೊತ್ತು ತರುತ್ತಿರುವ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. ಇವರು 2016ರಲ್ಲಿ ಕ್ರೇಜಿ ಬಾಯ್ ಮೂಲಕ ಖ್ಯಾತಿ ಗಳಿಸಿರುವ ಆಶಿಕಾ, ಮಹೇಶ್ ಬಾಬು ನಿರ್ದೇಶಿಸಿದ ಚಿತ್ರದಲ್ಲಿ ದಿಲೀಪ್ ಪ್ರಕಾಶ್ ಎದುರು ಅಭಿನಯಿಸಿದ್ದಾರೆ. ಸದ್ಯ ರೇಮೊ ಹಾಗೂ ಮದಗಜ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

‘ಅವ್ರಿರೋದು ಬೆಳಗಾವಿ, ನಾನಿರೋದು ಬೆಂಗಳೂರು… ಸಿಡಿ ವಿಚಾರ ಅವರ ವೈಯಕ್ತಿಕ, ನನಗ್ಹೇಗೆ ಗೊತ್ತಾಗತ್ತೆ?’

ನಿಮ್ಮ ಸಂಬಂಧ ಪತ್ನಿ ಒಪ್ಪಿಕೊಳ್ಳಬೇಕು, ಆದ್ರೆ ಅವಳ ಸಂಬಂಧ ನಿಮ್ಮಿಂದ ಜೀರ್ಣಿಸಿಕೊಳ್ಳಲು ಆಗ್ತಿಲ್ಲ ಅಲ್ವಾ?

ಹೆಣ್ಣುಮಕ್ಕಳಿಗೆ ತವರಿನಿಂದ ಬಂದಿರುವ ಆಸ್ತಿಯಲ್ಲಿ ಯಾರ‍್ಯಾರಿಗೆ ಪಾಲಿದೆ- ಕಾನೂನು ಹೇಳುವುದೇನು?

ಸೈಡ್‌ ಎಫೆಕ್ಟು ಇಲ್ದೇ ಸಹಸ್ರಾರು ಮಂದಿ ಜೀವ ಉಳಿಸಿರೋ ಔಷಧಿಗೆ ಏಕೆ ಅಡ್ಡಗಾಲು? ಜಾಲತಾಣದಲ್ಲಿ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − one =
Remember me
