ಕೋಲ್ಕತಾ:ಕೆಲ ದಿನಗಳ ಹಿಂದಷ್ಟೇ ಬಂಗಾಳಿ ಯುವನಟಿ ಪಲ್ಲವಿ ದೇ ಮೃತದೇಹ ಕೋಲ್ಕತದ ಗರ್ಫಾದಲ್ಲಿರುವ ಆಕೆಯ ಫ್ಲ್ಯಾಟ್​ನಲ್ಲಿ ಭಾನುವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಇದರ ರಹಸ್ಯ ಇನ್ನೂ ಅರಿಯುವ ಮುನ್ನವೇ ನಟಿ, ರೂಪದರ್ಶಿ ಬಿದಿಶಾ ಡಿ. ಮಂಜುದಾರ್ ಶವ ಅವರ ಅಪಾರ್ಟ್​ಮೆಂಟ್​ನಲ್ಲಿ ಪತ್ತೆಯಾಗಿದೆ.
ಕೋಲ್ಕತಾದ ದಮ್ ಡಮ್​ನಲ್ಲಿರುವ ತಮ್ಮ ಅಪಾರ್ಟಮೆಂಟ್​ನಲ್ಲಿ ಬಿದಿಶಾ ಶವವಾಗಿ ಪತ್ತೆಯಾಗಿದ್ದಾರೆ. 21 ವರ್ಷದ ಬಿದಿಶಾ ನಟಿ ಕಮ್ ಮಾಡೆಲ್. ಇವರು ನಾಲ್ಕು ತಿಂಗಳ ಹಿಂದೆಯಷ್ಟೇ ಈ ಅಪಾರ್ಟ್​ಮೆಂಟ್​ ಬಾಡಿಗೆಗೆ ಪಡೆದುಕೊಂಡಿದ್ದರು. ಆದರೆ ಇದೀಗ ಅವರ ಮೃತಪಟ್ಟಿದ್ದು, ಬಹಳ ಅನುಮಾನಕ್ಕೆ ಕಾರಣವಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ ಕೂಡ ಸಿಕ್ಕಿದ್ದು, ಕೈಯಲ್ಲಿ ಸರಿಯಾದ ಉದ್ಯೋಗ ಇಲ್ಲದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾರೆ ಎನ್ನಲಾಗಿದೆ. ಆದರೆ ಕೆಲವರ ಪ್ರಕಾರ ಬಿದಿಶಾ ಮತ್ತು ಆಕೆಯ ಸ್ನೇಹಿತನ ನಡುವೆ ಜಗಳವಾಗಿದೆ. ಇದರಿಂದಾಗಿ ಗೆಳೆಯನಿಂದ ದೂರವಾಗಿ ಖಿನ್ನತೆಯಲ್ಲಿ ಬಳಲುತ್ತಿದ್ದರು ಎನ್ನಲಾಗುತ್ತಿದೆ. ಗೆಳೆಯ ಕೂಡ ಈ ಸಂದರ್ಭದಲ್ಲಿ ಹೇಳಿಕೆ ನೀಡಿದ್ದು, ಆಕೆಯ ಕೈಯಲ್ಲಿ ಅನೇಕ ಕೆಲಸಗಳು ಇದ್ದವು. ಉದ್ಯೋಗ ಇರಲಿಲ್ಲ ಎನ್ನುವುದು ಸುಳ್ಳು ಎಂದಿದ್ದಾರೆ. ಆಕೆಯ ಆರೋಗ್ಯ ಸರಿಯಿರಲಿಲ್ಲ. ಈ ಬಗ್ಗೆ ತನ್ನ ಬಳಿ ಹೇಳಿಕೊಳ್ಳುತ್ತಿದ್ದಳು ಎಂದು ಸ್ನೇಹಿತ ಹೇಳಿದ್ದಾನೆ. ಇವೆಲ್ಲವುಗಳ ನಡುವೆ ಆಕೆ ಕ್ಯಾನ್ಸರ್​ನಿಂದ ಬಳಲುತ್ತಿದ್ದರು ಎಂದೂ ಹೇಳಲಾಗುತ್ತಿದೆ. ಡೆತ್​ನೋಟ್​ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡೆತ್​ನೋಟ್​ನಲ್ಲಿ ಇನ್ನು ಏನೇನಿದೆ ಎನ್ನುವುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ದೇಹವನ್ನು ಕಳುಹಿಸಲಾಗಿದೆ.
ಮಾಡೆಲಿಂಗ್ ಜತೆ ಹಲವು ವೆಬ್ ಸಿರೀಸ್ ಮತ್ತು ಕಿರುಚಿತ್ರಗಳಲ್ಲೂ ಬಿದಿಶಾ ನಟಿಸಿದ್ದಾರೆ. ಆನಿರ್ಬೇಡ್ ಚಟ್ಟೋಪಾಧ್ಯಾಯ ನಿರ್ದೇಶನದ ‘ಭಾರ್ ದಿ ಕ್ಲೌನ್’ ಕಿರುಚಿತ್ರದಲ್ಲಿ ಇವರು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಒಟ್ಟಿನಲ್ಲಿ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರು ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡ ಬಳಿಕ ಮಾಡೆಲಿಂಗ್​ ಕ್ಷೇತ್ರದಲ್ಲಿ ಸಾವಿನ ಸರಣಿಯೇ ನಡೆದಿದ್ದು, ಮಾಡೆಲಿಂಗ್​ ಜಗತ್ತು ನಿಗೂಢವಾಗುತ್ತಾ ಸಾಗಿದೆ.
7 ಶತಕೋಟಿ ಒಡತಿ ನಟಿ ಐಶ್ವರ್ಯ ರೈ ಪಡೆದ ಮೊದಲ ಸಂಬಳ ಇಷ್ಟೇನಾ… ಮಾಡೆಲಿಂಗ್​ ಅಗ್ರಿಮೆಂಟ್​ ವೈರಲ್​
ಅವನು ನನ್ನವ, ಮದ್ವೆಯಾಗ್ದೇ ಇಲ್ಲಿಂದ ಕದಲಲ್ಲ: ಖ್ಯಾತ ನಟನ ಮನೆ ಮುಂದೆ ಮಧ್ಯರಾತ್ರಿ ನಟಿಯ ಧರಣಿ!
ನಿಮ್​ ಕಥೆ ಮುಗೀತು, ಇಲ್ಲಿ ಕಾಲಿಟ್ಟರೆ ಮರ್ಡರ್ ಆಗ್ತೀರಿ: ನಟಿ, ಸಂಸದೆಗೆ ಜೀವ ಬೆದರಿಕೆ ಕರೆ- ದೂರು ದಾಖಲು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 5 =
Remember me
