ಮುಂಬೈ:ಹಾಟ್‌ ತಾರೆ, ಸೆಕ್ಸಿ ನಟಿ ಎನಿಸಿಕೊಂಡಿರುವ ಬಾಲಿವುಡ್‌ ಬೆಡಗಿಯರ ಪೈಕಿ ದೀಪಿಕಾ ಪಡುಕೋಣೆ ಕೂಡ ಒಬ್ಬರು. ಯಾವುದೇ ಸೀನ್‌ ಆದರೂ ಅಧಿಕ ರೀ ಟೇಕ್‌ ತೆಗೆದುಕೊಳ್ಳದೇ ದೃಶ್ಯವನ್ನು ಮಾಡಿಮುಗಿಸುವ ನಟಿ ಕೂಡ ಎಂಬ ಈಕೆ ಖ್ಯಾತಿ ಪಡೆದಿದ್ದಾರೆ. ಆದರೆ ನಟ ಸಿದ್ಧಾಂತ್‌ ಜತೆಗಿನ ರೊಮಾನ್ಸ್‌ ದೃಶ್ಯವೊಂದರ ಬಗ್ಗೆ ತಮಗಾಗಿರುವ ಅನುಭವವನ್ನು ನಟಿ ಈಗ ಬಿಚ್ಚಿಟ್ಟಾರೆ.
‘ಗೆಹ್ರಿಯಾನ್​’ ಚಿತ್ರದಲ್ಲಿ ದೀಪಿಕಾ ಸಿದ್ಧಾಂತ್‌ ಜತೆಗೆ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾದ ‍ಪ್ರಚಾರದ ವೇಳೆ ಕಿಸ್ಸಿಂಗ್‌ ಸೀನ್‌ ಕುರಿತಾಗಿ ಅವರು ಅನುಭವ ಹಂಚಿಕೊಂಡಿದ್‌ದು ಹೀಗೆ: ‘ಸಾಧಾರಣವಾಗಿ ನಾನು ಯಾವುದೇ ಸೀನ್‌ಗಳಿಗೆ ಅತ್ಯಧಿಕ ರೀಟೇಕ್‌ ತೆಗೆದುಕೊಳ್ಳುವುದಿಲ್ಲ. ಆದರೆ ಸಿದ್ಧಾಂತ್‌ ಜತೆಗಿನ ಕಿಸ್ಸಿಂಗ್‌ ಸೀನ್‌ ಮಾತ್ರ ನನಗೆ ಬಹಳ ತೊಂದರೆಯನ್ನೇ ಕೊಟ್ಟುಬಿಟ್ಟಿತು. ಈ ರೊಮಾನ್ಸ್‌ ಸೀನ್‌ಗೆ ನಾನು 48 ಬಾರಿ ರೀಟೇಕ್‌ ತೆಗೆದುಕೊಳ್ಳಬೇಕಾಯಿತು ಎಂದು ದೀಪಿಕಾ ಹೇಳಿದ್ದಾರೆ.

ಸಿದ್ಧಾಂತ್​ ಜತೆ ಈ ದೃಶ್ಯ ಮಾಡುವುದು ನನಗೆ ಭಾರಿ ಸವಾಲಿನದ್ದಾಗಿತ್ತು. ಅವರ ಜತೆ ಈ ದೃಶ್ಯ ಮಾಡಲು ನನಗೆ ಸಿಕ್ಕಾಪಟ್ಟೆ ಮುಜುಗರವೂ ಉಂಟಾಗಿತ್ತು. ಆದ್ದರಿಂದ ಎಷ್ಟೇ ಸಲ ರೊಮಾನ್ಸ್‌ ಸೀನಿನ ಟೇಕ್‌ ಆದರೂ ಅದು ಸರಿ ಬರುತ್ತಿರಲಿಲ್ಲ. 48ನೇ ಬಾರಿ ಸರಿಯಾಯಿತು ಎಂದಿದ್ದಾರೆ.
ಅಂದಹಾಗೆ ಗೆಹ್ರಿಯಾನ್​ ಚಿತ್ರವು ಬರುವ ಫೆಬ್ರವರಿ 11 ರಂದು ಒಟಿಟಿ ಅಮೆಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗಲಿದೆ. ಅಲ್ಲದೇ, ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದೆ. ಇದರಲ್ಲಿ ದೀಪಿಕಾ ಹೆಚ್ಚಿನ ದೃಶ್ಯಗಳಲ್ಲಿ ತುಂಡುಡುಗೆಯಲ್ಲೇ ಕಾಣಿಸಿಕೊಂಡಿದ್ದಾರೆ.
ವಧು ಡಾನ್ಸ್‌ ಮಾಡಿದ್ದಕ್ಕೆ ವರ ಗರಂ ಆಗಿದ್ದೇ ತಪ್ಪಾಗೋಯ್ತು: ಬೇರೊಬ್ಬನಿಂದ ತಾಳಿಕಟ್ಟಿಸಿಕೊಂಡ ಮದುಮಗಳು!

VIDEO: ಅದ್ಧೂರಿಯಾಗಿ ಮದ್ವೆಯಾಗಲು ಸಿನಿಮೀಯ ಸ್ಟೈಲ್‌ನಲ್ಲಿ ಬ್ಯಾಂಕ್‌ ದರೋಡೆ ಮಾಡಿ ಸಿಕ್ಕಬಿದ್ದ ವಿಜಯಪುರದ ಭೂಪ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
