ಮುಂಬೈ:ಕಳೆದೊಂದು ವರ್ಷದಿಂದ ಭಾರಿ ಚರ್ಚೆಯಲ್ಲಿರುವ ಅದರಲ್ಲಿಯೂ ವಿವಾದದ ಮೂಲಕವೇ ಸುದ್ದಿಯಲ್ಲಿರುವಾಕೆ ಎಂದರೆ ನಟಿ ಕಂಗನಾ. ತಮಗೆ ಅನ್ನಿಸಿದ್ದನ್ನು ಕಟುವಾಗಿ ಟೀಕಿಸುತ್ತಾ ಬರುತ್ತಾ, ಹಲವರ ಕೆಂಗಣ್ಣಿಗೆ ಗುರಿಯಾಗಿ, ಇನ್ನೊಂದೆಡೆ ತಮ್ಮ ಅಭಿಮಾನಿಗಳ ಸಂಖ್ಯೆಯನ್ನು ಬೆಳೆಸಿಕೊಳ್ಳುತ್ತಿರುವ ಕಂಗನಾ ಇದೀಗ ಸ್ವಲ್ಪ ಭಿನ್ನ ಎನಿಸುವ ಪೋಸ್ಟ್‌ ಹಾಕಿದ್ದಾರೆ.
ಈಚೆಗಷ್ಟೇ 1947ರಲ್ಲಿ ನಮಗೆ ಸಿಕ್ಕಿದ್ದು ಭಿಕ್ಷೆಯ ಸ್ವಾತಂತ್ರ್ಯ, 2014ರಲ್ಲಿ ಸಿಕ್ಕಿದ್ದು ನಿಜವಾದ ಸ್ವಾಂತತ್ರ್ಯ ಎನ್ನುವ ಮೂಲಕ ಭಾರಿ ಕೋಲಾಹಲವನ್ನೇ ಸೃಷ್ಟಿಸಿರುವ ಈ ನಟಿ ಇದೀಗ ಪ್ರೀತಿಯ ಬಗ್ಗೆ ಪೋಸ್ಟ್‌ ಮಾಡಿದ್ದು, ಇದರ ಗೂಡಾರ್ಥದ ಕುರಿತಾಗಿ ಚರ್ಚೆ ಶುರುವಾಗಿದೆ.
ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಯುವಕ-ಯುವತಿ ತಬ್ಬಿಕೊಂಡಿರುವ ರೇಖಾಚಿತ್ರವನ್ನು ಪೋಸ್ಟ್‌ ಮಾಡಿರುವ ಕಂಗನಾ ಅದರ ಮೇಲೆ ‘ತೇರೇ ಲಿಯೇ ಹಮ್ ಹೈ ಜಿಯೇ…ಕಿತ್ನೆ ಸಿತಮ್ ಹಮ್ ಪೆ ಸನಮ್’ (ನಿನಗಾಗಿ ನಾನು ಬದುಕಿದೆ, ನನ್ನ ಮೇಲೆ ನೀನೇಕೆ ಈ ರೀತಿ ಅನ್ಯಾಯ ಮಾಡುತ್ತಿರುವೆ ಪ್ರೇಮಿಯೇ) ಎಂದು ಬರೆದುಕೊಂಡಿದ್ದಾರೆ. ಇನ್ನೊಂದರಲ್ಲಿ ತಮ್ಮ ಬಾಲ್ಯದ ಫೋಟೋವನ್ನು ಶೇರ್‌ ಮಾಡಿಕೊಂಡು, ನಾನು ಸಾಧಾರಣ ಹುಡುಗಿ, ನಾನು ಪ್ರೀತಿಯೆಂಬ ಸೌಂದರ್ಯವನ್ನು ನಂಬುತ್ತೇನೆ, ಇದರಿಂದ ನನಗೆ ಸುಂದರವಾದ ಪ್ರಪಂಚ ಸಿಕ್ಕಿದೆ. ಅದರೆ ಇದನ್ನು ಹೊರತುಪಡಿಸಿ ನನ್ನಲ್ಲಿ ಏನೂ ವಿಶೇಷವಿಲ್ಲ’ ಎಂದು ಬರೆದಿದ್ದಾರೆ. ಇದು ಕೂಡ ಒಂದು ರೀತಿಯಲ್ಲಿ ನಿಗೂಢವಾಗಿಯೇ ಇದೆ.
ಈ ಎರಡು ಪೋಸ್ಟ್‌ಗಳ ಅರ್ಥವೇನು? ಕಂಗನಾಗೆ ಕೈಕೊಟ್ಟವರು ಯಾರು? ಯಾರ ಪ್ರೀತಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದೆಲ್ಲಾ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.
ಅಷ್ಟಕ್ಕೂ ಕಂಗನಾ ಅವರ ಪ್ರೀತಿಯ ವಿಷಯಕ್ಕೆ ಬರುವುದಾದರೆ ಇದಾಗಲೇ ಕೆಲವು ನಟರ ಜತೆ ಈಕೆಯ ಹೆಸರು ಥಳಕು ಹಾಕಿಕೊಂಡಿತ್ತು. ಅದರಲ್ಲಿಯೂ ಹೃತಿಕ್‌ ರೋಷನ್‌ ಹಾಗೂ ಕಂಗನಾ ನಡುವಿನ ಸಂಬಂಧ ಹಾಗೂ ನಂತರದ ಜಗಳ ದೊಡ್ಡ ಸುದ್ದಿಯನ್ನೇ ಮಾಡಿತ್ತು. ವಿವಾಹಿತರಾಗಿದ್ದರೂ ಹೃತಿಕ್‌ ರೋಷನ್‌ ತಮ್ಮನ್ನು ಪ್ರೀತಿಸಿ ನಂತರ ಹೇಗೆ ಮೋಸ ಮಾಡಿದ್ದರು ಎಂಬ ಬಗ್ಗೆ ಸಂದರ್ಶನವೊಂದರಲ್ಲಿ ಖುದ್ದು ಕಂಗನಾರೇ ಹೇಳಿಕೊಂಡಿದ್ದರು. ಹೃತಿಕ್‌ ರೋಷನ್‌ ತಂದೆ ಹಾಗೂ ಇತರರಿಂದ ತಮಗೆ ಹೇಗೆ ಜೀವ ಬೆದರಿಕೆ ಬಂತು, ಆ ಸಮಯದಲ್ಲಿ ಹೃತಿಕ್‌ ಎಷ್ಟು ನಿಷ್ಠೂರವಾಗಿ ನಡೆಸಿಕೊಂಡರು ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಹೃತಿಕ್ ಮಾತ್ರವಲ್ಲದೇ, ಇವರ ಹೆಸರು ನಟರಾದ ಆದಿತ್ಯ ಪಂಚೋಲಿ, ಅಧ್ಯಯನ್‌ ಸುಮನ್‌ ಜತೆಗೂ ಕೇಳಿಬಂದಿತ್ತು.
ಒಟ್ಟಿನಲ್ಲಿ ಈಗ ಯಾರ ಬಗ್ಗೆ ಈ ಮಾತು ಆಡಿದ್ದಾರೆ ಎನ್ನುವುದು ನಿಗೂಢವಾಗಿದೆ.
‘ನೈಜ ಹೋರಾಟಗಾರ ನೇತಾಜಿಯನ್ನೇ ಹಸ್ತಾಂತರಿಸಿದ ಕುತಂತ್ರಿಗಳು- ಸಾಕ್ಷಿ ನೋಡಿ… ಇನ್ನೊಂದು ಕೆನ್ನೆ ತೋರಿಸಿದ್ರೆ ಸಿಗೋದು ಭಿಕ್ಷೆ ಅಷ್ಟೇ…’

ನಾನು ಅಜ್ಮಲ್… ನನ್ನ ಡಿಟೇಲ್ಸ್‌ ಇಲ್ಲಿದೆ… ಏನೂ ಮಾಡಲಾರಿರಿ… ಕೌಂಟ್‌ಡೌನ್‌ ಶುರುವಾಗಿದೆ… ಸಿಎಂ ಯೋಗಿಗೆ ಬೆದರಿಕೆ ಪತ್ರ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 − one =
Remember me
