ಮುಂಬೈ:ಹಸಿಬಿಸಿ ದೃಶ್ಯಗಳಿಂದಲೇ ಭಾರಿ ಜನಪ್ರಿಯರಾಗಿರುವ ನಟಿಯೆಂದರೆ ಅದು ಕುಬ್ರಾ ಸೇಠ್​. 38 ವರ್ಷದ ಅವರು ಸಿನಿಮಾ ಜಗತ್ತಿನಲ್ಲಿ ತಮ್ಮ ಮೇಲೆ ಆಗಿರುವ ಅನ್ಯಾಯ, ತಾವು ಎದುರಿಸಿರುವ ನೋವಿನ ಕುರಿತು ‘ಓಪನ್ ಬುಕ್: ನಾಟ್ ಕ್ವಿಟ್ ಎ ಮೆಮೊಯಿರ್’ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಕಳೆದ ತಿಂಗಳು ಈ ಪುಸ್ತಕ ಬಿಡುಗಡೆಯಾಗಿದ್ದರೂ, ಅದರಲ್ಲಿ ಕುಬ್ರಾ ಬರೆದಿರುವ ಒಂದೊಂದು ವಿಷಯಗಳು ಹಂತಹಂತವಾಗಿ ಸುದ್ದಿಯಾಗುತ್ತಿವೆ.
17ನೇ ವಯಸ್ಸಿನಲ್ಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ. ನಾನು ಅಂಕಲ್​ ಎಂದು ಹೇಳುತ್ತಿದ್ದ ವ್ಯಕ್ತಿ ಕಾರಿನಲ್ಲಿ ಹೋಗುವಾಗ ಬಟ್ಟೆಯನ್ನು ಸರಿಸಿ ನನ್ನ ತೊಡೆಯನ್ನು ಸವರುತ್ತಿದ್ದ… ನಮ್ಮ ಮನೆಗೆ ಬಂದು ನನ್ನ ಕೆನ್ನೆಗೆ ಮುತ್ತಿಟ್ಟು ನೀನಂದ್ರೆ ನನಗಿಷ್ಟ ಎನ್ನುತ್ತಿದ್ದ… ಹೋಟೆಲ್​ನಲ್ಲಿ ತುಟಿಗೆ ಚುಂಬಿಸಿ ಪ್ಯಾಂಟ್​ ಬಿಚ್ಚಿದ್ದ… ನಾನಾಗ ಅಸಹಾಯಕಳಾಗಿದ್ದೆ… ಎಂದು ಬರೆದುಕೊಂಡಿರುವ ವಿಷಯ ಸಿನಿ ಜಗತ್ತಿನಲ್ಲಿ ಭಾರಿ ಕೋಲಾಹಲ ಸೃಷ್ಟಿಸಿತ್ತು.
ತಾವು ಬೇರೊಬ್ಬ ವ್ಯಕ್ತಿಯಿಂದ ಗರ್ಭಿಣಿಯಾಗಿದ್ದ ವಿಷಯವನ್ನು ಕುಬ್ರಾ ಈ ಪುಸ್ತಕದಲ್ಲಿ ವಿವರಿಸಿದ್ದು, ಇದೀಗ ಭಾರಿ ವೈರಲ್​ ಆಗಿದೆ. ‘ಒನ್ ನೈಟ್ ಸ್ಟ್ಯಾಂಡ್’ ಎಂಬ ಶೀರ್ಷಿಕೆಯಡಿ ಗರ್ಭಿಣಿಯಾದ ವಿಷಯವನ್ನು ಅವರು ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ.
2013ರಲ್ಲಿ ನಡೆದ ಘಟನೆ ಇದು. ಆ ದಿನಗಳಲ್ಲಿ ನನಗೆ 30 ವರ್ಷ ವಯಸ್ಸು. ಅಂಡಮಾನ್​ ಪ್ರವಾಸದಲ್ಲಿದ್ದೆ. ಒಬ್ಬ ವ್ಯಕ್ತಿಯ ಜತೆ ಒಂದು ರಾತ್ರಿ ಹೋಟೆಲ್​ನಲ್ಲಿ ಉಳಿದಿದ್ದೆ. ನಾನೇನೂ ತಾಯಿಯಾಗಲು ಸಿದ್ಧವಿರಲಿಲ್ಲ. ಆದರೆ ಆ ರಾತ್ರಿ ನಡೆದ ಘಟನೆಯಿಂದ ನಾನು ಗರ್ಭ ಧರಿಸಿದೆ. ಆದರೆ ಆ ಮಗು ನನಗೆ ಬೇಡವಾಗಿತ್ತು ಎಂದು ಅದರಲ್ಲಿ ಬರೆದುಕೊಂಡಿದ್ದಾರೆ. ಆದರೆ ಆ ವ್ಯಕ್ತಿ ಯಾರು ಎನ್ನುವುದನ್ನು ಉಲ್ಲೇಖಿಸಲಿಲ್ಲ.
ಆದ್ದರಿಂದ ನಾನು ಗರ್ಭಪಾತ ಮಾಡಿಸಿಕೊಂಡೆ. ಆ ವಿಷಯದ ಕುರಿತು ಈಗ ಯೋಚನೆ ಮಾಡಿದರೆ ನಾನು ಮಾಡಿದ್ದು ತಪ್ಪು ಎಂದು ನನಗೆ ಅನ್ನಿಸುತ್ತಲೇ ಇಲ್ಲ. ಏಕೆಂದರೆ ಆ ಮಗು ನನಗೆ ಬೇಕೋ ಬೇಡವೋ ಎನ್ನುವುದಕ್ಕಿಂತ ಮುಖ್ಯವಾಗಿ ಹೀಗೆ ಹುಟ್ಟಿದ ಮಗು ಸಮಾಜಕ್ಕೆ ಬೇಡ. ಆದ್ದರಿಂದ ನಾನು ಗರ್ಭಪಾತ ಮಾಡಿಸಿಕೊಂಡಿರುವುದಕ್ಕೆ ಪಶ್ಚಾತ್ತಾಪ ಇಲ್ಲ ಎಂದಿದ್ದಾರೆ.
ಬಟ್ಟೆ ಸರಿಸಿ ತೊಡೆ ಸವರುತ್ತಿದ್ದ.. ತುಟಿಗೆ ಚುಂಬಿಸಿ ಪ್ಯಾಂಟ್​ ಬಿಚ್ಚಿದ್ದ… ಬೆಂಗ್ಳೂರಲ್ಲಿ ಬಾಲಿವುಡ್​ ನಟಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ

VIDEO: ಟೈಲರ್​ ರುಂಡ ತುಂಡರಿಸಿದವರು ಮಕ್ಕಳು, ಕ್ಷಮಿಸಿಬಿಡೋಣ ಎಂದ್ರಾ ರಾಹುಲ್​ ಗಾಂಧಿ? ವಿಡಿಯೋದಲ್ಲಿ ಇರೋದೇನು?

ಎಳವೆಯಲ್ಲಿಯೇ ಕನ್ನಡಿಗರ ಹೃದಯಗೆದ್ದು ಅಗಲಿದ ಪುಟಾಣಿ ಸಮನ್ವಿ ಮನೆಗೆ ಪುಟ್ಟ ಕಂದನ ಆಗಮನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
