ಕೋಲ್ಕತಾ:ಎರಡು ಡೋಸ್‌ ಲಸಿಕೆ ಹಾಕಿಸಿಕೊಂಡು, ಮನೆಯಲ್ಲಿಯೇ ಇದ್ದೆ, ಹೊರಗಡೆ ಎಲ್ಲಿಯೂ ಹೋಗಲಿಲ್ಲ, ಸಾರ್ವಜನಿಕರ ಸ್ಥಳಗಳಿಗೆ ಭೇಟಿ ಕೊಟ್ಟಿಲ್ಲ. ಆದರೂ ಕರೊನಾ ಸೋಂಕು ಹೇಗೆ ತಗುಲಿತು ಎಂದು ಬಂಗಾಳಿ ನಟಿ, ರಾಜಕಾರಣಿ ಮಿಮಿ ಚಕ್ರವರ್ತಿ ತಲೆ ಕೆಡಿಸಿಕೊಂಡಿದ್ದಾರೆ.
ಮಿಮಿ ಚಕ್ರವರ್ತಿ ಪಶ್ಚಿಮಬಂಗಾಳದ ತೃಣಮೂಲ ಕಾಂಗ್ರೆಸ್​ನ ಸಂಸದೆ. ಇವರು ಬಂಗಾಳಿಯ ಪ್ರಸಿದ್ಧ ಚಲನಚಿತ್ರ ನಟಿ ಕೂಡ. ತಮಗೆ ಕರೊನಾ ಸೋಂಕು ಬಂದಿರುವ ಕುರಿತು ಅವರು ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ‘ನನಗೆ ತುಂಬಾ ಅಚ್ಚರಿಯಾಗುತ್ತಿದೆ. ಕೆಲ ದಿನಗಳ ಹಿಂದೆ ಕರೊನಾ ಪರೀಕ್ಷೆ ಮಾಡಿಸಿಕೊಂಡಿದ್ದೆ. ನೆಗೆಟಿವ್‌ ಬಂದಿತ್ತು. ಆ ದಿನದಿಂದ ಎಲ್ಲಿಯೂ ಹೊರಗಡೆ ಹೋಗಲಿಲ್ಲ, ಸಾರ್ವಜನಿಕ ಸಭೆ ಸಮಾರಂಭಗಳಿಗೂ ಹಾಜರು ಆಗಲಿಲ್ಲ, ಶೂಟಿಂಗೂ ಇರಲಿಲ್ಲ. ಎರಡೂ ಡೋಸ್‌ ವ್ಯಾಕ್ಸಿನ್‌ ಹಾಕಿಸಿಕೊಂಡಿರುವೆ. ಹೀಗಿದ್ದರೂ ಈಗ ಸೋಂಕು ತಗುಲಿರುವುದು ಹೇಗೆ ಎನ್ನುವುದೇ ತಿಳಿಯುತ್ತಿಲ್ಲ’ ಎಂದಿದ್ದಾರೆ ನಟಿ.
ಕರೊನಾ ಲಕ್ಷಣ ಕಾಣಿಸಿಕೊಂಡಿದ್ದರಿಂದ ಈಗ ಟೆಸ್ಟ್‌ ಮಾಡಿಸಿಕೊಂಡೆ. ವಿಚಿತ್ರ ಎನ್ನಿಸುತ್ತಿದೆ. ವೈದ್ಯರು ಮನೆಯಲ್ಲೇ ಐಸೋಲೇಟ್​ ಆಗಿ ಎಂದಿದ್ದಾರೆ ಎಂದಿರುವ ಮಿಮಿ, ದಯವಿಟ್ಟು ಎಲ್ಲರೂ , ಕೊವಿಡ್​ 19 ನಿಯಂತ್ರಿತ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿ. ಮಾಸ್ಕ್​​ನ್ನು ಧರಿಸಿಯೇ ಓಡಾಡಿ, ಸುರಕ್ಷಿತವಾಗಿರಿ. ನನ್ನ ಪಾಲಿಗೆ ಕರೊನಾ ಅತ್ಯಂತ ಕೆಟ್ಟದಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ.
ಮಿಮಿಯವರು ಕಳೆದ ಜೂನ್‌ನಲ್ಲಿ ಕರೊನಾ ಲಸಿಕೆ ಪಡೆದ ನಂತರ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಬಳಿಕ ನಿರ್ಜಲೀಕರಣ ಮತ್ತು ತೀವ್ರ ಹೊಟ್ಟೆನೋವು ಉಂಟಾಗಿತ್ತು. ರಕ್ತದೊತ್ತಡ ಕೂಡ ತೀವ್ರವಾಗಿ ಕುಸಿದಿತ್ತು. ಚಿಕಿತ್ಸೆ ಮಾಡಲಾಗಿತ್ತು. ತಮಗೆ ನೀಡಿರುವುದು ನಕಲಿ ಲಸಿಕೆ ಎಂದು ಹೇಳಿದ್ದರು. ಆದರೆ ವೈದ್ಯರು ಅದನ್ನು ಅಲ್ಲಗಳೆದಿದ್ದರು.
VIDEO: ತಾನು ಬಿಡೋ ‘ವಾಯು’ ಮಾರಿ ಕೋಟಿ ಕೋಟಿ ಸಂಪಾದಿಸ್ತಿರೋ ನಟಿಗೆ ಹೃದಯಾಘಾತ- ಐಸಿಯುಗೆ ದಾಖಲು

ಪೆಟ್ರೋಲೂ ಬೇಡ… ಚಾರ್ಜ್‌ ಮಾಡೋ ಅಗತ್ಯನೂ ಇಲ್ಲ- ಓಡ್ತಾ ಓಡ್ತಾ ಚಾರ್ಜ್‌ ಆಗತ್ತೆ ಈ ಇ- ಬೈಕ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
