ಮುಂಬೈ:ನಾನು 34 ವರ್ಷದವಳಿದ್ದಾಗಲೇ ನನ್ನ ಅಂಡಾಣುವನ್ನು ಫ್ರೀಜ್​ ಮಾಡಿಟ್ಟಿದ್ದೇನೆ. ಸದ್ಯ ಅಂತೂ ಮಗು ಬೇಡ. ಮಗು ಬೇಕು ಎನ್ನುವ ಆತುರದಿಂದ ನಿರಾಳವಾಗಿದ್ದೇನೆ. ಗಂಡನ ಜತೆ ನೆಮ್ಮದಿಯಿಂದ ಇದ್ದು, ಜಗತ್ತನ್ನು ಸುತ್ತುವ ಆಸೆ ಎಂದಿದ್ದಾರೆ ಖ್ಯಾತ ನಟಿ ಮೋನಾ ಸಿಂಗ್​.
ಕಿರುತೆರೆಯ ಅನೇಕ ಧಾರಾವಾಹಿಗಳಲ್ಲಿ ನಟಿಸಿ, ಮನೆಮಾತಾಗಿರುವ 39 ವರ್ಷದ ಮೋನಾ ಸಿಂಗ್​, ಹಿರಿತೆರೆಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇದೀಗ ವೆಬ್​ ಸಿರೀಸ್​ನಲ್ಲಿ ತೊಡಗಿಸಿಕೊಂಡಿದ್ದು, ತಮ್ಮ ತಾಯ್ತನದ ಕುರಿತು ಮಾತನಾಡಿದ್ದಾರೆ.
ಮೋನಾ ಸಿಂಗ್​ಗೆ ಕಳೆದ ವರ್ಷವಷ್ಟೇ ಮದುವೆಯಾಗಿದೆ. ಆದ್ದರಿಂದ ಸದ್ಯ ಗಂಡನ ಜತೆ ಸಿಕ್ಕಾಪಟ್ಟೆ ತಿರುಗಾಡುವ ಹಂಬಲ ಈಕೆಗಿದೆಯಂತೆ. ಆದ್ದರಿಂದ ಸದ್ಯ ತನಗೆ ಮಗುವಿನ ಯೋಚನೆ ಇಲ್ಲ. ತನ್ನ ಅಂಡಾಣುಗಳನ್ನು ಐದು ವರ್ಷಗಳ ಹಿಂದೆಯೇ ಫ್ರೀಜ್​ ಮಾಡಿಟ್ಟಿದ್ದು, ಬೇಕೆಂದಾಗ ಮಗುವನ್ನು ಪಡೆಯುವೆ ಎಂದಿದ್ದಾರೆ.
ಮದುವೆಯಾಗಲು ವಿಳಂಬವಾಗಿದೆ. ವಯಸ್ಸಾದ ಮೇಲೆ ಮಗು ಪಡೆಯುವುದು ಕಷ್ಟ ಎಂದು ಗೊತ್ತು. ಅದೇ ಕಾರಣಕ್ಕೆ 34ನೇ ವಯಸ್ಸಿನಲ್ಲಿಯೇ ಅಂಡಾಣುವನ್ನು ಫ್ರೀಜ್​ ಮಾಡಲು ನಿರ್ಧರಿಸಿದೆ. ಈ ವಿಷಯವನ್ನು ಅಮ್ಮನ ಬಳಿ ಹೇಳಿದಾಗ ಆಕೆಯೂ ತುಂಬಾ ಖುಷಿಪಟ್ಟರು. ಆದ್ದರಿಂದ ಅಮ್ಮನನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿ ಅಂಡಾಣು ಫ್ರೀಜ್​ ಮಾಡಿ ಬಂದಿದ್ದೇನೆ ಎನ್ನುತ್ತಾರೆ ಮೋನಾ.
ಇದನ್ನೂ ಓದಿ:ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್​ ಸ್ಥಿತಿ ಗಂಭೀರ
ಆ ಪ್ರಕ್ರಿಯೆಯಿಂದಾಗಿ ಐದು ತಿಂಗಳು ನಾನು ಎಲ್ಲವುಗಳಿಂದ ದೂರವಿದ್ದೆ. ಏಕೆಂದರೆ ಅಂಡಾಣು ಫ್ರೀಜ್​ ಮಾಡುವುದು ತುಂಬಾ ದಿನಗಳ ಪ್ರಕ್ರಿಯೆಯಾಗಿದ್ದು, ನಾನಾ ರೀತಿಯ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ನಾನು ಯಶಸ್ವಿಯಾಗಿ ಅದನ್ನು ಫ್ರೀಜ್​ ಮಾಡಿರುವ ಕಾರಣ ಸದ್ಯ ನಿರಾಳವಾಗಿದ್ದೇನೆ ಎನ್ನುತ್ತಾರೆ ನಟಿ.
ಇಲ್ಲಿಯವರೆಗೆ ಕುಟುಂಬದವರ ಜತೆ ಅನೇಕ ದೇಶಗಳ ಸಂಚಾರ ಮಾಡಿದ್ದೇನೆ. ಕಳೆದ ವರ್ಷವಷ್ಟೇ ಮದುವೆಯಾಗಿರುವ ಕಾರಣ, ಈಗ ಗಂಡನ ಜತೆ ಲೋಕಸಂಚಾರ ಮಾಡುವ ಆಸೆ. ಆದ್ದರಿಂದ ಸದ್ಯ ಅಂತೂ ಮಗುವಿನ ಯೋಚನೆ ಮಾಡಿಲ್ಲ. ಮುಂದೆ ಯೋಚನೆ ಬಂದಾಗ ಮುಂದಿನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವೆ ಎಂದಿದ್ದಾರೆ.
ಮೋನಾ ಸಿಂಗ್​ ಜಸ್ಸಿ, ಕವಚ್​… ಕಾಲಿ ಶಕ್ತಿಯೋಂಸೆ, ಪ್ಯಾಕೋ ಹೋ ಜಾನೇ ದೋ, ಕ್ಯಾ ಹುವಾ ತೆರಾ ವಾದಾ, ರಾಧಾ ಕಿ ಬೇಟಿಯಾ ಕುಛ್​ ಕರ್​ ದಿಖಾಯೇಂಗೆ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಮಾಮ್​ ಮಿಷನ್​ ಓವರ್​ ಮಾರ್ಸ್​ ವೆಬ್​ಸಿರೀಸ್​ನಲ್ಲಿ ಬಿಜಿಯಾಗಿದ್ದಾರೆ. ನೃತ್ಯಪಟು ಕೂಡ ಆಗಿರುವ ಮೋನಾ, ಪ್ರಸಿದ್ಧ ಡಾನ್ಸ್​ ರಿಯಾಲಿಟಿ ಷೋ ಝಲಕ್​ ದಿಖಲಾಜಾಯೆ ವಿಜೇತೆ ಕೂಡ. ತ್ರೀ ಈಡಿಯಟ್ಸ್​ ಚಿತ್ರದಲ್ಲಿ ಇವರು ನಾಯಕಿಯ ಅಕ್ಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಜಾನ್​​ಸನ್​ ಪೌಡರ್​ನಿಂದ ಕ್ಯಾನ್ಸರ್​: ₹890 ಕೋಟಿ ಪರಿಹಾರಕ್ಕೆ ‘ಸುಪ್ರೀಂ’ ಆದೇಶ

ಕಾಂಗ್ರೆಸ್‌ ಮುಖಂಡನ ಪತ್ನಿ ಜತೆ ಇನ್ನೋರ್ವ ಕಾಂಗ್ರೆಸ್‌ ಮುಖಂಡ ಪರಾರಿ! ಬಯಲಾಯ್ತು ಸತ್ಯ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve − eight =
Remember me
